ಇಸ್ಲಾಮಾಬಾದ್: ದಿತ್ವಾ ಚಂಡಮಾರುತದಿಂದ ತತ್ತರಿಸಿರುವ ಶ್ರೀಲಂಕಾಗೆ ಪಾಕಿಸ್ತಾನ ಒಂದು ವರ್ಷದ ಎಕ್ಸಪೈರಿ ಡೇಟ್ ಆಹಾರ ಸಾಮಗ್ರಿಗಳನ್ನು ಕಳುಹಿಸುವ ಮೂಲಕ ವಿವಾದಕ್ಕೆ ಸಿಲುಕಿದೆ.
ʻಪಾಕಿಸ್ತಾನ ಸರ್ಕಾರ ಎಂದೆಂದಿಗೂ ಶ್ರೀಲಂಕಾದ ಜೊತೆಗೆ ನಿಲ್ಲುತ್ತದೆʼ ಎಂದು ಟ್ವಿಟರ್‌ನಿಂದ ಪರಿಹಾರ ಸಾಮಗ್ರಿಗಳ ಪ್ಯಾಕೆಟ್‌ಗಳ ಫೋಟೋಗಳನ್ನು ಪಾಕಿಸ್ತಾನ ಸರ್ಕಾರ ಎಕ್ಸ್‌ನಲ್ಲಿ ಹಂಚಿಕೊಂಡಿದೆ. ಈ ಫೋಟೋ ಕಂಡ ನೆಟ್ಟಿಗರು ಅದರ ಮೇಲೆ ’10/2024′ ಎಂಬ ಎಕ್ಸ್‌ಪೈರಿ ದಿನಾಂಕವಿರುವುದನ್ನು ಪತ್ತೆ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಸದ್ಯ ಇದು ‘ಎಕ್ಸ್’ನಲ್ಲಿ ವೈರಲ್ ಆಗಿದ್ದು, ಪಾಕಿಸ್ತಾನದ ಈ ವರ್ತನೆಗೆ ಟೀಕೆ ವ್ಯಕ್ವಾಗುತ್ತಿದೆ.

ಒಂದೆಡೆ ಪಾಕಿಸ್ತಾನದ ಈ ಎಡವಟ್ಟಿನ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿಂದೆನೂ ಹೀಗೆ ಮಾಡಿದ್ರಿ. ಅದನ್ನ ತಿದ್ದಿಕೊಳ್ಳುವ ಮನಸ್ಸಿಲ್ವ. ಹಳೆ ಚಾಳಿಯನ್ನು ಎಂದು ಬಿಡ್ತೀರಾ ಎಂದು ಕಾಮೆಂಟ್ ಮಾಡಿದ್ದಾರೆ.
ಝಹಕ್ ತನ್ವೀರ್ ಎಂಬುವವರು ಟ್ವೀಟ್ ಮಾಡಿದ್ದು, ಎಂತಹ ನಾಚಿಕೆಗೇಡಿನ ಸಂಗತಿ! ಶ್ರೀಲಂಕಾ ಪ್ರವಾಹ ಪೀಡಿತರಿಗೆ, ಪಾಕಿಸ್ತಾನವು ಅವಧಿ ಮೀರಿದ ಆಹಾರ ಪದಾರ್ಥಗಳನ್ನು ಕಳುಹಿಸುತ್ತಿದೆ. ಇದು ಅತ್ಯಂತ ಅಸಹ್ಯಕರ ಕೃತ್ಯ ಎಂದು ಟ್ವೀಟ್ ಮಾಡಿದ್ದಾರೆ.
ಶ್ರೀಲಂಕಾ ದಶಕಗಳಲ್ಲೇ ಅತ್ಯಂತ ಭೀಕರವಾದ ನೈಸರ್ಗಿಕ ವಿಕೋಪದಿಂದ ತತ್ತರಿಸಿದೆ. ನೂರಾರು ಮಂದಿ ಮೃತಪಟ್ಟಿದ್ದಾರೆ. ಸಾವಿರಾರು ಜನರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಜನರ ಮೂಲಸೌಕರ್ಯಗಳು ಹಾನಿಗೊಳಗಾಗಿವೆ. ಸುರಕ್ಷಿತ ಆಹಾರ ಮತ್ತು ವೈದ್ಯಕೀಯ ಸರಬರಾಜುಗಳ ತುರ್ತು ಕೊರತೆಯಿದೆ. ಅವಧಿ ಮುಗಿದ ಸಾಮಗ್ರಿಗಳ ಸಹಾಯವನ್ನು ಕಳುಹಿಸುವ ಮೂಲಕ ಪಾಕಿಸ್ತಾನ ಟೀಕೆಗೆ ಗುರಿಯಾಗಿದೆ. ವಿಪತ್ತು ನಿರ್ವಹಣಾ ಕೇಂದ್ರ ಮತ್ತು ವಿದೇಶಾಂಗ ಸಚಿವಾಲಯ ಎರಡನ್ನೂ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ : ಪೊಲೀಸರನ್ನೇ ಕಚ್ಚಲು ಮುಂದಾದ ವಿಜಯ್ ಪಕ್ಷದ ಕಾರ್ಯಕರ್ತ : ಅಕ್ರಮ ಬಾರ್ ವಿರುದ್ಧದ ಪ್ರತಿಭಟನೆಯಲ್ಲಿ ಹೈಡ್ರಾಮಾ!



















