ಗದಗ : ರಾಜ್ಯದಲ್ಲೇ ಅತಿ ಹೆಚ್ಚು ಡ್ರಗ್ಸ್ ಬಳಕೆಯಾಗ್ತಿದೆ. ಕರ್ನಾಟಕ ರಾಜ್ಯ ಮತ್ತೊಂದು ಉಡ್ತಾ ಪಂಜಾಬ್ ಆಗಲಿದೆ ಎಂದು ಸರ್ಕಾರದ ವಿರುದ್ಧ ಬಸವರಾಜ್ ಬೊಮ್ಮಾಯಿ ಕಿಡಿಕಾರಿದ್ದಾರೆ.
ಗದಗದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ, ಕರ್ನಾಟಕ ರಾಜ್ಯದಲ್ಲಿ ಹಚ್ಚು ಡ್ರಗ್ಸ್ ಸಪ್ಲೈ ಆಗುತ್ತಿದೆ. ಇದಕ್ಕೆ ವಿಶೇಷ ತನಿಖಾ ತಂಡ ಮಾಡಿದ್ದೇವು. ಈಗಲೂ ಮಾಡಿದ್ದಾರೆ. ಆದರೆ ಸ್ಮಗ್ಲರ್‌ಗೆ ಪೊಲೀಸರ ಭಯ ಇಲ್ಲ. ಹಲವು ಕೇಸ್ ಗಳ ಪೊಲೀಸ್ರ ಕಾರ್ಯ ನೋಡಿದ್ರೆ ಬೇಗ ಬೇಲ್ ಸಿಗ್ತಾಯಿದೆ. ಸ್ಪೇಷಲ್ ಕಾನೂನು ಇದೆ ಅದನ್ನಾದ್ರೂ ಬಳಕೆ ಮಾಡಲಿ, 1988ರಲ್ಲಿನ ಕಾನೂನು ಇದೆ. ಅದು ಕೂಡ ಸರಿಯಾಗಿ ಬಳಕೆ ಮಾಡ್ತಾಯಿಲ್ಲ. ಈ ಕಾನೂನಲ್ಲಿ ಕನಿಷ್ಠ ಒಂದು ವರ್ಷ ಬೇಲ್ ಸಿಗಲ್ಲ ಎಂದು ಆಕ್ರೋಶಿಸಿದ್ದಾರೆ.
ರಾಜ್ಯದಲ್ಲಿ ಮಹಾರಾಷ್ಟ್ರ ರಾಜ್ಯದ ಪೊಲೀಸ್ರು ಬಂದು ಡ್ರಗ್ಸ್ ರೇಡ್ ಮಾಡ್ತಾರೇ ಅಂದ್ರೆ ರಾಜ್ಯದ ಪೊಲೀಸ್ ವ್ಯವಸ್ಥೆ ಹೇಗಿದೆ. ಇಲ್ಲಿನ ಪೊಲೀಸ್ ಅಧಿಕಾರಿಗಳು ಡ್ರಗ್ಸ್ ಪೆಡ್ಲರ್‌ಗಳ ಜೊತೆ ಶಾಮೀಲಾಗಿದ್ದಾರೆ ಸಂಶಯ ಬರುತ್ತೇ. ಈ ಸರ್ಕಾರ ಡ್ರಗ್ಸ್ ಕಂಟ್ರೋಲ್ ಮಾಡಿಲ್ಲ, ಎಲ್ಲ ಕಾಲೇಜುಗಳಲ್ಲಿ ಇದೆ. ಹಾವೇರಿ ಜಿಲ್ಲೆವರೆಗೂ ಮಾಫಿಯಾ ಇದೆ. ಹಾವೇರಿ ಜಿಲ್ಲೆವರೆಗೂ ಮಾಫಿಯಾ ಇದೆ. ಇದೇ ರೀತಿ ಮುಂದುವರೆದ್ರೆ ಉಡ್ತಾ ಪಂಜಾಬ್ ಆದಂಗೆ ಆಗುತ್ತೆ, ಕೂಡಲೇ ಮುಖ್ಯಮಂತ್ರಿಗಳು ಎಚ್ಚೆತ್ತುಕೊಳ್ಳಬೇಕು. ಡ್ರಗ್ಸ್ ದಂಧೆ ನಡೆಯುವ ವ್ಯಾಪ್ತಿಯ ಎಲ್ಲ ಅಧಿಕಾರಿಗಳ ಬದಲಾವಣೆ ಮಾಡಬೇಕು. ಹೊಸ ಅಧಿಕಾರಿಗಳ ನೇಮಕ ಮಾಡಬೇಕು. ಸ್ಕ್ವಾರ್ಡ್ ಮಾಡಿ ಎಲ್ಲರನ್ನು ಹಿಡಿದು ಒದ್ದು ಒಳಗೆ ಹಾಕಬೇಕು. ಉಗ್ರವಾದ ಕಾನೂನು ಮಾಡಬೇಕು ಎಂದು ವಾಗ್ಬಾಣ ಬಿಟ್ಟಿದ್ದಾರೆ.
ದ್ವೇಷ ಭಾಷಣ ಕಾನೂನು ಬದಲಿಗೆ ಡ್ರಗ್ಸ್ ಮಾಫಿಗೆ ಕಠಿಣ ಕಾನೂನು ತರ್ಬೇಕು
ರೈತರ ಗೊಬ್ಬರ, ಬೀಜ ಕಳ್ಳತನ ಮಾಡಿದ್ರು ಬಿಗಿ ಕಾನೂನು ಇಲ್ಲ, ಡ್ರಗ್ಸ್ ಮಾಫಿಯಾ ಮಾಡಿದ್ರು ಬಿಗಿ ಕಾನೂನು ಇಲ್ಲ, ಕಳ್ಳಭಟಿ ಮಾಡಿದ್ರೂ ಬಿಗಿ ಕಾನೂನು ಇಲ್ಲ. ಈ ರಾಜ್ಯ ಸಂಪೂರ್ಣ ಕಾನೂನು ಸುವ್ಯಸ್ಥೆ ಅಲ್ದೆ, ಅನೈತಿಕ ಚಟುವಟಿಕೆಗೆ ತುಂಬಿದ ರಾಜ್ಯ ಅತ್ಯಂತ ನಾಚೀಕೆಗೆಡಿನ ಸಂಗತಿ ಇದು. ಈ ಸರ್ಕಾರ ತನ್ನ ಕಚ್ಚಾಟದಲ್ಲಿಯೇ ಇದೆ. ಅದಕ್ಕೆ ಡ್ರಗ್ ಮಾಫಿಯಾದವ್ರು ಆರಾಮಾಗಿ ತನ್ನ ಕೆಲಸ ಮಾಡ್ತಾ ಇದ್ದಾರೆ ಅಂತ ಕಿಡಿಕಾರಿದ್ದಾರೆ.
ಇದನ್ನೂ ಓದಿ : ಉಡುಪಿ | ಖಾಸಗಿ ಬಸ್ ಮಾಲಕರು ತರುವ ತಡೆಯಾಜ್ಞೆಯಿಂದ KSRTC ಹೊಸ ಬಸ್ ಓಡಿಸಲು ಸಾಧ್ಯವಾಗುತ್ತಿಲ್ಲ – ಸಚಿವ ರಾಮಲಿಂಗಾ ರೆಡ್ಡಿ



















