ಕಳೆದ ವಾರ ಸುದೀಪ್ ಅವರ ಮುಂದೆಯೇ ರಜತ್ ಹಾಗೂ ಧ್ರುವಂತ್ ಜಗಳ ಮಾಡಿಕೊಂಡಿದ್ದರು. ಇದೀಗ ಮತ್ತೆ ಮನೆಯಲ್ಲಿ ನಾಮಿನೇಶನ್ ಸಂದರ್ಭದಲ್ಲಿ ಕಿತ್ತಾಡಿಕೊಂಡಿದ್ದಾರೆ. ಧ್ರುವಂತ್ ಅವರನ್ನು ಹೊಡೆಯಲು ರಜತ್ ಮುಂದಾಗಿದ್ದರು. ಕಾವ್ಯ ಅವರು ರಜತ್ ಹಾಗೂ ಗಿಲ್ಲಿಯನ್ನು ನಾಮಿನೇಟ್ ಮಾಡಿದ್ದಾರೆ.
ʻಎಲ್ಲೋ ಒಂದೇ ಕಡೆ ಸೀಮಿತ ಆಗಿಬಿಟ್ರೇನೊ ಅನ್ನಿಸುತ್ತಿದೆʼ ಎಂದಿದ್ದಾರೆ. ಅದಕ್ಕೆ ರಜತ್ ಕೋಪಗೊಂಡು, ʻತಮಾಷೆನೇ ಮಾಡಬಾರದಾ? ಈ ಮನೆಯಲ್ಲಿ? ತಲೆ ಏನಾದರೂ ಕೆಟ್ಟು ಹೋಗಿದ್ಯಾʼ ಅಂತ ಕೂಗಾಡಿದ್ದಾರೆ. ಅದೇ ವೇಳೆಗೆ ಧ್ರುವಂತ್ ಹಾಗೂ ರಜತ್ ನಡುವೆ ಮಾತಿನ ಚಕಮಕಿ ನಡೆದಿದೆ.
ಅದೇ ವೇಳೆಗೆ ಧ್ರುವಂತ್ ಅವರು ರಜತ್‌ಗೆ ಇದೇನು ಲಾಸ್ಟ್ ಸೀಸನ್ ಅಂದುಕೊಂಡಿದ್ದೀಯಾ? ಗಿಲ್ಲಿ ಹತ್ರ ಇಟ್ಟುಕೋ ಎಂದಿದ್ದಾರೆ. ರಜತ್‌ಗೆ ಇದು ಕೋಪ ತರಿಸುವಂತೆ ಮಾಡಿದೆ. ಅಷ್ಟೇ ಅಲ್ಲ ಧ್ರುವಂತ್ ಮೇಲೆ ಹರಿಹಾಯ್ದಿದ್ದಾರೆ.
ಇದನ್ನೂ ಓದಿ : ಅನಗತ್ಯ ಜಗಳಕ್ಕೆ ಇಳಿಯಬೇಡಿ, ನಿಮ್ಮ ಸೋಲಿಗೆ ಕಾಯುವವರಿದ್ದಾರೆ : ಗಂಭೀರ್‌ಗೆ ಆಕಾಶ್ ಚೋಪ್ರಾ ಕಿವಿಮಾತು



















