ಬೆಂಗಳೂರು: ಷೇರು ಮಾರುಕಟ್ಟೆ ಹಾಗೂ ಮ್ಯೂಚುವಲ್ ಫಂಡ್ ಹೂಡಿಕೆಗಳು ಯಾವಾಗಲೂ ರಿಸ್ಕ್ ನಿಂದ ಕೂಡಿರುವ ಕಾರಣ ಇತ್ತೀಚೆಗೆ ಹೆಚ್ಚಿನ ಜನ ಪೋಸ್ಟ್ ಆಫೀಸಿನ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರದ ಬೆಂಬಲ ಇರುವುದು ಹಾಗೂ ನಿಶ್ಚಿತ ಆದಾಯ ನೀಡುವ ಕಾರಣ ಇವುಗಳಲ್ಲಿ ಹೂಡಿಕೆ ಮಾಡಲಾಗುತ್ತಿದೆ. ಇಂತಹ ಪೋಸ್ಟ್ ಆಫೀಸ್ ಉತ್ತಮ ಯೋಜನೆಗಳಲ್ಲಿ ಟೈಮ್ ಡೆಪಾಸಿಟ್ ಯೋಜನೆ ಕೂಡ ಒಂದಾಗಿದೆ.
ಸರ್ಕಾರಿ ಹಾಗೂ ಖಾಸಗಿ ವಲಯದ ಬ್ಯಾಂಕ್ ಗಳಲ್ಲಿ ಫಿಕ್ಸೆಡ್ ಡೆಪಾಸಿಟ್ ಅಥವಾ ಎಫ್ ಡಿ ಇರುವಂತೆ ಪೋಸ್ಟ್ ಆಫೀಸ್ ನಲ್ಲಿ ಟೈಮ್ ಡೆಪಾಸಿಟ್ ಅಥವಾ ಟಿಡಿ ಹೂಡಿಕೆ ಯೋಜನೆ ಇದೆ. ಇಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಬಡ್ಡಿಯ ಲಾಭವನ್ನು ಗಳಿಸಬಹುದಾಗಿದೆ.
ಪೋಸ್ಟ್ ಆಫೀಸಿನ ಟಿಡಿ ಯೋಜನೆಯಲ್ಲಿ 1 ವರ್ಷದ ಹೂಡಿಕೆಗೆ ಶೇ.6.9 ರಷ್ಟು ಬಡ್ಡಿದರ ನೀಡಲಾಗುತ್ತದೆ. ಹಾಗೆಯೇ, 2 ವರ್ಷಗಳ ಹೂಡಿಕೆಗೆ ಶೇ.7.0 ರಷ್ಟು, 3 ವರ್ಷಗಳ ಹೂಡಿಕೆಗೆ ಶೇ.7.1 ರಷ್ಟು ಹಾಗೂ 5 ವರ್ಷಗಳ ಹೂಡಿಕೆಗೆ ಶೇ.7.5ರಷ್ಟು ಬಡ್ಡಿ ನೀಡಲಾಗುತ್ತದೆ. ಸಾಮಾನ್ಯ ಬ್ಯಾಂಕ್ ಗಳಿಗಿಂತ ಇಲ್ಲಿ ಹೆಚ್ಚಿನ ಬಡ್ಡಿದರ ನೀಡಲಾಗುತ್ತದೆ.
ಹಾಗಾಗಿ, ನೀವೊಂದು ವೇಳೆ 5 ಲಕ್ಷ ರೂಪಾಯಿಯನ್ನು ಪೋಸ್ಟ್ ಆಫೀಸಿನ ಟಿಡಿ ಯೋಜನೆಯಲ್ಲಿ 5 ವರ್ಷಗಳವರೆಗೆ ಹೂಡಿಕೆ ಮಾಡಿದರೆ, ನಿಮಗೆ ಶೇ.7.5ರಷ್ಟು ಬಡ್ಡಿಯ ಲಾಭ ಸಿಗುತ್ತದೆ. ಅಂದರೆ, 5 ವರ್ಷದಲ್ಲಿ ನಿಮ್ಮ 5 ಲಕ್ಷ ರೂಪಾಯಿ ಹೂಡಿಕೆಗೆ 2.21 ಲಕ್ಷ ರೂಪಾಯಿ ಬಡ್ಡಿಯ ಲಾಭ ಸಿಗುತ್ತದೆ. ಮೆಚ್ಯೂರಿಟಿ ಅವಧಿಯಲ್ಲಿ ನಿಮಗೆ ಒಟ್ಟು 7.21 ಲಕ್ಷ ರೂಪಾಯಿ ಲಭಿಸುತ್ತದೆ.
ಗಮನಿಸಿ: ಪೋಸ್ಟ್ ಆಫೀಸಿನ ಯೋಜನೆಗಳ ಕುರಿತು ಮಾಹಿತಿ ನೀಡುವ ದೃಷ್ಟಿಯಿಂದ ಮಾತ್ರ ನಾವು ಲೇಖನವನ್ನು ಪ್ರಕಟಿಸಿದ್ದೇವೆ. ಇದು ಹೂಡಿಕೆ ಮಾಡಲು ನಾವು ಶಿಫಾರಸು ಮಾಡುತ್ತಿಲ್ಲ. ಯಾವುದೇ ಮಾದರಿಯ ಹೂಡಿಕೆಗೆ ತಜ್ಞರ ಸಲಹೆ-ಸೂಚನೆ ಪಡೆಯುವುದನ್ನು ಮರೆಯದಿರಿ.
ಇದನ್ನೂ ಓದಿ : ಕೇಂದ್ರ ಸರ್ಕಾರದ HAL ಸಂಸ್ಥೆಯಲ್ಲಿ ಮ್ಯಾನೇಜರ್ ಹುದ್ದೆಯ ನೇಮಕ : ಹೀಗೆ ಅರ್ಜಿ ಸಲ್ಲಿಸಿ



















