ಬೆಂಗಳೂರು : ಬೈಕ್‌ನಲ್ಲಿ ಯುವತಿ ಚುಡಾಯಿಸಿದ್ದ ಪ್ರಕರಣಕ್ಕೆ ಸಂಭಂಧ ಪಟ್ಟಂತೆ ಮೂವರು ಯುವಕರನ್ನು ಪೊಲೀಸರು ಬಂಧಿಸಿ, ಬೈಕ್ ಸೀಜ್ ಮಾಡಿದ್ದಾರೆ.
ಘಟನಾ ಸಂಬಂಧ ರೋಷನ್(19),ಆರ್ಯನ್ (19) ಹಾಗೂ ಮತ್ತೋರ್ವ ಆರೋಪಿಯೂ ಬಂಧಿತರಾಗಿದ್ದಾರೆ. ಯುವತಿ ಚುಡಾಯಿಸಿದ ಬಗ್ಗೆ ಸುದ್ದಗುಂಟೆಪಾಳ್ಯ ಪೊಲೀಸರು ದೂರು ದಾಖಲಿಸಿದ್ದರು. ಬಳಿಕ ಎಸ್ ಜಿ ಪಾಳ್ಯ ಪೊಲೀಸರು ಪರಿಶೀಲನೆ ನಡೆಸಿ ಇದೀಗ ಪುಂಡರನ್ನು ವಶಕ್ಕೆ ಪಡೆದಿದ್ದಾರೆ.
ಘಟನೆ ಏನು?
ಕಳೆದ ರಾತ್ರಿ ಸಿಲ್ಕ್ ಬೋರ್ಡ್ ರಸ್ತೆಯಲ್ಲಿ ಯುವತಿ ಬೈಕಲ್ಲಿ ಹೋಗುತ್ತಿದ್ದಳು. ಆ ವೇಳೆ ಯುವತಿ ಬೈಕ್ ಫಾಲೋ ಮಾಡುತ್ತಾ 3 ಪುಡಾರಿಗಳು ಒಂದೇ ಬೈಕ್‌ನಲ್ಲಿ ಅಡ್ಡದಿಡ್ಡಿ ಚಲಾಯಿಸುತ್ತಾ, ಯುವತಿಗೆ ಕಿರುಕುಳ ನೀಡುತ್ತಿದ್ದರು. ಅದರಲ್ಲೂ ಮೂವರು ಹೆಲ್ಮೇಟ್ ಧರಿಸಿರಲಿಲ್ಲ, ಸುಮಾರು ಎರಡು ಕಿಮೀವರೆಗೂ ಕಿಡಿಗೇಡಿಗಳು ಫಾಲೋ ಮಾಡುತ್ತಾ ಕಿರುಕುಳ ನೀಡಿದ್ದಾರೆ. ಇದನ್ನೂ ಹಿಂದೆ ಕಾರಿನಲ್ಲಿ ಬರುತ್ತಿದ್ದ ವ್ಯಕ್ತಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿದು ಬಿಟ್ಟಿದ್ದಾರೆ. ಆ ಬಳಿಕ ಈ ವಿಡಿಯೋ ವೈರಲ್ ಆಗಿದ್ದು, ಸುದ್ದಗುಂಟೆಪಾಳ್ಯ ಪೊಲೀಸರು ವಿಚಾರಿಸುವುದಾಗಿ ತಿಳಿಸಿದ್ದರು.
ಸದ್ಯ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ, ಬೈಕ್‌ನ್ನು ವಶಕ್ಕೆ ಪಡೆದಿದ್ದಾರೆ. ಇದರಿಂದ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಬೆಂಗಳೂರಲ್ಲಿ ಮೂವರು ಪುಂಡರಿಂದ ಯುವತಿಗೆ ಕಿರುಕುಳ



















