ಬೆಂಗಳೂರು:”ನಮಗಿರುವ ಮಾಹಿತಿ ಪ್ರಕಾರ, ಎಸ್‌ಪಿ ಪವನ್ ನೆಜ್ಜೂರು ಡೆತ್ ನೋಟ್ ಬರೆದಿದ್ದಾರೆ. ಸಚಿವ ಜಮೀರ್ ಅಹಮದ್ ಖಾನ್ ಬಿಡ್ಡಿಂಗ್ ಕಾರಣಕ್ಕೆ ಪವನ್ ಸಸ್ಪೆಂಡ್ ಆಗಿದ್ದಾರೆ” ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಗಂಭೀರ ಆರೋಪ ಮಾಡಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಎಸ್‌ಪಿ ಯಾಕೆ ಆತ್ಮಹತ್ಯೆಗೆ ಯತ್ನಿಸಿದ್ರು?. ಯಾಕೆ ಅಮಾನತಾದ್ರು?. ಜಮೀರ್ ಅವರು ಬಳ್ಳಾರಿ ಎಸ್‌ಪಿ ಪೋಸ್ಟ್ಗೆ ಎಷ್ಟು ಬಿಡ್ ಮಾಡಿದ್ರು?. ಡೆತ್ ನೋಟ್ನಲ್ಲಿ ಹಿರಿಯ ಅಧಿಕಾರಿಗಳ ಹೆಸರಿದೆ ಅನ್ನೋ ಮಾಹಿತಿಯಿದೆ. ಪವನ್ ಬರೆದ ಡೆತ್ ನೋಟ್ ಮುಚ್ಚಿಡ್ತಿರೋದೇಕೆ?” ಎಂದು ಆಕ್ರೋಶಿಸಿದರು.
ಶಾಸಕ ಭರತ್ ರೆಡ್ಡಿ ಮೇಲೆ ಇನ್ನೂ ಏಕೆ ಕ್ರಮ ತೆಗೆದುಕೊಂಡಿಲ್ಲ?. ನಿನ್ನೆ ಸಿಎಂ ಅವರನ್ನು ಭರತ್ ರೆಡ್ಡಿ ಭೇಟಿ ಮಾಡಿದ್ದಾರೆ. ಸಿಎಂ ಅವರು ಎಫ್ಐಆರ್ ಆದ ಭರತ್ ರೆಡ್ಡಿ ಜತೆ ಕುಳಿತು ಯಾಕೆ ಮಾತಾಡಿದ್ರು?. ಈ ಪ್ರಕರಣದಲ್ಲಿ ನ್ಯಾಯ ಸಿಗುತ್ತಾ? ಆ ಡೆತ್ ನೋಟ್ನಲ್ಲಿ ಏನಿದೆ?. ಹಿರಿಯ ಅಧಿಕಾರಿಗಳು ತುಮಕೂರಿಗೆ ಹೋಗಿದ್ದೇಕೆ?. ತುಮಕೂರು ಫಾರ್ಮ್ ಹೌಸ್‌ನಲ್ಲಿ ಏನಾಗ್ತಿದೆ?. ಪವನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಯಾಕೆ ತಗೊಂಡ್ರು?. ಅವರ ತಂದೆಯಿಂದ ಪ್ರೆಸ್ ರಿಲೀಸ್ ಯಾಕೆ ಮಾಡಿದ್ರು?. ನಿಮ್ಮ ಗೂಂಡಾ ಶಾಸಕರನ್ನು ರಕ್ಷಣೆ ಮಾಡಲು ಹೊರಟಿದ್ದೀರಾ?. ಪವನ್ ನೆಜ್ಜೂರ್ಗೆ ನ್ಯಾಯ ಬೇಕಾಗಿದೆ. ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳ ನೈತಿಕತೆ ಕುಗ್ಗಿಸುವ ಕೆಲಸ ಆಗ್ತಿದೆ. ಬೆಂಗಳೂರಿನಲ್ಲಿ ಮನೆ ಕೊಡಲು ಬಿಡ್ಡಿಂಗ್ ನಡೀತಿದೆ. ಇಲ್ಲೂ ಬಿಡ್ಡಿಂಗ್ ಅಲ್ಲೂ ಬಿಡ್ಡಿಂಗ್. ಪವನ್ ಅಮಾನತು, ಆತ್ಮಹತ್ಯೆ ಯತ್ನಕ್ಕೆ ಸರ್ಕಾರ ಉತ್ತರ ಕೊಡಬೇಕು” ಎಂದು ಆಗ್ರಹಿಸಿದರು.
