ವೀಕೆಂಡ್ ಪಂಚಾಯ್ತಿಯಲ್ಲಿ ಕಿಚ್ಚ ಸುದೀಪ್ ಅವರು ಕೆಲ ಸ್ಪರ್ಧಿಗಳ ವಿಚಾರ ಮಾತ್ರವಲ್ಲ, ತಮ್ಮ ಬಗ್ಗೆ ಇರೋ ಗಾಸಿಪ್, ಆರೋಪ, ಅದೆಲ್ಲದಕ್ಕೂ ಕ್ಲಾರಿಟಿ ಕೊಟ್ಟೇ ಹೇಳ್ತಾರೆ. ಒಂದು ಸ್ಪಷ್ಟನೆಗೆ ಬಿಗ್‌ಬಾಸ್ ವೇದಿಕೆಯನ್ನು ಸುದೀಪ್ ಬಳಸಿಕೊಂಡರು. ಧ್ರುವಂತ್ ಅವರು ಪ್ರತಿ ಬಾರಿ ಬಿಗ್ ಬಾಸ್‌ಗೆ ಮನೆಯಿಂದ ಹೊರಗೆ ಕಳಹಿಸಿ ಎಂದು ಮನವಿ ಮಾಡ್ತಾರೆ. ಈ ವಾರ ನಾಮಿನೇಶನ್ ಮುಂಚೆಯೇ ಕ್ಯಾಮರ ಮುಂದೆ ಬೇಡಿಕೆ ಇಟ್ಟರು. ಇದಾದ ಬಳಿಕ ಮೊದಲು ಸೇಫ್ ಆಗಿದ್ದು ಧ್ರುವಂತ್. ಇಷ್ಟು ಹೇಳಿದ ಮೇಲೆ ಕಿಚ್ಚ ಒಂದು ಸ್ಪಷ್ಟನೆ ಕೊಡುತ್ತಾರೆ.
‘ಹೋಗಬೇಕಾದರೆ ನನ್ನನ್ನು ಕೇಳಿಕೊಂಡು ಹೋದಿರಾ ನೀವು? ನಿಮಗೆ ಮಾತ್ರವಲ್ಲ ಇನ್ನೂ ಕೆಲವರಿಗೆ ತಪ್ಪು ಅಭಿಪ್ರಾಯ ಇರುತ್ತವೆ, ಕೆಲವರು ಹೊರಗೆ ಕೂತುಕೊಂಡು ಉದ್ದುದ್ದ ಮಾತನಾಡುವವರು ಸಹ ಇದ್ದಾರೆ ಅವರಿಗೆಲ್ಲ ಸೇರಿ ಹೇಳುತ್ತೀನಿ. ನನ್ನ ಹುಡುಗುರು,ʼ ನನ್ನ ಶಿಷ್ಯ ಎಂದು ಇಷ್ಟು ಸೀಸನ್ ಅಲ್ಲಿ ಒಬ್ಬೇ ಒಬ್ಬನನ್ನು ಸಹ ನಾನು ಬಿಗ್ಬಾಸ್ಗೆ ಕಳಿಸಿಲ್ಲ. ಮೇಕಪ್ ಹಾಕುವ ಈ ವೇದಿಕೆ ಮೇಲೆ ನಿಂತು ಈ ಮಾತನ್ನು ಹೇಳುತ್ತಿದ್ದೀನಿ’ ಎಂದರು ಕಿಚ್ಚ.
‘ಬಿಗ್‌ಬಾಸ್ ಸ್ಪರ್ಧೆ ಬಹಳ ಪ್ರಾಮಾಣಿಕವಾಗಿ ನಡೆಯುತ್ತದೆ. ವೇದಿಕೆ ಮೇಲೆ ನೀವು ನಡೆದುಕೊಂಡು ಬರುವವರೆಗೆ ಮುಂದಿನ ಸ್ಪರ್ಧಿ ಯಾರು ಎಂಬುದನ್ನು ಸಹ ನಾನು ತಿಳಿದುಕೊಳ್ಳುವುದಿಲ್ಲ. ಈ ಕಾರ್ಯಕ್ರಮ ಬಹಳ ದೊಡ್ಡ ಕಾರ್ಯಕ್ರಮ, ನಿಮಗೆ ಅನುಕೂಲ ಆಗುವಂತೆ ಬಳಸಿಕೊಳ್ಳಿ. ಆದರೆ ಇಲ್ಲಿ, ನಿಮ್ಮನ್ನು ಒಳಗೆ ಕಳಿಸುವವನೂ ನಾನಲ್ಲ, ನಿಮ್ಮನ್ನು ಹೊರಗೆ ಕರೆಸಿಕೊಳ್ಳುವ ಅಧಿಕಾರವೂ ನನಗೆ ಇಲ್ಲ’ ಎಂದರು ಸುದೀಪ್.
ಇತ್ತೀಚೆಗಷ್ಟೆ ಮಾಜಿ ಬಿಗ್‌ಬಾಸ್ ಸ್ಪರ್ಧಿಯೊಬ್ಬರು, ಸುದೀಪ್ ತಮ್ಮ ಶಿಷ್ಯರನ್ನೇ ಬಿಗ್ಬಾಸ್ಗೆ ಕಳಿಸುತ್ತಾರೆ. ಉಗ್ರಂ ಮಂಜು, ತ್ರಿವಿಕ್ರಮ್, ವಿನಯ್, ರಜತ್ ಇಂಥವರನ್ನೇ ಕಳಿಸಲಾಗುತ್ತದೆ. ಅವರಿಗೆ ಮೈಲೇಜ್ ಕೊಡಲಾಗುತ್ತದೆ’ ಎಂಬ ಮಾತುಗಳನ್ನು ಹೇಳಿದ್ದರು. ಅದಕ್ಕೆ ಇದೀಗ ಸುದೀಪ್ ಪರೋಕ್ಷವಾಗಿ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ : ಹಂಪಿಯಲ್ಲಿ ಶ್ರೀ ವಿರೂಪಾಕ್ಷ ಫಲಪೂಜಾ ಮಹೋತ್ಸವ | ಹರಿದು ಬಂದ ಭಕ್ತ ಸಾಗರ



















