ಚಿಕ್ಕಬಳ್ಳಾಪುರ : ಪ್ರಿಯತಮೆಯ ಮನೆಯಲ್ಲೇ ಬೆಂಕಿಗೆ ಪ್ರಿಯಕರ ಬಲಿಯಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲ್ಲೂಕು ಹಂಪಸಂದ್ರ ಗ್ರಾಮದಲ್ಲಿ ನಡೆದಿದೆ.
ಆತ್ಮಹತ್ಯೆಗೆ ಯತ್ನಿಸಿದ ಗಗನಶಂಕರ್(27) ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವ ವ್ಯಕ್ತಿ. ಪೊಲೀಸರು ಪರೀಶಿಲನೆ ನಡೆಸಿದ್ದು, ತನಿಖೆಯಲ್ಲಿ ಅಕ್ರಮ ಸಂಬಂಧ ಶಂಕೆ ವ್ಯಕ್ತವಾಗಿದೆ.
ಪತ್ನಿಗೆ ಸೋಫಾ ಕೊಡಿಸಿದ್ದಕ್ಕೆ ಪ್ರಿಯತಮೆ ಖ್ಯಾತೆ ತೆಗೆದಿದ್ದಳು. ಹಾಗಾಗಿ ಪ್ರಿಯತಮೆ ತನ್ನ ಮನೆಗೆ ಕರೆಸಿದ್ದಳು. ಅಲ್ಲಿ ಮಾತಿನ ಚಕಮಕಿ ನಡೆದು ಗಲಾಟೆ ಆರಂಭವಾಗಿದೆ. ಜಗಳದ ವೇಳೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದನು ಎನ್ನಲಾಗಿದೆ.
ಆದರೆ ಗಗನ್‌ಶಂಕರ್ ಪತ್ನಿಯು ಪ್ರಿಯತಮೆ ಮತ್ತು ಆಕೆಯ ಗಂಡನೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆಂದು ದೂರು ನೀಡಿದ್ದಾರೆ. ಮೃತನ ಪೋಷಕರು ಗುಡಿಬಂಡೆ ಠಾಣೆ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.
ಇದನ್ನೂ ಓದಿ : ಮದ್ಯ ಮಾರಾಟಕ್ಕಿಳಿದ ಯುವರಾಜ್ ಸಿಂಗ್ | ಭಾರತದ ಈ ರಾಜ್ಯಗಳಲ್ಲಿ ಮಾತ್ರ ಲಭ್ಯ!



