ಸಿದ್ದರಾಮಯ್ಯ ಸರ್ಕಾರ ಬಂದಾಗೆಲ್ಲ ಅಧಿಕಾರಿಗಳು ಬಲಿಯಾಗ್ತಾರೆ. ಈ ಹಿಂದೆ ಡಿವೈಎಸ್‌ಪಿ ಗಣಪತಿ, ಡಿ.ಕೆ.ರವಿ ಆತ್ಮಹತ್ಯೆ ಮಾಡಿಕೊಂಡ್ರು. ಇವರು ಸಿಎಂ ಆದಾಗಲೆಲ್ಲ ಅಧಿಕಾರಿಗಳಿಗೆ ಕಿರುಕುಳ. ಬಳ್ಳಾರಿ ಗಲಾಟೆ ಪ್ರಕರಣದಲ್ಲಿ ಪವನ್ ನೆಜ್ಜೂರು ಮಾಡಿದ ತಪ್ಪೇನು?. ಅವರು ಚಾರ್ಜ್ ತಗೊಂಡ ಕೆಲವೇ ಗಂಟೆಯಲ್ಲಿ ಬ್ಯಾನರ್ ಗಲಭೆ, ಕಲ್ಲು ತೂರಾಟ ಆಗುತ್ತದೆ. ಶಾಸಕನ ಆಪ್ತ ಅಲ್ಲೇ ಕುಳಿತು ಬ್ಯಾನರ್ ಹಾಕಿ ಗೂಂಡಾಗಿರಿ ಮಾಡಿದ್ದ. ಇನ್ನೊಬ್ಬರ ಮನೆ ಮುಂದೆ ಬ್ಯಾನರ್ ಹಾಕಲು ಸತೀಶ್ ರೆಡ್ಡಿ ಯಾರು?. ಸತೀಶ್ ರೆಡ್ಡಿ ಅವರ ಗನ್ ಮ್ಯಾನ್ ಗುಂಡಿಗೆ ರಾಜಶೇಖರ್ ಅನ್ನೋ ವ್ಯಕ್ತಿ ಸತ್ರು, ಯಾಕೆ ಇನ್ನೂ ಕ್ರಮ ತಗೊಂಡಿಲ್ಲ” ಎಂದು ಪ್ರಶ್ನಿಸಿದರು.
ಸಿಎಂ ಅಧಿಕಾರಿಗಳ ಸಭೆ ಮಾಡಲ್ಲ ಯಾಕೆ?. ಅಧಿಕಾರಿಗಳ ಕಲೆಕ್ಷನ್ ಹೆಚ್ಚಾಗಿದೆ, ಸರ್ಕಾರ ಅವರಿಗೆ ಟಾರ್ಗೆಟ್ ಕೊಟ್ಟಿದೆ. ಬೆಂಗಳೂರಿನಲ್ಲಿ ಫ್ಲೈ ಒವರ್‌ಗಳಲ್ಲೂ ಟ್ರಾಫಿಕ್ ಜಾಮ್ ಇರುತ್ತೆ, ಯಾಕೆಂದರೆ ಅಲ್ಲೂ ಪೊಲೀಸರು ಕಲೆಕ್ಷನ್ ಮಾಡಿರುತ್ತಾರೆ. ರೆಡ್ಡಿಯವರು ಬಳ್ಳಾರಿಗೆ ಬಂದ ಮೇಲೆ ಗಲಾಟೆಗಳಾಗ್ತಿವೆ ಅಂತಿದ್ದಾರಲ್ಲ. ಮೊನ್ನೆ ಗಲಾಟೆ ಮಾಡಿದವರು ಯಾರು?. ಕಾಂಗ್ರೆಸ್ ಶಾಸಕ ತಾನೇ?. ಪವನ್ ನೆಜ್ಜೂರು ಗಲಾಟೆ ಮಧ್ಯೆ ಇದ್ರು. ಅವರು ಗಲಾಟೆ ಕಂಟ್ರೋಲ್ ಮಾಡ್ತಿದ್ರು. ಆ ಸಂದರ್ಭದಲ್ಲಿ ಹಿರಿಯ ಅಧಿಕಾರಿಗಳ, ಶಾಸಕರ ಫೋನ್ ಸ್ವೀಕರಿಸಲು ಆಗಿಲ್ಲ. ಗಲಾಟೆ ನಿಯಂತ್ರಿಸಬೇಕೋ? ಇವರ ಕಾಲ್ ಸ್ವೀಕರಿಸಬೇಕೋ?. ಈ ಕಾರಣಕ್ಕೆ ಅಮಾನತು ಮಾಡಿದ್ರಾ” ಎಂದು ಪ್ರಶ್ನಿಸಿದರು.
