ಜಗಳೂರು : ಪದವಿ ಪೂರೈಸಿ ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳನ್ನೂ ಬರೆದರೂ ಸರಕಾರಿ ಉದ್ಯೋಗ ಸಿಗದೆ ನೊಂದು ಯುವಕನೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಗುಡ್ಡದ ಲಿಂಗಣ್ಣನ ಹಳ್ಳಿಯಲ್ಲಿ ಸೋಮವಾರ ನಡೆದಿದೆ.
ಗುಡ್ಡದಲಿಂಗಣ್ಣನಹಳ್ಳಿಯ ಅಂಜಿನಪ್ಪ (26) ಮೃತ ಯುವಕ. ತಮ್ಮ ಮನೆಯ ಮೇಲಿನ ಕೊಠಡಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಓದುತ್ತಿದ್ದ ಅಂಜಿನಪ್ಪ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾತ್ರಿ ಊಟಕ್ಕೆ ಬಂದಿಲ್ಲ ಎಂದು ಮನೆಯವರು ಬಾಗಿಲು ಬಡಿದರೂ ಮಗ ಬಾಗಿಲು ತೆಗೆದಿಲ್ಲ.
ಮಲಗಿರಬಹುದೇನೋ ಎಂದು ಭಾವಿಸಿದ ಪೋಷಕರು ಸುಮ್ಮನಾಗಿದರು. ಬೆಳಗ್ಗೆ ಮತ್ತೆ ಬಾಗಿಲು ತಟ್ಟಿದರೂ ಅಂಜಿನಪ್ಪ ಬಾಗಿಲು ತೆಗೆದಿಲ್ಲ. ನಂತರ ಕಿಟಕಿಯಿಂದ ನೋಡಿದಾಗ ಮಗ ನೇಣು ಬಿಗಿದು ಕೊಂಡಿದ್ದು ಕಾಣಿಸಿತು. ಬಿಳಿಚೋಡು ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಗಿಲ್ಲಿ ಮಾತಿಗೆ ಅತ್ತ ಕಾವ್ಯ : ಗಿಲ್ಲಿ ಆ ಚುಚ್ಚು ಮಾತ್ನಾಡಿದ್ದು ಯಾಕೆ ಗೊತ್ತಾ?



















