ಚಿಕ್ಕಬಳ್ಳಾಪುರ : ಮನೆಯಲ್ಲೇ ನೇಣು ಹಾಕಿಕೊಂಡು ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಗುಡಿಬಂಡೆ ಪಟ್ಟಣದ ಬಾಪೂಜಿ ನಗರದಲ್ಲಿ ನಡೆದಿದೆ.
ಬಾಲಾಜಿ ಸಿಂಗ್ (30)ಆತ್ಮಹತ್ಯೆಗೆ ಶರಣಾದ ವಿವಾಹಿತ ಯುವಕ. ಬಾಲಾಜಿ ಬೇರೊಬ್ಬ ಯುವತಿಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದು, ಶಿಡ್ಲಘಟ್ಟ ಮೂಲದ ಗಾಯಿತ್ರಿ ಜೊತೆಗೆ ಸದಾ ಫೋನ್ ನಲ್ಲಿ ಬ್ಯುಸಿಯಾಗಿರುತ್ತಿದ್ದನು. ಈ ವಿಚಾರಕ್ಕೆ ಹೆಂಡತಿಯೊಂದಿಗೆ ಗಲಾಟೆ ಮಾಡಿಕೊಂಡಿದ್ದನು. ಗಾಯತ್ರಿ ಬಾಲಾಜಿ ಸಿಂಗ್ ಗೆ ಹನಿಟ್ರಾಪ್ ಮಾಡಿ ಬ್ಲಾಕ್ ಮೇಲ್ ಮಾಡುತ್ತಿದ್ದಳು. ಈ ವಿಷಯಕ್ಕೆ ನಿನ್ನೆ ಯುವತಿಯೊಂದಿಗೆ ಜಗಳವಾಡಿದ್ದನು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ನಂತರ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳಕ್ಕೆ ಗುಡಿಬಂಡೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ನ್ಯೂ ಇಯರ್‌ಗೆ ಕೌಂಟ್‌ಡೌನ್ | ಹೋಟೆಲ್, ಬಾರ್-ಪಬ್ ಎಷ್ಟು ಗಂಟೆ ತನಕ ಓಪನ್? ಸಂಭ್ರಮಾಚರಣೆಗೆ ಕಟ್ಟುನಿಟ್ಟಿನ ಸೂಚನೆ!



















