ಚಿಕ್ಕಮಗಳೂರು: ಪಾಪಿ ಪತಿಯೊಬ್ಬ ವರದಕ್ಷಿಣೆಗಾಗಿ ಪತ್ನಿಯನ್ನು ವಿವಸ್ತ್ರಗೊಳಿಸಿ ಮನಸ್ಸೋ ಇಚ್ಚೆ ಹಲ್ಲೆಗೈದಿರುವ ಘಟನೆ ಚಿಕ್ಕಮಗಳೂರಿನ ತರೀಕೆರೆ ತಾಲೂಕಿನ ನಂದಿಹೊಸಳ್ಳಿ ಗ್ರಾಮದಲ್ಲಿ ನಡೆದಿದೆ.
ತಾರಾ ಪತಿಯಿಂದ ಹಲ್ಲೆಗೊಳಗಾದ ಮಹಿಳೆ. 2014ರಲ್ಲಿ ತಿಮ್ಮಪ್ಪ ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದಳು. ಪತಿ ಮದುವೆಯಾಗಿ 2 ಮಕ್ಕಳಾದ ಬಳಿಕ ತವರಿಗೆ ಹೋಗಿ ಹಣ ತರುವಂತೆ ಪತ್ನಿಗೆ ನಿತ್ಯ ಕಿರುಕುಳ ಕೊಡುತ್ತಿದ್ದೆಂದು ಆರೋಪಿಸಲಾಗಿದೆ.
ಅಷ್ಟೆ ಅಲ್ಲದೇ, ಬರೀ ಹೆಣ್ಣು ಮಕ್ಕಳಿರೋದು, ಮನೆ ಬಿಟ್ಟು ಹೋಗು, ಬೇರೆ ಮದುವೆಯಾಗಬೇಕು, ಎಂದು ಹಿಂಸೆ ನೀಡುತ್ತಿದ. ಅಪ್ಪ,ಅಣ್ಣನ ಮಾತು ಕೇಳಿ ನಿತ್ಯ ಕುಡಿದು ಹಣಕ್ಕಾಗಿ ಹಿಂಸೆ ಪತ್ನಿಗೆ ಕೊಡುತ್ತಿದ್ದ ಹಾಗೂ ಪತ್ನಿಯನ್ನು ಮನೆಯಲ್ಲೇ ಕೂಡಿ ಹಾಕಿ ಇಡೀ ದೇಹ ಕಪ್ಪು ಬಣ್ಣಕ್ಕೆ ತಿರುಗುವಂತೆ ಹೊಡೆದಿದ್ದಾನೆ.
ತಾರಾ ಮನೆ ಹಿಂದಿನಿಂದ ಓಡಿಹೋಗಿ ದಾರಿಯಲ್ಲಿ ಸಿಕ್ಕ ಬಟ್ಟೆಯಲ್ಲಿ ಮೈಮುಚ್ಚಿಕೊಂಡು ಹೋಗಿ, ಪತಿ ಸೇರಿ 8 ಜನರ ವಿರುದ್ಧ ಲಿಂಗದಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: ರಾಯಚೂರು | ಕಾಲುವೆಯಲ್ಲಿ ಮುಳುಗಿ ಇಬ್ಬರು ಮಹಿಳೆಯರು ಸಾವು



















