ಬಳ್ಳಾರಿ : ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಹಿಂಸೆ ನಡೆದಿರೋದು ವಾಲ್ಮೀಕಿ ಮಹರ್ಷಿಗೆ ಮಾಡುವ ಅವಮಾನ. ಎಂದು ನಾನು ಭಾವಿಸುತ್ತೇನೆ ಯಾರು ತಪ್ಪಿತಸ್ಥರು ಇದ್ದಾರೆ ಅವರನ್ನ ಬಂಧಿಸಬೇಕು ಎಂದು ರಾಜಣ್ಣ ಆಕ್ರೋಶಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕೆ ಎನ್ ರಾಜಣ್ಣ, ನಾಳೆ ವಾಲ್ಮೀಕಿ ಪ್ರತಿಮೆ ಅನಾವರಣ ಕಾರ್ಯಕ್ರಮವಿತ್ತು. ಆ ಕಾರ್ಯಕ್ರಮದಿಂದ ಬಳ್ಳಾರಿ ನಗರದಲ್ಲಿ ಹಬ್ಬದ ವಾತಾವರಣ ಸೃಷ್ಟಿ ಮಾಡುವ ಪ್ರಯತ್ನ ಆಯೋಜಕರು ಮಾಡಿದ್ದಾರೆ. ಆ ಹಿನ್ನೆಲೆಯಲ್ಲಿ ಪ್ಲೆಕ್ಸ್ ನ್ನ ರಾಮುಲು ಜನಾರ್ಧನ್ ರೆಡ್ಡಿ ಅಕ್ಕ ಪಕ್ಕದ ಮನೆಗಳಿದೆ. ಅಲ್ಲಿ ಪ್ಲೆಕ್ಸ್ ಕಟ್ಟಲು ಪ್ರಯತ್ನ ಮಾಡಿದ್ದಾರೆ. ಈ ರೀತಿ ಅಹಿತಕರ ಘಟನೆ ನಡೆದು ಓರ್ವನ ಸಾವಾಗಿದೆ. ಇದು ನಿಜಕ್ಕೂ ಕೂಡ ಖಂಡನೀಯವಾದದ್ದುಎಂದು ಕಿಡಿಕಾರಿದ್ದಾರೆ.
ಜನರಲ್ಲಿ ಪ್ರೀತಿ ವಿಶ್ವಾಸ ಮೂಡಿಸುವ ಕೆಲಸ ಮಾಡಬೇಕು. ನಾಳೆ ನಾನು ಕಾರ್ಯಕ್ರಮಕ್ಕೆ ಹೋಗ್ತಿನಿ. ಈ ರೀತಿ ಕೃತ್ಯ ಆಗಿದೆ ಅನ್ನೊದಕ್ಕೊಸ್ಕರ ಹೋಗ್ತಿಲ್ಲ. ನಾನು ಕಾರ್ಯಕ್ರಮಕ್ಕೆ ಭಾಗಿಯಾಗಬೇಕು ಎಂದು ಕಾರ್ಯ ಕ್ರಮಕ್ಕೆ ಆಹ್ವಾನ ಮಾಡಿದ್ರು. ಅದಕ್ಕೆ ನಾನು ಬಳ್ಳಾರಿಗೆ ಹೋಗ್ತಿದ್ದೇನೆ. ನಾರಾ ಭರತ್ ರೆಡ್ಡಿ ನನ್ನ ಸ್ನೇಹಿತರು ನಾನು ಹೋಗ್ತೇನೆ, ಸತೀಶ್ ಜಾರಕಿ ಹೋಳಿ ಬರ್ತಾರೆ, ಸಮಾಜದ ಗುರುಗಳು ಭಾಗವಹಿಸ್ತಾರೆ. ಘಟನೆ ಬಗ್ಗೆ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸಬೇಕು ಎಂದು ಆಕ್ರೋಶಿಸಿದ್ದಾರೆ.
