ಚಾಮರಾಜನಗರ : ಬೆಳೆ ಕಾವಲು ಕಾಯುತ್ತಿದ್ದ ರೈತನ ಮೇಲೆ ಕಾಡಾನೆ ದಾಳಿ ಮಾಡಿರುವ ಘಟನೆ ಹನೂರು ತಾಲೂಕಿನ ಜಲ್ಲಿಪಾಳ್ಯ ಗ್ರಾಮದಲ್ಲಿ ನಡೆದಿದೆ.
ರೈತ ಚಿನ್ನಪ್ಪ ಗಾಯಗೊಂಡ ವ್ಯಕ್ತಿ. ಕಾಡಾನೆಗಳು ಆಗಾಗ್ಗೆ ಜಮೀನಿಗೆ ನುಗ್ಗಿ ಬೆಳೆ ಹಾನಿ ಮಾಡುತ್ತಿದ್ದವು. ಈ ಬಾರಿ ಜಮೀನಿಗೆ ನುಗ್ಗಿದ ಆನೆಯೂ ಬೆಳೆ ನಾಶ ಮಾಡಿದ್ದಲ್ಲದೇ ರೈತನ ಮೇಲೆ ದಾಳಿ ಮಾಡಿದೆ. ಇದರ ಪರಿಣಾಮ ಗಂಭೀರ ಗಾಯಗಳಾಗಿವೆ. ಇದೀಗ ಗಾಯಾಳುವನ್ನು ತಮಿಳುನಾಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ : ದೇವರಾಯನದುರ್ಗ ಅರಣ್ಯದಲ್ಲಿ 11 ಮಂಗಗಳ ನಿಗೂಢ ಸಾವು | ಸಾರ್ವಜನಿಕರಲ್ಲಿ ಆತಂಕ



















