ಅಮೆರಿಕ : ಅಮೆರಿಕಾದ ಹವಾಯಿಯಲ್ಲಿ ಪ್ರಕೃತಿಯ ಶಕ್ತಿ ಮತ್ತೆ ಭಾರೀ ಆರ್ಭಟ ಮಾಡಿದೆ. ಕಿಲೌಯಾ ಜ್ವಾಲಾಮುಖಿ ಮರು ಸ್ಪೋಟಗೊಂಡಿದ್ದುಈ ಬಾರಿ ಒಂದೇ ಅಲ್ಲ. ತ್ರಿವಳಿ ಲಾವರಸ ಕಾರಂಜಿಗಳು! 1,000 ಅಡಿ ಎತ್ತರಕ್ಕೆ ಹಾರಿವೆ.. ಬೆಂಕಿಯ ಉಂಡೆಗಳು ಆಕಾಶಕ್ಕೆ ಚಿಮ್ಮಿದ ದೃಶ್ಯಗಳನ್ನ ನೋಡಿದರೆ, ಅದು ಬೆಂಕಿಯ ಸಮುದ್ರವೇ ಅನ್ನಿಸುವಷ್ಟು ಭೀಕರವಾಗಿದೆ.
ಹವಾಯಿ ಪ್ರಪಂಚದ ಬಿಗ್ ಐಲೆಂಡ್‌ನಲ್ಲಿ ಒಂದು. ಇಲ್ಲಿ ಕಿಲೌಯಾ ಪರ್ವತದಲ್ಲಿ ಜ್ವಾಲಾಮುಖಿಯೂ ಸಕ್ರಿಯವಾಗಿರುತ್ತದೆ. ಇತ್ತೀಚಿನ ಸ್ಪೋಟದಲ್ಲಿಅಪಾಯಕಾರಿಯಾದ ದೃಶ್ಯ ಒಂದು ಸೆರೆಯಾಗಿದೆ. ಒಂದೇ ವೇಳೆ ಮೂರು ದಿಕ್ಕಿನಿಂದ ತ್ರಿವಳಿ ಲಾವಾ ಕಾರಂಜಿಗಳು ಸಿಡಿದಿವೆ.. ಸ್ಫೋಟದ ಮೊದಲ ನಿಮಿಷಗಳಲ್ಲಿ, ಭೂಗರ್ಭದಲ್ಲಿದ್ದ ಮ್ಯಾಗ್ಮಾ ಹಠಾತ್ ಒತ್ತಡದಿಂದ ಮೇಲಕ್ಕೆ ಏರಿ… ಕ್ರೇಟರ್‌ನ ಮೂರು ವಿಭಿನ್ನ ದ್ವಾರಗಳನ್ನು ಒಡೆಯುತ್ತದೆ. ಆ ದ್ವಾರಗಳಿಂದ ಹೊರಬಂದ ಲಾವಾರಸ ಬೆಂಕಿಯ ಸೂಜಿಯಂತೆ. ಭೀಕರ ವೇಗದಲ್ಲಿ ಮೇಲಕ್ಕೆ ಚಿಮ್ಮಲು ಪ್ರಾರಂಭಿಸಿದೆ.
ಈ ಜ್ವಾಲಮುಖಿ ಕಾರಂಜಿಯು ಅಂದಾಜು 1,000 ಅಡಿ ಮೂರು ಫುಟ್ಬಾಲ್ ಮೈದಾನಗಳಷ್ಟು ವಿಸ್ತೀರ್ಣಕ್ಕೆ ಲಾವಾರಸವನ್ನು ಥಳಕಿಸಿದ ದೃಶ್ಯ, ವಿಜ್ಞಾನಿಗಳನ್ನೂ ಬೆಚ್ಚಿಬೀಳುವಂತೆ ಮಾಡಿದೆ. ಈ ಪ್ರವಾಹದ ಜೋರಿನಿಂದ ಸ್ಫೋಟ ಸ್ಥಳದ ಕ್ಯಾಮೆರಾಗಳೂ ಕರಗಿ ನಿಷ್ಕ್ರಿಯಗೊಂಡಿದೆ. ಅಷ್ಟೆಲ್ಲಾ ಎತ್ತರಕ್ಕೆ ಲಾವಾ ಚಿಮ್ಮಲು..ಭೂಗರ್ಭದಲ್ಲಿರುವ ಮ್ಯಾಗ್ಮಾ ಚೇಂಬರ್‌ನಲ್ಲಿ ಅತಿಯಾದ ಒತ್ತಡ ನಿರ್ಮಾಣವಾಗಿರಬೇಕು ವಿಜ್ಙಾನಿಗಳು ಅಭಿಪ್ರಾಯಪಟ್ಟಿದ್ದಾರೆ. USGS ವಿಜ್ಞಾನಿಗಳ ಪ್ರಕಾರ, ಕಿಲೊಯಾದ ಮ್ಯಾಗ್ಮಾ ಚೇಂಬರ್ ಹಲವು ತಿಂಗಳುಗಳಿಂದ ನಿಧಾನವಾಗಿ ತುಂಬುತ್ತಿತ್ತು. ಇದರಿಂದ ಲಾವಾರಸದ ಆರ್ಭಟ ಜೋರಾಗಿ ಫೌಂಟೇಷನ್‌ನ ಅಂಚುಗಳಲ್ಲಿ ಲಾವರಸವನ್ನ ಗಾಳಿಗೆ ಎಸೆದಿದೆ ಇದು ತಣ್ಣಗಾದಗ ಆಕಾಶದಲ್ಲಿ ಹೊಗೆಯಾಗಿ ತುಂಬಿಕೊಂಡಿದೆ ಎಂದಿದ್ದಾರೆ.
