ಮಂಡ್ಯ : ಚಲಿಸುವ ರೈಲು ಹತ್ತಲು ಹೋಗಿದ್ದ ಪ್ರಯಾಣಿಕ ಆಯತಪ್ಪಿದ್ದಾನೆ ಅಲ್ಲೆ ಇದ್ದ ಸ್ಟೇಷನ್ ಮಾಸ್ಟರ್ ಸಮಯಪ್ರಜ್ಞೆಯಿಂದ ಬಚಾವ್ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ಹೋಗುತ್ತಿದ್ದ ರೈಲು ಹತ್ತಲು ಪ್ರಯಾಣಿಕನು ಯತ್ನಿಸಿದ್ದು, ಈ ವೇಳೆ ಕಾಲು ಜಾರಿ ಪ್ಲಾಟ್‌ಫಾರ್ಮ್ ಹಾಗೂ ರೈಲಿನ ನಡುವಿನ ಸಂದಿಗೆ ಬೀಳಲಾರಂಬಿಸುತ್ತಾರೆ. ಕರ್ತವ್ಯ ನಿರತರಾಗಿದ್ದ ಸ್ಟೇಷನ್ ಮಾಸ್ಟರ್ ಅಭಿಜಿತ ಸಿಂಗ್ ಆತನನ್ನು ಗಮನಿಸಿ ತಕ್ಷಣ ಅವನನ್ನು ಬಚಾವ್ ಮಾಡಲು ಮುಂದಾಗುತ್ತಾರೆ. ಈ ದೃಶ್ಯವು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ನೆಟ್ಟಿಗರು ಸ್ಟೇಷನ್ ಮಾಸ್ಟರ್‌ಗೆ ಸಲಾಂ ಎಂದಿದ್ದಾರೆ.
ಇದನ್ನೂ ಓದಿ : ತೀರ್ಥಹಳ್ಳಿಯ ಪುರಾಣ ಪ್ರಸಿದ್ಧ ರಾಮೇಶ್ವರ ಜಾತ್ರೆ | ರಾಮ ಕೊಂಡದಲ್ಲಿ ಮಿಂದೆದ್ದ ಸಾವಿರಾರು ಭಕ್ತರು!



















