ಚಾಮರಾಜನಗರ : ಚಾಮರಾಜನಗರ ಜಿಲ್ಲೆಯಲ್ಲಿ ಹುಲಿ ಆತಂಕ ಹೆಚ್ಚಾಗಿದೆ. ತಾಯಿ ಮತ್ತು ನಾಲ್ಕು ಮರಿಗಳಿಗಾಗಿ ಕೂಬಿಂಗ್ ನಡೆಸಿದ್ದ ಅರಣ್ಯಾಧಿಕಾರಿಗಳಿಗೆ ಗಂಡು ಹುಲಿ ಸಿಕದಕಿರುವ ಘಟನೆ ಚಾಮರಾಜನಗರ ತಾಲೂಕಿನ ವೀರನಪುರ ಗ್ರಾಮದ ಜಮೀನಿನಲ್ಲಿ ನಡೆದಿದೆ.
ಕಳೆದ 10 ದಿನಗಳಿಂದ ತಾಯಿ ಹುಲಿ ಹಾಗೂ ನಾಲ್ಕು ಹುಲಿ ಮರಿಗಳ ಸೆರೆಗೆ ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದರು. ಹೀಗಾಗಿ ಐದು ಸಾಕಾನೆಗಳು,100 ಕ್ಕೂ ಹೆಚ್ಚು ಸಿಬ್ಬಂದಿಯಿಂದ ಕೂಬಿಂಗ್ ನಡೆಯುತ್ತಲೇ ಇತ್ತು. ಈ ವೇಳೆ ಗಂಡು ಹುಲಿ ಬಲೆಗೆ ಬಿದ್ದಿದೆ. ಇದರಿಂದ ಗ್ರಾಮಸ್ಥರು ಇನ್ನೆಷ್ಟು ಹುಲಿ ಇರಬಹುದೆಂದು ಭಯಬೀತರಾಗಿದ್ದಾರೆ.
ಒಂದು ತಾಯಿ ಹುಲಿ ಮತ್ತು ನಾಲ್ಕು ಮರಿಗಳು ಒಂದೆಡೆ ಇದ್ದರೆ, ಈ ಗಂಡು ಹುಲಿ ಪ್ರತ್ಯೇಕವಾಗಿತ್ತು. ಇದರಿಂದ ನಂಜೇದೇವನಪುರದಲ್ಲಿ ಇದ್ದದ್ದು 5 ಅಲ್ಲ 6 ಹುಲಿ ಎಂಬಂತಾಗಿದೆ. ಕಲ್ಪುರದಲ್ಲಿ ಕಳೆದ ತಿಂಗಳು ಕ್ಯಾಮರಾ ಟ್ರ್ಯಾಪ್ನಲ್ಲಿ ಕ್ಯಾಪ್ಚರ್ ಆಗಿದ್ದ ದೊಡ್ಡ ಗಾತ್ರದ ಹುಲಿ ಇದಾಗಿದೆ ಎನ್ನಲಾಗಿದೆ.
ಇದನ್ನೂ ಓದಿ : ಸಾಲ ವಸೂಲಿ ವಿಷಯದಲ್ಲಿ ಜಗಳ | ಕುಡಿದ ಮತ್ತಿನಲ್ಲಿ ವ್ಯಕ್ತಿಯನ್ನು ಮಚ್ಚಿನಿಂದ ಕೊಚ್ಚಿ ಹತ್ಯೆಗೈದ ಕುಡುಕ!



















