ಭಾರತದ ಮೇಲೆ ಡೊನಾಲ್ಡ್ ಟ್ರಂಪ್ ಘೋಷಿಸಿರುವ ಶೇ.50ರಷ್ಟು ಭಾರೀ ಸುಂಕ ಮತ್ತು ಇದೀಗ ಅಮೆರಿಕದಲ್ಲೇ ಭಾರೀ ವಿವಾದಕ್ಕೆ ಕಾರಣವಾಗಿದೆ. ಈ ಸುಂಕ ನೀತಿಯನ್ನು ಅಂತ್ಯಗೊಳಿಸಬೇಕು ಎಂದು ಅಮೆರಿಕದ ಮೂವರು ಸಂಸದರು ನಿಲುವಳಿ ಮಂಡಿಸಿದ್ದಾರೆ.“ಇದು ಆರ್ಥಿಕ ತಂತ್ರವಲ್ಲ, ಬೇಜವಾಬ್ದಾರಿ ಸುಂಕತಂತ್ರ” ಎಂದು ಅವರು ಟ್ರಂಪ್ ವಿರುದ್ಧವೇ ಕಿಡಿಕಾರಿದ್ದಾರೆ.
ಭಾರತದ ಮೇಲೆ ಡೊನಾಲ್ಡ್ ಟ್ರಂಪ್ ಘೋಷಿಸಿರುವ ಶೇ.50ರಷ್ಟು ಭಾರೀ ಸುಂಕ ಇದೀಗ ಅಮೆರಿಕದ ರಾಜಕೀಯ ವಲಯದಲ್ಲೇ ದೊಡ್ಡ ಚರ್ಚೆಗೆ ಕಾರಣವಾಗಿದೆ. ಈ ಸುಂಕವನ್ನು ತಕ್ಷಣವೇ ಅಂತ್ಯಗೊಳಿಸಬೇಕು ಎಂದು ಅಮೆರಿಕದ ಮೂವರು ಸಂಸದರು ನಿಲ್ಲುವಳಿ ಮಂಡಿಸಿದ್ದಾರೆ. ಟ್ರಂಪ್‌ನ ಈ ನಿರ್ಧಾರವನ್ನು ಅವರು ಸ್ಪಷ್ಟವಾಗಿ “ಬೇಜವಾಬ್ದಾರಿ ಸುಂಕತಂತ್ರ” ಎಂದು ಕರೆದಿದ್ದಾರೆ. ಈ ಸುಂಕದಿಂದ ಅಮೆರಿಕದ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಆಗಿ, ಅದರ ನೇರ ಹೊರೆ ಗ್ರಾಹಕರ ಮೇಲೇ ಬೀಳಲಿದೆ ಎಂದು ಸಂಸದರು ಎಚ್ಚರಿಸಿದ್ದಾರೆ.
ಉತ್ತರ ಕರೊಲಿನಾದ ಸಂಸದೆ ದೆಬ್ರೊ ರಾಸ್, ಟೆಕ್ಸಸ್ ಸಂಸದಮಾರ್ಕ್ ವೇಸಿ ಹಾಗೂ ಇಲ್ಲಿನಾಯ್ಸ್ ಸಂಸದ ರಾಜ ಕೃಷ್ಣಮೂರ್ತಿ ಅವರು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಯಲ್ಲಿ ನಿಲುವಳಿಯನ್ನ ತೆರೆದ ಮನಸ್ಸಿನಿಂದಲೆ ಖಂಡಿಸಿದ್ದಾರೆ. ಇದರ ಬೆನ್ನಲ್ಲೇ ಮತ್ತೊಂದು ದೊಡ್ಡ ಹೊಡೆತ ಅಂದ್ರೆ.. H-1B ವೀಸಾ ಶುಲ್ಕ ಹೆಚ್ಚಳ… ಇದರ ವಿರುದ್ಧವೂ 19 ರಾಜ್ಯಗಳು ಟ್ರಂಪ್ ಆಡಳಿತದ ಮೇಲೆ ಮೊಕದ್ದಮೆ ಹೂಡಿವೆ.. ಇದು ಟ್ರಂಪ್ ವಲಸಾ ನೀತಿಗೆ ದೊಡ್ಡ ಕಾನೂನು ಸವಾಲಾಗಿ ಪರಿಣಮಿಸಿದೆ.. ಈ ಎರಡೂ ಚರ್ಚೆಗಳೂ ಟ್ರಂಪ್‌ನ ರಾಜಕೀಯದ ಮೇಲೆ ಕೆಟ್ಟ ಪರಿಣಾಮ ಬೀರುವಂತೂ ಹೌದು..
