ಬಳ್ಳಾರಿ: ಬಳ್ಳಾರಿ ಜನರ ಆಶೀರ್ವಾದ ಪಡೆದ ಕಾಂಗ್ರೆಸ್, ಈಗ ಬಳ್ಳಾರಿಯನ್ನು ಮುಗಿಸಲು ಸಂಚು ಹಾಕುತ್ತಿದೆ. ಭರತ್ ರೆಡ್ಡಿ ನೀನು ಚಿಕ್ಕವ, ನಿನಗೆ ತಿಳುವಳಿಕೆ ಬೇಕು. ನನ್ನ ಹತ್ತಿರ ಬಂದರೆ ಟ್ರೈನಿಂಗ್ ಕೊಡುತ್ತೇನೆ. ಈಗಾಗಲೇ ನಾಲ್ಕು ಗನ್ ಮ್ಯಾನ್ಗಳನ್ನು ಬಂಧಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಸರಿಯಾಗಿ ತನಿಖೆ ನಡೆಸಲಿ. ಅಮಾಯಕ ಸಾವನ್ನಪ್ಪಿದ್ದಾನೆ, ಅದು ನಿಮ್ಮಿಂದಾಗಿದೆ. ಜನಾರ್ದನ ರೆಡ್ಡಿಯನ್ನು ಟಾರ್ಗೆಟ್ ಮಾಡಿದ್ದೀರಿ. ನೀವು ಉದ್ದಾರ ಆಗಲ್ಲ ಎಂದು ಮಾಧ್ಯಮಗೋಷ್ಠಿಯಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ ಕಿಡಿಕಾರಿದ್ದಾರೆ.
ಬಿಜೆಪಿ ನಾಯಕರ ಜಂಟಿ ಮಾಧ್ಯಮಗೋಷ್ಠಿ ಮಾತನಾಡಿದ ವಿ.ಸೋಮಣ್ಣ ಕಾಂಗ್ರೆಸ್ ಕೆಟ್ಟ ಸಂದೇಶ ನೀಡಲು ಬಳ್ಳಾರಿಯನ್ನು ಊರುಗೋಲು ಮಾಡಿಕೊಂಡಿದ್ದಾರೆ. ಸಿದ್ದರಾಮಯ್ಯ ಅಧಿಕಾರಕ್ಕೆ ಬರಲು ಬಳ್ಳಾರಿ ಜನರೇ ಕಾರಣ. ಜನಾರ್ದನ ರೆಡ್ಡಿಯನ್ನು ಟಾರ್ಗೆಟ್ ಮಾಡಿಕೊಂಡು ಅವರ ಕುಟುಂಬ ನಿರ್ನಾಣ ಮಾಡಲು ಹೊರಟಿದ್ದಾರೆ. ಪಾಪದ ಕೊಡ ಇಲ್ಲಿಂದಲೇ ತುಂಬಿದೆ. ವಾಲ್ಮೀಕಿ ಪುತ್ಥಳಿ ನೆಪವಾಗಿಟ್ಟುಕೊಂಡು ಗಲಾಟೆ ಮಾಡಿದ್ದಾರೆ. ನನ್ನ 45 ವರ್ಷದ ರಾಜಕೀಯ ಇತಿಹಾಸದಲ್ಲಿ ಇಂತಹ ದುರ್ಘಟನೆಯನ್ನು ನೋಡಿಲ್ಲ ಎಂದಿದ್ದಾರೆ.
ಜನಾರ್ದನ ರೆಡ್ಡಿ ಮೇಲೆ ಗುರಿ ಇಟ್ಟು ಹೋಡೆಯೋಕೆ ಹೋಗಿದ್ದರು. ಆ ಹುಡುಗನ ಮೇಲೆ ಬಿದ್ದಿದೆ. ಸಿಎಂ, ಗೃಹಮಂತ್ರಿಗಳಿಗೆ ಒತ್ತಾಯ ಮಾಡುತ್ತೇನೆ. ಕೂಡಲೇ ತನಿಖೆ ಮಾಡಿ. ಇಲ್ಲವಾದರೆ ಹೈಕೋರ್ಟ್ ಸಿಟ್ಟಿಂಗ್ ಜಡ್ಜ್ ನೇತೃತ್ವದಲ್ಲಿ ತನಿಖೆ ಮಾಡಿಸಲಿ. ಜನಾರ್ದನ ರೆಡ್ಡಿಗೆ ಝಡ್ ಫ್ಲಸ್ ಭದ್ರತೆ ಚಿಂತನೆ ನಡೆದಿದೆ. ಕೇಂದ್ರ ಗೃಹ ಕಚೇರಿ ಸೂಕ್ಷ್ಮವಾಗಿ ಗಮನಿಸುತ್ತಿದೆ. ಅಗತ್ಯ ಬಿದ್ದಾಗ ಭದ್ರತೆ ನೀಡಲು ಮುಂದಾಗುತ್ತೇವೆ. ಅದಕ್ಕೂ ಮುನ್ನ ಇಲ್ಲಿನ ದೊಂಬರಾಟಕ್ಕೆ ಕಡಿವಾಣ ಬೀಳಬೇಕು. ಗೃಹಮಂತ್ರಿದು ಪಾಪ ಏನೂ ನಡೆಯುತ್ತಿಲ್ಲ, ಅಮಾಯಕರು ಅವರು. ದ್ವೇಷ ಭಾಷಣ ಮಸೂದೆ ಅಡಿಯಲ್ಲಿ ಯಾಕೆ ಇವರನ್ನು ಅರೆಸ್ಟ್ ಮಾಡಿಲ್ಲ?. ಡಿಕೆಶಿ ಅವರೂ ಇಂತಹ ಸಮಯದಲ್ಲಿ ಅವರೊಂದಿಗೆ ನಿಲ್ಲಬಾರದು ಎಂದು ಆಕ್ರೋಶಿಸಿದ್ದಾರೆ.
ಇದನ್ನೂ ಓದಿ : SP ಪವನ್ ಬರೆದ ಡೆತ್ ನೋಟ್ ಮುಚ್ಚಿಡ್ತಿರೋದೇಕೆ? | ಸರ್ಕಾರದ ವಿರುದ್ಧ ಶೋಭಾ ಕರಂದ್ಲಾಜೆ ಆರೋಪ



















