ಕೋಲಾರ : ಟಿಪ್ಪು ಮತ್ತು ಅವರ ತಂದೆ ಹೈದರಾಲಿ ಅವರಿಂದ ರಾಜ್ಯಕ್ಕೆ ಕೊಡುಗೆ ಏನು? ಮೈಸೂರು ಮಹರಾಜರ ತಿನ್ನುವ ಊಟದಲ್ಲಿ ವಿಷ ಹಾಕಿದವರು ಟಿಪ್ಪು ಎಂದು ಮಾಜಿ ಸಂಸದ ಎಸ್.ಮುನಿಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಕೋಲಾರದಲ್ಲಿ ಟಿಪ್ಪು ಜಯಂತಿ ಆಚರಣೆ ಕುರಿತು ವರದಿಗಾರರೊಂದಿಗೆ ಮಾತನಾಡಿದ ಎಸ್.ಮುನಿಸ್ವಾಮಿ ರಾಜ್ಯದ ದೇವಾಲಯಗಳನ್ನು ಮಸೀದಿ ಮಾಡಿದ ಕೀರ್ತಿ ಟಿಪ್ಪುಗೆ ಸಲ್ಲುತ್ತದೆ. ಮೈಸೂರು ಮಹರಾಜರ ತಿನ್ನುವ ಊಟದಲ್ಲಿ ವಿಷ ಹಾಕಿದವರು ಟಿಪ್ಪು. ದೇಶಕ್ಕೆ ಮಹಾನ್ ಕೊಡುಗೆ ಕೊಟ್ಟುವರು ರಾಜ್ಯದಲ್ಲಿ ಇದ್ದಾರೆ. ರಾಷ್ಟ್ರಕವಿ ಕುವೆಂಪು, ಮಾಸ್ತಿ ವೆಂಕಟೇಶ್ವರ್ ಅಯ್ಯಂಗಾರ್, ಸಾಲು ಮರದ ತಿಮ್ಮಕ್ಕ ಅವರ ಜಯಂತಿ ಆಚರಣೆ ಮಾಡಲಿ ಧರ್ಮ ವಿರೋಧಿ ಮತ್ತು ಮತಾಂತರ ಟಿಪ್ಪು ಜಯಂತಿ ಆಚರಣೆ ಕೈಬಿಡಬೇಕು ಎಂದಿದ್ದಾರೆ.
ದ್ವೇಶ ಭಾಷಣ ಮಾಡುವವರ ವಿರುಕ್ರ ಕಾನೂನು ಕ್ರಮ ವಿಚಾರ ಸಂಬಂಧಪಟ್ಟಂತೆ ಮಾತನಾಡಿದ ಅವರು ದ್ವೇಷ ಭಾಷಣ ಮಾಡುವುದುಬಸಿಎಂ ಸಿದ್ದರಾಮಯ್ಯ ಮೊದಲು ಅವರ ಮೇಲೆ ಪ್ರಕರಣ ದಾಖಲಿಸಲಿ. ಒಂದು ಸಮುದಾಯವನ್ನು ಮೆಚ್ಚಿಸಲು ಮುಂದಾಗಿರುವ ಸಿದ್ದರಾಮಯ್ಯ. ರಾಜ್ಯದಲ್ಲಿ ಬಹುಸಂಖ್ಯಾತರು ಯಾರು ಅವರಿಗೆ ಮತ ನೀಡಿಲ್ಲವಾ?ಮಹಿಳೆಯರಿಗೆ ಅಗೌರವ ತರುವ ರೀತಿಯಲ್ಲಿ ಮಾತನಾಡಿದ್ದಾರೆ.ನಿರ್ಮಲ ಸೀತರಾಮನ್ ಬಗ್ಗೆ ಏಕವಚನದಲ್ಲಿ ಮಾತನಾಡಿರುವ ಸಿದ್ದರಾಮಯ್ಯ ಕ್ಷಮೆ ಕೇಳಬೇಕು ಎಂದು ಹೇಳಿದ್ದಾರೆ.
ವಂದೇ ಮಾತರಂ ವಿರೋಧ ಕುರಿತು ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದವರು ಇಡೀ ದೇಶಕ್ಕೆ ವಿರೋಧಿಗಳು. ಹಿಂದು ಸಂಸ್ಕೃತಿಗೆ ವಿರೋಧಿಗಳು ಕಾಂಗ್ರೆಸ್ ನವರು. ಪಾಕಿಸ್ತಾನದ ಏಜೆಂಟರಂಟೆ ವರ್ತನೆ ಮಾಡ್ತಿದ್ದಾರೆ. ನಾಟಿ ಕೋಳಿ ತಿನ್ನುವುದನ್ನು ಬಿಟ್ಟು, ದೇಶದ ಅಭಿವೃದ್ದಿ ಬಗ್ಗೆ ಚಿಂತನೆ ಮಾಡಲಿ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ : ನೀವು ನನ್ನ ಶಕ್ತಿ ; ‘ಡೆವಿಲ್’ ರಿಲೀಸ್ಗೂ ಮೊದಲೇ ಅಭಿಮಾನಿಗಳಿಗೆ ದರ್ಶನ್ ಪ್ರೀತಿಯ ಪತ್ರ



















