ಬೆಂಗಳೂರು: ನಿಮಗೆ ಗೂಗಲ್ ಸಂಸ್ಥೆಯಲ್ಲಿ ವೃತ್ತಿ ಆರಂಭಿಸಬೇಕು, ವೃತ್ತಿ ತರಬೇತಿ ಪಡೆಯಬೇಕು ಎಂದು ಕನಸು ಕಾಣುತ್ತಿದ್ದೀರಾ? ಪದವಿ, ಸ್ನಾತಕೋತ್ತರ ಪದವಿ ಹಾಗೂ ಪಿಎಚ್.ಡಿಯ ಕೊನೆಯ ವರ್ಷದಲ್ಲಿ ಅಧ್ಯಯನ ಮಾಡುತ್ತಿದ್ದೀರಾ? ಹಾಗಾದರೆ, ನಿಮಗೊಂದು ಸಿಹಿ ಸುದ್ದಿ ಇಲ್ಲಿದೆ. ಹೌದು, ಗೂಗಲ್ ನಲ್ಲಿ 2026ನೇ ಸಾಲಿಗೆ ಸ್ಟುಡೆಂಟ್ ರಿಸರ್ಚರ್ ಇಂಟರ್ನ್ ಶಿಪ್ ಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹಾಗಾಗಿ, ಕಂಪ್ಯೂಟರ್ ಸೈನ್ಸ್, ಮ್ಯಾಥೆಮ್ಯಾಟಿಕ್ಸ್ ಸೇರಿ ಯಾವುದೇ ತಾಂತ್ರಿಕ, ವಿಜ್ಞಾನ ಕೋರ್ಸ್ ಮಾಡುತ್ತಿರುವವರು ಅರ್ಜಿ ಸಲ್ಲಿಸಬಹುದಾಗಿದೆ.
ಗೂಗಲ್ ನಲ್ಲಿ ಒಬ್ಬ ಸಂಶೋಧನಾ ಇಂಟರ್ನಿಯಾಗಿ ನೀವು ಗೂಗಲ್ ರಿಸರ್ಚರ್ ಗಳು, ಎಂಜಿನಿಯರ್ ಗಳು ಹಾಗೂ ವಿಜ್ಞಾನಿಗಳ ಜತೆಗೂಡಿ ಕೆಲಸ ಮಾಡುತ್ತೀರಿ. ಅಲ್ಲದೆ, ಪ್ರಮುಖ ಪ್ರಾಜೆಕ್ಟ್ ಗಳಲ್ಲಿ ಇವರು ಹೇಗೆ ಕೆಲಸ ಮಾಡುತ್ತಾರೆ? ಯಾವ ರೀತಿಯ ಕೌಶಲಗಳನ್ನು ಹೊಂದಿದ್ದಾರೆ? ತಂತ್ರಜ್ಞಾನದ ಸದ್ಬಳಕೆ ಹೇಗೆ ಎಂಬುದನ್ನು ಕಲಿಯುವ ಅವಕಾಶ ದೊರೆಯಲಿದೆ.
ಗೂಗಲ್ ರಿಸರ್ಚ್, ಗೂಗಲ್ ಡೀಪ್ ಮೈಂಡ್, ಗೂಗಲ್ ಕ್ಲೌಡ್ ಸೇರಿ ಹಲವು ವಿಭಾಗಗಳಲ್ಲಿ ತರಬೇತಿ ಪಡೆಯಲು ಇದರಿಂದ ಸಾಧ್ಯವಾಗಲಿದೆ. ಇದು 12-14 ವಾರಗಳ ಇಂಟರ್ನ್ ಶಿಪ್ ಆಗಿದ್ದು, ಇದೇ ಅವಧಿಯಲ್ಲಿ ಸ್ಟೈಪೆಂಡ್ ಕೂಡ ನೀಡಲಾಗುತ್ತದೆ ಎಂದು ತಿಳಿದುಬಂದಿದೆ. ಅರ್ಜಿ ಸಲ್ಲಿಸಲು ಫೆಬ್ರವರಿ 26 ಕೊನೆಯ ದಿನವಾಗಿದೆ.
ಎಲ್ಲಿ ಇಂಟರ್ನ್ ಶಿಪ್?
ಗೂಗಲ್ ರಿಸರ್ಚರ್ ಇಂಟರ್ನ್ ಶಿಪ್ ಭಾರತದಲ್ಲಿ ಇಲ್ಲ. ಬದಲಾಗಿ, ಸ್ವಿಟ್ಜರ್ ಲೆಂಡ್ ನ ಜ್ಯೂರಿಚ್, ಜರ್ಮನಿಯ ಬರ್ಲಿನ್ ಮತ್ತು ಮ್ಯೂನಿಚ್, ಫ್ರಾನ್ಸ್ ನ ಪ್ಯಾರಿಸ್ ಮತ್ತು ಗ್ರೆನೋಬಲ್, ಬ್ರಿಟನ್ ನ ಲಂಡನ್, ಘಾನಾದ ಅಕ್ರಾ ಹಾಗೂ ಕೀನ್ಯಾದ ನೈರೋಬಿಯಲ್ಲಿ ಇಂಟರ್ನ್ ಶಿಪ್ ಮಾಡಲು ಅವಕಾಶ ನೀಡಲಾಗಿದೆ.
ಅರ್ಜಿ ಸಲ್ಲಿಸುವುದು ಹೇಗೆ?
- ಮೊದಲಿಗೆ https://www.google.com/about/careers/applications/internships ವೆಬ್ ಸೈಟ್ ಗೆ ಭೇಟಿ ನೀಡಬೇಕು
- Apply ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು
- Education ವಿಭಾಗದಲ್ಲಿ ನಿಮ್ಮ ರೆಸ್ಯೂಮ್ (ಇಂಗ್ಲಿಷ್ ನಲ್ಲಿ ಇರಬೇಕು) ಅಪ್ಲೋಡ್ ಮಾಡಬೇಕು, ಬಳಿಕ ಸಬ್ ಮಿಟ್ ಮೇಲೆ ಕ್ಲಿಕ್ ಮಾಡಬೇಕು
ಇದನ್ನೂ ಓದಿ: ಕೇಂದ್ರ ಸರ್ಕಾರದ RITES ಸಂಸ್ಥೆಯಲ್ಲಿ 18 ಹುದ್ದೆಗಳ ನೇಮಕ : 2.8 ಲಕ್ಷ ರೂಪಾಯಿ ಸಂಬಳ



