ಟ್ರಂಪ್ ಘೋಷಿಸಿರುವ ಶೇ.50ರಷ್ಟು ಸುಂಕದ ಹಿಂದೆ ರಾಜಕೀಯ ಲೆಕ್ಕಾಚಾರವೇ ಹೆಚ್ಚಾಗಿದೆ ಎಂದು ಅಮೆರಿಕದ ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ರಷ್ಯಾ ಅಧ್ಯಕ್ಷ ಪುಟಿನ್ ಭಾರತಕ್ಕೆ ಭೇಟಿ ನೀಡಿರುವುದನ್ನೇ ನೆಪ ಮಾಡಿಕೊಂಡು, ಪರೋಕ್ಷವಾಗಿ ಸುಂಕ ವಿದಿಸಿ ಕೋಲ್ಢ್ ವಾರ್ ಶುರು ಮಾಡಿರುವ ಅಮೆರಿಕಕ್ಕೆ ಇದೀಗ ಉಲ್ಟಾ ಹೊಡೆದಿದೆ.. ಭಾರತ–ರಷ್ಯಾ ಸಂಬಂಧಗಳು ದಶಕಗಳಿಂದ ನಡೆದುಕೊಂಡು ಬರುತ್ತಿರುವ ತಂತ್ರಾತ್ಮಕ ಸಹಕಾರವಾಗಿದಲ್ಲದೇ.. ಅದನ್ನು ತಕ್ಷಣ ಬದಲಾಯಿಸುವ ಪ್ರಶ್ನೆಯೇ ಇಲ್ಲ.. ಈ ಹಿನ್ನೆಲೆಯಲ್ಲೇ, ಟ್ರಂಪ್ ತೆಗೆದುಕೊಂಡ ಈ ನಿರ್ಧಾರ ವಿದೇಶಾಂಗ ನೀತಿಯಲ್ಲ, ಚುನಾವಣಾ ರಾಜಕೀಯದ ಭಾಗ ಎಂಬ ಆರೋಪ ಕೇಳಿಬರುತ್ತಿದೆ.
ಭಾರತದ ಮೇಲೆ ಒತ್ತಡ ಹೇರುವ ಟ್ರಂಪ್ ಪ್ರಯತ್ನಗಳು ಅಮೆರಿಕದಲ್ಲೇ ತೀವ್ರ ವಿರೋದಕ್ಕೆ ಗುರಿಯಾಗಿವೆ. ಒಂದೆಡೆ ಸಂಸದರ ನಿಲ್ಲುವಳಿ.. ಇನ್ನೊಂದೆಡೆ 19 ರಾಜ್ಯಗಳ ಮೊಕದ್ದಮೆ.. ಇವು ಟ್ರಂಪ್ ನೀತಿಗಳಿಗೆ ಬಿಗ್ ಶಾಕ್ ಆಗುತ್ತಿದೆ. ಆದರೆ ಭಾರತ ಮಾತ್ರ ಸ್ಪಷ್ಟ ಒತ್ತಡಕ್ಕೂ ಜಗ್ಗಲ್ಲ, ಸುಂಕಕ್ಕೂ ಹೆದರಲ್ಲ ಅನ್ನೋತರ.. ತನ್ನ ರಾಷ್ಟ್ರೀಯ ಹಿತಾಸಕ್ತಿಯ ಆಧಾರದಲ್ಲಿ ನಿರ್ಧಾರ ತೆಗೆದುಕೊಳ್ಳುತ್ತಿದೆ.. ಇದು ಕೇವಲ ವ್ಯಾಪಾರದ ವಿಚಾರವಲ್ಲ.. ಜಾಗತಿಕ ರಾಜಕೀಯದಲ್ಲಿ ಭಾರತದ ತೂಕವನ್ನು ತೋರಿಸುವ ಸಂಕೇತ. ಅಮೆರಿಕದಲ್ಲಿ ವಿರೋಧದ ಅಲೆ ಎಬ್ಬಿಸಿದೆ.. ಟ್ರಂಪ್ ಇನ್ನೂ ಹಠ ಬಿಡದೇ ಹೀಗೆ ಮುಂದೆ ಸಾಗಿದರೆ ಈಗ ತಮ್ಮ ರಾಜ್ಯದಲ್ಲಿ ವಿರೋದಿಸುತ್ತಿದ್ದಾರೆ… ಇನ್ನೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಬಲ ಕುಸಿಯುವುದಂತೂ ಕಟ್ಟಿಟ್ಟ್ ಬುತ್ತಿ.. ಒಟ್ಟಿನಲ್ಲಿ ಈ ಬೆಳವಣಿಗೆ ಭಾರತ-ಾಮೆರಿಕ ಸಂಬಂಧಗಳಲ್ಲಿ ಹೊಸ ತಿರುವು ತರಬಹುದೇ ಎಂಬುದೇ ಈಗ ಜಾಗತಿಕಗಮನದ ಕೇಂದ್ರಬಿಂದು.
ಇದನ್ನೂ ಓದಿ : ‘ಗೌರಿ’ ಗಗನಯಾನ ಮದುವೆ..! ವಿಕ್ಷೀಸಿ ಝೀ ಪವರ್‌ನಲ್ಲಿ



















