ಬೆಂಗಳೂರು : ಶ್ರೀಲಂಕಾ ಹನಿಮೂನ್ ಟ್ರಿಪ್ ಮುಗಿಸಿ ಬಂದ ನವವಿವಾಹಿತೆ ಆತ್ಮಹತ್ಯೆಗೆ ಯತ್ನ ಮಾಡಿರುವ ಘಟನೆ ಬೆಂಗಳೂರಿನ ರಾಮಮೂರ್ತಿನಗರದಲ್ಲಿ ನಡೆದಿದೆ.
ಗಾನವಿ(26) ಆತ್ಮಹತ್ಯೆಗೆ ಯತ್ನಿಸಿರೋ ನವವಿವಾಹಿತೆ. ಕಳೆದ ಅಕ್ಟೋಬರ್ 29 ರಂದು ಗಾನವಿ – ಸೂರಜ್ ಮದುವೆ ಆಗಿತ್ತು. ಬಹುತೇಕ 1 ತಿಂಗಳ ನಂತರ ಗಂಡನ ಮನೆಯವರ ಬೇಡಿಕೆಯಂತೆ ರಿಸೆಪ್ಷನ್ ಮಾಡಲಾಯಿತು. ಬರೋಬ್ಬರಿ 40 ಲಕ್ಷ ಖರ್ಚು ಮಾಡಿ ನವೆಂಬರ್ 23 ರಂದು ಪ್ಯಾಲೇಸ್ ಗ್ರೌಂಡ್ಸ್ ನಲ್ಲಿ ಅದ್ದೂರಿ ರಿಸೆಪ್ಷನ್ ಮಾಡಿದ್ದರು. ನಂತರ ಹತ್ತು ದಿನಗಳ ಕಾಲ ಶ್ರೀಲಂಕಾ ಹನಿಮೂನ್ ಟ್ರಿಪ್ ಹೋಗಿದ್ದ ದಂಪತಿ ಅರ್ಧದಲ್ಲೇ ವಾಪಾಸ್ ಆಗಿದ್ದಾರೆ. ಇದನ್ನ ಪ್ರಶ್ನೆ ಮಾಡಿದಾಗ ನಿಮ್ಮ ಮಗಳನ್ನ ಕರೆದುಕೊಂಡು ಹೋಗಿ ಪತಿ ಸೂರಜ್ ಅವಾಜ್ ಹಾಕಿದ್ದಾನೆ.
ನಿನ್ನೆ ಮಧ್ಯಾಹ್ನ ಸುಮಾರಿಗೆ ನೇಣು ಬಿಗಿದುಕೊಂಡು ಗಾನವಿ ಆತ್ಮಹತ್ಯೆಗೆ ಯತ್ನಿಸಿದ್ದು, ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಬಗ್ಗೆ ಗಾನವಿ ಕುಟುಂಬಸ್ಥರು ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆಗೆ ಕಿರುಕುಳ ಮತ್ತು ಆತ್ಮಹತ್ಯೆ ಪ್ರಚೋದನೆ ಕೇಸ್ ಎಂದು ದೂರು ನೀಡಿದ್ದಾರೆ.
ಇದನ್ನೂ ಓದಿ : ಚಿಕ್ಕಬಳ್ಳಾಪುರದಲ್ಲಿ ಘೋರ ದುರಂತ | ಟಿಪ್ಪರ್ ಲಾರಿಗೆ ಬೈಕ್ ಡಿಕ್ಕಿಯಾಗಿ ನಾಲ್ವರು ಸ್ಥಳದಲ್ಲೇ ಸಾವು!



















