ದಾವಣಗೆರೆ : ಡಿಕೆಶಿ ನಮ್ಮ ಆರಾಧ್ಯ ದೈವ ಅದರಲ್ಲಿ ಎರಡನೇ ಮಾತಿಲ್ಲ, ಡಿಸೆಂಬರ್ 6, 9 ಡಿಕೆಶಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದರೆ ಖುಷಿ ಆಗುವಲ್ಲಿ ಮೊದಲಿಗನೇ ನಾನು ಎಂದು ಶಿವಗಂಗ ಬಸವರಾಜ್ ಹೇಳಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಗಂಗ ಬಸವರಾಜ್, ಜನವರಿ 6ಕ್ಕೆ ಡಿಕೆಶಿ ಪಟ್ಟಾಭಿಷೇಕ ಎಂಬ ಶಾಸಕ ಇಕ್ಬಾಲ್ ಹುಸೇನ್ ಹೇಳಿಕೆ ವಿಚಾರ ಸಂಬಂಧಪಟ್ಟಂತೆ ಇಕ್ಬಾಲ್ ಹುಸೇನ್ ಅವರದ್ದು ವೈಯಕ್ತಿಕ ಅಭಿಪ್ರಾಯ, ಸಿಎಂ ಖುರ್ಚಿ ಖಾಲಿ ಇದ್ದಾಗ ಕರೆಕ್ಟ್ ಆಗಿ ಉತ್ತರ ಕೊಡುತ್ತೇನೆ. ಡಿಸೆಂಬರ್ ಮುಗಿಯೋವರೆಗೆ ನಾನು ಉತ್ತರ ಕೊಡಲ್ಲ, ಜನವರಿಗೆ ಸಂಕ್ರಾಂತಿ ಬರುತ್ತೆ, ಎಲ್ಲರಿಗೂ ಒಳ್ಳೆಯದಾಗುತ್ತೆ ಕಾಯಿರಿ. ಜನವರಿಯಲ್ಲಿ ನಾನು ಮಾತನಾಡುತ್ತೇನೆ ಎಂದಿದ್ದಾರೆ.
ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವಿಚಾರ
ಈಗಾಗಲೇ ಯತೀಂದ್ರ ಹೇಳಿಕೆ ಬಗ್ಗೆ ಹೈಕಮಾಂಡ್‌ಗೆ ಮುಟ್ಟಿಸೋದಾಗಿ ಡಿಕೆಶಿ ಹೇಳಿದ್ದಾರೆ. ಹೈಕಮಾಂಡ್ ಏನು ಸೂಚನೆ ನೀಡುತ್ತೆ ಅದನ್ನು ಡಿಕೆಶಿಯವರು ಮಾಡ್ತಾರೆ. ಯತೀಂದ್ರ ಮಾತಾಡಿದ್ರೂ ತಪ್ಪೇ ನಾನು ಮಾತನಾಡಿದರೂ ತಪ್ಪೇ. ಈ ಹಿಂದೆ ಮಾತನಾಡಿದ್ದಾಗ ಅನುಭವಿಸಿದ್ದನ್ನು ನೋಡಿದ್ದೇನೆ ಎಂದಿದ್ದಾರೆ.
ದಿ.ಜೆ.ಹೆಚ್. ಪಟೇಲ್ ನಮ್ಮ ದೊಡ್ಡಪ್ಪ, ಸಿಎಂ ಕೊಟ್ಟ ಊರು ನಮ್ಮ ಚನ್ನಗಿರಿ. ಯತೀಂದ್ರ ಹೇಳಿಕೆ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತೆ. ಈ ಹಿಂದೆ ಮಾತನಾಡಿದ್ದಾಗ ಅನುಭವಿಸಿದ್ದನ್ನು ನೋಡಿದ್ದೇನೆ. ಶಿಸ್ತುಪಾಲನಾ ಸಮಿತಿಯವರನ್ನ ಕೇಳಿದ್ರೆ ಕರೆಕ್ಟ್ ಉತ್ತರ ಕೊಡುತ್ತಾರೆ ಎಂದು ಹೇಳಿದ್ದಾರೆ.
ಜನವರಿಯಲ್ಲಿ ಸೂರ್ಯಪಥ ಬದಲಾವಣೆ ಆಗುತ್ತೆ, ಆಗ ಮಾತನಾಡೋಣ. ಡಿನ್ನರ್, ಊಟ, ತಿಂಡಿ ಈ ಬಗ್ಗೆ ಅಪಾರ್ಥ ಏಕೆ ಮಾಡಿಕೊಳ್ಳುತ್ತೀರಿ? ಅವೆಲ್ಲ ಸಾಮಾನ್ಯ. ಸೆಷನ್ ಸಂದರ್ಭದಲ್ಲಿ ನನ್ನ ರೂಮ್‌ನಲ್ಲಿ ದಿನಾಲೂ 20 ಎಂಎಲ್‌ಎ ಊಟ ಮಾಡ್ತಾರೆ. ದೆಹಲಿಗೆ ನಾನು ಹೋಗ್ತಿಲ್ಲ ಸ್ಥಳೀಯ ಕಾರ್ಯಕ್ರಮ ಇದೆ. ವೋಟ್ ಚೋರಿ ಚಳವಳಿಗೆ ಶಾಸಕರು ಹೋಗುತ್ತಿದ್ದಾರೆ ಎಂದಿದ್ದಾರೆ.
ಇದನ್ನೂ ಓದಿ : ಯತೀಂದ್ರ ಅವರು ಸಿಎಂಗೆ ಸರ್ಟಿಫಿಕೇಟ್ ಕೊಡೋದು ಬೇಕಾಗಿಲ್ಲ | ನಂಜೇಗೌಡ



















