ಕೊಪ್ಪಳ : ಹೆಣ್ಣು ಮಗುವೆಂದು ತಿಳಿದು ದೇವಸ್ಥಾನದ ಆವರಣದಲ್ಲಿ ಪಾಪಿಗಳು ಬಿಟ್ಟು ಹೋದ ಘಟನೆ ಕೊಪ್ಪಳ ತಾಲೂಕಿನ ಹುಲಿಗೆಮ್ಮ ದೇವಸ್ಥಾನದಲ್ಲಿ ನಡೆದಿದೆ.
ನಿನ್ನೆ ತಡರಾತ್ರಿ ಜನಿಸಿದ ನವಜಾತ ಶಿಶುವನ್ನು ದೇವಸ್ಥಾನದ ಬಳಿ ಎಸೆದು ಹೋಗಿದ್ದು, ಶಿಶುವಿನ ದೇಹ ಹುಳುಗಳಿಂದ ಆವೃತ್ತವಾಗಿತ್ತು. ಬಳಿಕ ಶಿಶು ಅಳುವುದನ್ನು ಕೇಳಿದ ಭಕ್ತರು ಹೋಂ ಗಾರ್ಡ್ ಸಿಬ್ಬಂದಿಗೆ ತಿಳಿಸಿದ್ದಾರೆ. ಬಳಿಕ ಮಗುವನ್ನು ಮಂಜುನಾಥ ಮತ್ತು ಶಿವರಾಜ ಹೋಂಗಾರ್ಡ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಹುಲಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಕೊಪ್ಪಳ ಜಿಲ್ಲಾ ಆಸ್ಪತ್ರೆ ಗೆ ನವಜಾತು ಶಿಶು ದಾಖಲಿಸಲಾಗಿದೆ. ಸದ್ಯ ನವಜಾತ ಹೆಣ್ಣು ಶಿಶು ಪ್ರಾಣಾಪಾಯದಿಂದ ಪಾರಾಗಿದೆ.
ಇದನ್ನೂ ಓದಿ : ರಾಯಚೂರು | ಶಾರ್ಟ್ ಸರ್ಕ್ಯೂಟ್ ನಿಂದ ಯುವಕ ಸಾವು!



















