ಚಾಮರಾಜನಗರ: ನಾಗರಹೊಳೆ, ಬಂಡೀಪುರಗಳ ಅರಣ್ಯ ಪ್ರದೇಶಗಳಲ್ಲಿ ಸಫಾರಿಯನ್ನು ಸ್ಥಗಿತಗೊಳಿಸಿರುವುದ ಕಾರಣ ಆ ಭಾಗದಲ್ಲಿರುವ ರೆಸಾರ್ಟ್, ಹೋಟೆಲ್‌ಗಳಿಗೆ ಹೋಗುವವರ ಸಂಖ್ಯೆ ಕಡಿಮೆಯಾಗಿದೆ. ಈ ಹಿನ್ನೆಲೆ ಹೋಟೆಲ್ ಉದ್ಯಮಕ್ಕೆ ಭಾರೀ ಹಿನ್ನಡೆಯಾಗಿದೆ ಎಂದು ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಗೌರವಾಧ್ಯಕ್ಷ ಪಿ.ಸಿ. ರಾವ್ ತಿಳಿಸಿದ್ದಾರೆ.
ಈ ವರ್ಷ ಹೋಟೆಲ್ ಉದ್ಯಮಿಗಳು ಅಂದಾಜು 2 ಲಕ್ಷದಷ್ಟು ಪ್ರವಾಸಿಗರ ನಿರೀಕ್ಷೆಯಲ್ಲಿದ್ದರು. ಆದರೆ ಸಫಾರಿ ಬಂದ್ ಮಾಡಿದ ಹಿನ್ನೆಲೆ ಬರುವವರ ಸಂಖ್ಯೆಯಲ್ಲಿ ಇಳಿಕೆಗಿದೆ. ಹೀಗಾಗಿ, ಸರಿಸುಮಾರು 100 ಕೋಟಿಯಷ್ಟು ನಷ್ಟವಾಗುವ ಸಾಧ್ಯತೆ ಇದೆ.ಆದ್ದರಿಂದ ಆದಷ್ಟು ಬೇಗ ಸಫಾರಿಗಳನ್ನು ಶುರುಮಾಡುವಂತೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಮದುವೆ ಸಮಾರಂಭದಲ್ಲಿ ಕುಸಿದು ಬಿದ್ದ ಮೇಲ್ಛಾವಣಿ | 20ಕ್ಕೂ ಅಧಿಕ ಮಂದಿಗೆ ಗಾಯ



