ಫೈರಿಂಗ್ ಆಗಿದ್ದು ಯಾರಿಂದ ಅಂತಾ ಬೇರೆಯವರು ಹೇಳಿದಂತೆ ನಾನು ಊಹೆ ಮಾಡಕಾಗಲ್ಲ.ನಾನು ಹೇಳಿದೇ ಅಂತಾ ಇನ್ನೊಬ್ಬ ಹೇಳ್ತಾನೆ.ನಾನು ಈಗಲೇ ಒಬ್ಬನ ಮೇಲೆ ಆರೋಪ ಮಾಡಿ ಗೂಬೆ ಕೂರಿಸೊ ಕೆಲಸ ಮಾಡೊದಿಲ್ಲ. ತನಿಖೆ ನಡೆಯಲಿ, ಬುಲೆಟ್ ಸಿಕ್ಕಿದೆ ಜನಾರ್ಧನ್ ರೆಡ್ಡಿ ತೋರಿಸಿದ್ದಾರೆ. ತನಿಖಾಧಿಕಾರಿ ಅದನ್ನ ತನಿಖೆ ಮಾಡ್ತಾರೆ ಯಾವ ವೆಪನ್ ನಿಂದ ಬಂದಿದೆ ತಿಳಿದು ಬರುತ್ತದೆ.ಎಫ್ ಎಸ್ ಎಲ್ ನವರು ಅಲ್ಲಿಗೆ ಹೋಗಿದ್ದಾರೆ.ಬೆಂಗಳೂರು ಆಫೀಸ್‌ನಿಂದ ಲಾ ಅಂಡ್ ಆರ್ಡರ್ ಎಡಿಜಿಪಿ ಹೋಗಿದ್ದಾರೆ. ಐಜಿ ಕೂಡ ಸ್ಥಳಕ್ಕೆ ಹೋಗಿ ಮೊಕ್ಕಾಂ ಹೂಡಿದಾರೆ.ಅವರ ಮನೆ ಸುತ್ತ 144 ಸೆಕ್ಷನ್ ಹಾಕಿದಾರೆ ಸದ್ಯ ಶಾಂತಿಯುತವಾಗಿದೆ ಎಂದಿದ್ದಾರೆ.
ಘಟನೆಯಲ್ಲಿ ರಾಜಕೀಯ ದುರುದ್ದೇಶ ಇದೆಯಾ
ಸ್ಥಳೀಯವಾಗಿ ಕಾಂಗ್ರೇಸ್ ಬಿಜೆಪಿ ಅನ್ನುವಂತದ್ದು ಇದ್ದೇ ಇದೆ. ನಾವು ಇಲ್ಲಾ ಅಂತಾನೂ ಅಥವಾ ಇದೇ ಅಂತಾನೋ ಹೇಳಕ್ಕಾಗಲ್ಲ. ಆದರೆ ಪ್ಲೇಕ್ಸ್ ಕಟ್ಟೊ ವಿಚಾರಕ್ಕೆ ಈರೀತಿಯ ಗಲಾಟೆ ನಡೆದಿದೆ ಅನ್ನೊದು ಸತ್ಯ. ದೂರು ಯಾರು ಕೊಟ್ಟಿದ್ದಾರೆ ಅದರಂತೆ ಹಾಕ್ತಾರೆ. ಅವರು ಕೊಟ್ಟಿದ್ದಾರೆ ಇವರ ಮೇಲೆ ಹಾಕಿದ್ದಾರೆ.ಇವರು ಕೊಟ್ಟರೆ ಅವರ ಮೇಲೆ ಹಾಕ್ತಾರೆ. ಒಂದು ಕ್ರಿಮಿನಲ್ ಆ್ಯಕ್ಷನ್ ಆದಾಗ ಸಂಭಂದ ಪಟ್ಟವರು ಪಿಟಿಷನ್ ಕೊಡಬೇಕು. ಪೀಟಿಷನ್ ಕೊಟ್ಟಾಗ ಎಫ್ ಐ ಆರ್ ಹಾಕಿ ತನಿಖೆ ಮಾಡ್ತಾರೆ. ಸತ್ಯಾಸತ್ಯಾತೆ ಇದೆಯಾ ತನಿಖಾಧಿಕಾರಿ ಪರಿಶೀಲನೆ ಮಾಡಿ ಚಾರ್ಜ್ ಶೀಟ್ ಹಾಕ್ತಾರೆ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ : ಬಳ್ಳಾರಿ ಫೈರಿಂಗ್ ಕೇಸ್ ತನಿಖೆ ನಡೀತಿದೆ.. ಯಾರೊಬ್ಬರನ್ನೂ ಬಿಡೋದಿಲ್ಲ | ಸಚಿವ ಜಮೀರ್



















