ಉಡುಪಿ: ಜೆಸಿಐ ಕುಂದಾಪುರ ಇದರ 50ನೇ ವರ್ಷದ ಸಂಭ್ರಮದ ಅಂಗವಾಗಿ ಸುವರ್ಣ ಜೇಸೀಸ್ ವತಿಯಿಂದ ‘ನಾಟಕೋತ್ಸವ’ ಕಾರ್ಯಕ್ರಮವನ್ನು ಇದೇ ಡಿ. 21 ರಿಂದ 23ರವರೆಗೆ ಕುಂದಾಪುರ ಬೋರ್ಡ್ ಹೈಸ್ಕೂಲ್ ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದು, ಪ್ರತಿದಿನ ಸಂಜೆ 7.30ರಿಂದ ನಾಟಕ ಪ್ರದರ್ಶನಗೊಳ್ಳಲಿದೆ.

ಕಾರ್ಯಕ್ರಮದ ವಿವರ
21 ಡಿಸೆಂಬರ್ 2025 ಭಾನುವಾರ
ನೀನಾಸಂ ತಿರುಗಾಟದ ನಾಟಕ ‘ಹೃದಯದ ತೀರ್ಪು’
ರಚನೆ: ಬಾನು ಮುಷ್ಕಾಕ್
ನಿರ್ದೇಶನ: ಡಾ.ಎಂ. ಗಣೇಶ್
22 ಡಿಸೆಂಬರ್ 2025 ಸೋಮವಾರ
ನೀನಾಸಂ ತಿರುಗಾಟದ ನಾಟಕ ‘ಅವತರಣಮ್ ಭ್ರಾಂತಾಲಯಮ್’
ರಚನೆ: ಜಿ. ಶಂಕರ ಪಿಳ್ಳೆ
ಕನ್ನಡಕ್ಕೆ: ನಾ. ದಾಮೋದರ ಶೆಟ್ಟಿ
ನಿರ್ದೇಶನ: ಶಂಕರ ವೆಂಕಟೇಶ್ವರನ್
23 ಡಿಸೆಂಬರ್ 2025 ಮಂಗಳವಾರ
‘ನಾಯಿ ಕಳೆದಿದೆ’
ರಚನೆ/ನಿರ್ದೇಶನ: ರಾಜೇಂದ್ರ ಕಾರಂತ
ತಂಡ: ಲಾವಣ್ಯ ಬೈಂದೂರು
ಇನ್ನು, ನಾಟಕೋತ್ಸವಕ್ಕೆ ಉಚಿತ ಪ್ರವೇಶವಿದೆ ಎಂದು ಸಂಘಟಕರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಇದನ್ನೂ ಓದಿ: ಹೊಸ ಬೈಯ್ಯಪ್ಪನಹಳ್ಳಿ ಬಡಾವಣೆ ಹೆಣ್ಣುಮಕ್ಕಳಿಗೆ ಶೀಘ್ರ ಮೂಲಭೂತ ಸೌಲಭ್ಯ ಒದಗಿಸಿ | GBA ಆಯುಕ್ತರಿಗೆ ನಾಗಲಕ್ಷ್ಮೀ ಚೌಧರಿ ಪತ್ರ



