ಈ ಸ್ಫೋಟದ ಪರಿಣಾಮವಾಗಿ, ವಾತಾವರಣದಲ್ಲಿ ವಿಷಕಾರಿ ಸಲ್ಪರ್ ಡೈಆಕ್ಸೈಡ್ ಪ್ರಮಾಣ ತೀವ್ರವಾಗಿ ಏರಿದೆ.. ಇದ್ರಿಂದ ಸುತ್ತಮುತ್ತಿನ ಪ್ರದೇಶದಲ್ಲಿ ಲ್ಯಾಂಡ್ ಕ್ರ್ಯಾಕ್ಸ್‌ಗಳನ್ನು ಮತ್ತಷ್ಟು ಹೆಚ್ಚಾಗಿಸಿವೆ. ಕೆಲವು ಪ್ರದೇಶಗಳಲ್ಲಿ ಭೂಮಿಯಿಂದ ಬಿಸಿಯ ನೀರಿನ ಬಾಷ್ಪ ಹೊರಹೊಮ್ಮುತ್ತಿರುವುದು ವಿಜ್ಞಾನಿಗಳನ್ನು ಇನ್ನಷ್ಟು ಎಚ್ಚರದಲ್ಲಿರಿಸಿದೆ. ಮಾಗ್ಮಾ ಚೇಂಬರ್ ಒಳಗಿನ ಒತ್ತಡ ಸಾಮಾನ್ಯ ಮಟ್ಟಕ್ಕಿಂತ ಮೂರು ಪಟ್ಟು ಹೆಚ್ಚಾಗಿದೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೇ ನಿಗಾವಹಿಸಿದೆ. ಲಾವಾ ಹರಿವು ಈಗಾಗಲೇ 5 ಮೈಲಿ ವ್ಯಾಪ್ತಿಯಲ್ಲಿ ವ್ಯಾಪಿಸಿದೆ.. ವರದಿ ಪ್ರಕಾರ ಈ ಜ್ವಾಲಾಮುಖಿಯ ಸದ್ದು 20 ಕಿಮೀ ದೂರದವರೆಗೂ ಕೇಳಿಸುತ್ತಿತ್ತು ಮತ್ತು ಭೂಮಿಯ ಒಳಗೆ ಯಾವುದೋ ಬೃಹತ್ ಎಂಜಿನ್ ಓಡುತ್ತಿರುವಂತೆ ಕಂಪನದ ಅನುಭವವಾಗುತ್ತಿತ್ತು ಎಂದು ತಿಳಿದಿದೆ.
ಕಿಲೊಯಾ ಪರ್ವತದ ಸತ್ತಮತ್ತಲಿರುವ ಇರುವ ಪ್ರದೇಶದ ಜನರು ಮತ್ತೆ ಒಂದು ಬಾರಿನಡುಗಿದ್ದಾರೆ.. 2018ರಲ್ಲಿ ಮನೆಗಳನ್ನು ಕಳೆದುಕೊಂಡ ಹಲವರು ಈಗಿನ ಸ್ಫೋಟದ ಸದ್ದು, ಭೂ ಕಂಪನ, ಆಕಾಶಕ್ಕೆ ಏರುತ್ತಿರುವ ಕೆಂಪು ಜ್ವಾಲಾಕಿರಣಗಳನ್ನು ನೋಡುತ್ತಿದ್ದಂತೆ ‘ಅದೆಲ್ಲ ಪುನಃ ನೆನಪಾಗುತ್ತಿದೆʼ ಎಂದು ಭಯ ವ್ಯಕ್ತಪಡಿಸುತ್ತಿದ್ದಾರೆ.
ವಾಯಿ ದ್ವೀಪಗಳ ಉದಯಕ್ಕೆ ಕಾರಣವಾಗಿರುವ ‘ಹಾಟ್‌ಸ್ಪಾಟ್’ ಸಿಸ್ಟಂ ಇಂದಿಗೂ ಚುರುಕಾಗಿರುವುದನ್ನು ಈ ಸ್ಫೋಟ ಮತ್ತೊಮ್ಮೆ ಸಾಬೀತುಪಡಿಸಿದೆ. ಪ್ಯಾಸಿಫಿಕ್ ಪ್ಲೇಟ್ ನಿಧಾನವಾಗಿ ಉತ್ತರಪಶ್ಚಿಮಕ್ಕೆ ಸರಿಯುತ್ತಿದ್ದಂತೆ, ಅದರ ಕೆಳಗೆ ಇರುವ ಹಾಟ್‌ಸ್ಪಾಟ್ ಭೂಮಿಯ ಒಳಗಿನ ಅಗ್ನಿಯನ್ನ ಮೇಲಕ್ಕೆ ತಳ್ಳುತ್ತಲೇ ಇದೆ. 2018ರ ನಂತರ ಇದು ಕಿಲೊಯಾದಲ್ಲಿ ಆದ ಅತಿ ದೊಡ್ಡ ಸ್ಫೋಟ ಇದಾಗಿದೆ. ಇದರಿಂದ ಮಾನುಷ್ಯನ ಮೇಲೆ ತೀವ್ರ ಉಸಿರಾಟದ ತೊಂದರೆ, ಕಣ್ಣು ಮತ್ತು ಗಂಟಲು ಉರಿ ಕಾಣಿಸಿಕೊಳ್ಳುತ್ತದೆ.
ಇದನ್ನೂ ಓದಿ : ಇಂಡಿಗೋ ಸಂಕಷ್ಟಕ್ಕೆ ತೆರೆ : ಶೇ.95ರಷ್ಟು ವಿಮಾನ ಸೇವೆ ಪುನರಾರಂಭ, ಪ್ರಯಾಣಿಕರು ನಿರಾಳ



