ಭರತ್ ರೆಡ್ಡಿಗೆ ಎಷ್ಟು ಅಹಂಕಾರ ಅಂದ್ರೆ ಬಳ್ಳಾರಿಗೇ ಬೆಂಕಿ ಇಡ್ತೀನಿ ಅಂದಿದ್ದಾರೆ. ಇವರು ಮೊದಲ ಬಾರಿಯ ಶಾಸಕ, ಬೆಳೆಯಲು ಅವಕಾಶ ಇತ್ತು. ದ್ವೇಷ ಭಾಷಣ ಮಸೂದೆ ತರಲು ಹೊರಟಿದ್ದಾರಲ್ಲ. ಕೇಸ್ ಹಾಕಿ ಇವರ ಮೇಲೆ. ಬಿಜೆಪಿಯವರನ್ನು ಟಾರ್ಗೆಟ್ ಮಾಡಲು ದ್ವೇಷ ಭಾಷಣ ಬಿಲ್ ತರ್ತಿದ್ದಾರೆ. ಆದ್ರೆ ಇವರೇ ದ್ವೇಷ ಭಾಷಣ ಮಾಡ್ತಿದ್ದಾರೆ. ಪರಮೇಶ್ವರ್ ಅವರಿಗೆ ಬೇರೆಲ್ಲ ಗೊತ್ತಿರಲ್ಲ, ಏನೇ ಕೇಳಿದ್ರೂ ಗೊತ್ತಿಲ್ಲ ಗೊತ್ತಿಲ್ಲ ಅಂತಾರೆ. ಆದ್ರೆ ಬಳ್ಳಾರಿ ಎಸ್‌ಪಿ ಆವತ್ತು ಕುಡಿದು ಮಲಗಿದ್ರು ಅನ್ನೋದು ಗೊತ್ತಾಗುತ್ತೆ, ಹೇಗಿದೆ ನೋಡಿ ಎಂದು ಲೇವಡಿ ಮಾಡಿದರು.
ಯಲ್ಲಾಪುರ ಹಿಂದೂ ಯುವತಿ ಕೊಲೆ ಪ್ರಕರಣ:
ರಾಜ್ಯದಲ್ಲಿ ಹೆಣ್ಣುಮಕ್ಕಳ ಹತ್ಯೆ ಆಗ್ತಿದೆ. ಹೆಣ್ಣುಮಕ್ಕಳ ನಾಪತ್ತೆ ಆಗ್ತಿದೆ. ಏನು ಮಾಡಿದ್ರೂ ನಡೆಯುತ್ತೆ ಎಂಬ ಸ್ಥಿತಿ ಇದೆ. ಲವ್ ಜಿಹಾದ್ ನಡೀತಾ ಇದೆ. ಕಾಂಗ್ರೆಸ್ ಸರ್ಕಾರ ಇದ್ದರೆ ಇದೆಲ್ಲ ನಡೆಯುತ್ತೆ. ಕಾಂಗ್ರೆಸ್ ಸರ್ಕಾರದಲ್ಲಿ ಯಾರಿಗೂ ನ್ಯಾಯ ಸಿಗಲ್ಲ. ಅಖಂಡ ಶ್ರೀನಿವಾಸ್ ಮನೆಗೆ ಬೆಂಕಿ ಹಾಕಿದ್ರು. ಡಿ.ಜೆ.ಹಳ್ಳಿ, ಕೆ.ಜೆ.ಹಳ್ಳಿಯಲ್ಲಿ ಹುಡುಕಿ ಹುಡುಕಿ ಹಿಂದೂಗಳ ಮನೆ ಮೇಲೆ ದಾಳಿ ಮಾಡಿದ್ರು. ಕಾಂಗ್ರೆಸ್ ಶಾಸಕರಿಗೇ ಅಂದು ನ್ಯಾಯ ಸಿಕ್ಕಿಲ್ಲ. ಈಗ ನಮ್ಮ ಪಕ್ಷದ ಶಾಸಕರಿಗೆ ನ್ಯಾಯ ಸಿಗುವ ನಂಬಿಕೆ ಇಲ್ಲ ಎಂದು ಶೋಭಾ ಆಕ್ರೋಶಿಸಿದರು.
ಇದನ್ನೂ ಓದಿ : ಯಲ್ಲಾಪುರ | ಹಿಂದೂ ಯುವತಿ ಕೊಲೆ ಕೇಸ್‌ಗೆ ಬಿಗ್ ಟ್ವಿಸ್ಟ್ ; ಆರೋಪಿ ಆತ್ಮಹತ್ಯೆ



















