ಮಂಡ್ಯ : ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ನಡುವೆ ಜಗಳ ಆರಂಭವಾಗಿದ್ದು, ಓರ್ವನ ಕೊಲೆಯಲ್ಲಿ ಅಂತ್ಯ ಕಂಡಿರುವ ಘಟನೆ ಮಂಡ್ಯದ ಶ್ರೀರಂಗಪಟ್ಟಣದ ಉತ್ತರ ಕಾವೇರಿಯ ಹಳೇ ರೈಲ್ವೆ ಸೇತುವೆ ಮೇಲೆ ನಡೆದಿದೆ.
ಬೆಂಗಳೂರು ಮೂಲದ ಸುರೇಶ್(26) ಕೊಲೆಯಾದ ದುರ್ದೈವಿ. ಮಂಡ್ಯದ ನಿಖಿಲ್ ಕೊಲೆಗೈದ ಆರೋಪಿ. ಬೆಂಗಳೂರಿನಿಂದ ಸ್ನೇಹಿತ ಸುರೇಶ್ ನನ್ನು ನಿಖಿಲ್ ಊರಿಗೆ ಕರೆಸಿಕೊಂಡಿದ್ದ. ಆ ಬಳಿಕ ಶ್ರೀರಂಗಪಟ್ಟಣಕ್ಕೆ ಬಂದಿದ್ದ ಇಬ್ಬರು ಮದ್ಯ ಸೇವನೆ ಮಾಡುತ್ತಾ ಹಳೇ ರೈಲ್ವೆ ಸೇತುವೆ ಮೇಲೆ ಕುಳಿತ್ತಿದ್ದರು. ಈ ವೇಳೆ ಇಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಮಾತಿನ ಚಕಮಕಿ ನಡೆದಿದ್ದು ಕೋಪಗೊಂಡ ನಿಖಿಲ್ ಬಾಟಲಿಯಿಂದ ಸುರೇಶ್ ತಲೆಗೆ ಹೊಡೆದು ಹತ್ಯೆಗೈದು ಸ್ಥಳದಿಂದ ಪರಾರಿಯಾಗಿದ್ದಾನೆ.
ಸದ್ಯ ಸ್ಥಳಕ್ಕೆ ಎಸ್ಪಿ ಬಾಲದಂಡಿ ಶ್ರೀರಂಗಪಟ್ಟಣ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ. ಸ್ಥಳದಲ್ಲಿ ಸಿಕ್ಕ ಮೃತನ ಮೊಬೈಲ್‌ನಿಂದ ಆರೋಪಿ ಬಗ್ಗೆ ಮಾಹಿತಿ ಕಲೆ ಹಾಕಿ ಶೋಧಕಾರ್ಯದಲ್ಲಿ ತೊಡಗಿದ್ದಾರೆ.
ಇದನ್ನೂ ಓದಿ : ಬೆಂಗಳೂರಿನಿಂದ ಗೋಕರ್ಣ ಟ್ರಿಪ್ಗೆ ಹೊರಟವರು ಅಪಘಾತದಲ್ಲಿ ದುರಂತ ಅಂತ್ಯ



















