ಚಾಮರಾಜನಗರ : ಚಿರತೆ ಮರಿಯನ್ನು ಗ್ರಾಮಸ್ಥರು ಸೆರೆಹಿಡಿದಿರುವ ಘಟನೆ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಸೀರಗೂಡು ಗ್ರಾಮದ ಸೂಳಿಮೇಡು ಪ್ರದೇಶದಲ್ಲಿ ನಡೆದಿದೆ.
ಚಿರತೆ ದಾಳಿಗೆ ಮೇಕೆ ಮರಿ ಬಲಿಯಾಗಿತ್ತು. ಮೇಕೆ ಮರಿ ಹುಡುಕಿಕೊಂಡು ರೈತನು ತೆರಳಿದ್ದನು ಆ ವೇಳೆ ಚಿರತೆ ದಾಳಿಯಿಂದ ಸಾವನ್ನಪ್ಪಿರುವುದು ಬೆಳಕಿಗೆ ಬಂದಿತ್ತು. ಇದೀಗ ಮರದ ಮೇಲೆ ಚಿರತೆ ಮರಿ ಇದ್ದುದ್ದನ್ನು ಗ್ರಾಮಸ್ಥರು ಗಮನಿಸಿದ್ದು, ಮರದಿಂದ ಚಿರತೆ ಮರಿ ಕೆಳಗಿಳಿದ ಬಳಿಕ ಚಿರತೆ ಮರಿ ಸೆರೆಹಿಡಿದಿದ್ದಾರೆ. ನಂತರ ಅರಣ್ಯಾಧಿಕಾರಿಗೆ ಚಿರತೆ ಮರಿಯನ್ನು ಒಪ್ಪಿಸಿದ್ದಾರೆ.
ಇದನ್ನೂ ಓದಿ : ದೊಡ್ಮನೆಯಲ್ಲಿ ಮತ್ತೆ ಅಶ್ವಿನಿ-ಗಿಲ್ಲಿ ಮಧ್ಯೆ ದೊಡ್ಡ ಫೈಟ್ | ವಿಡಿಯೋ ನೋಡಿ



















