ಧಾರವಾಡ: ಧಾರವಾಡ ನಗರದ ಕಮಲಾಪುರ ಬಡಾವಣೆಯಲ್ಲಿ ಬಳಿ ಇರುವ ಭೂಮಿ 4 ಎಕ್ರೆ 15 ಗುಂಟೆ ಇದೆ. ಈ ಜಮೀನಿನನ್ನು ಜಮೀನುದಾರ ರುದ್ರಭೂಮಿಗೆಂದು ದಾನ ಕೊಟ್ಟಿದ್ದಾನೆ.
ಈ ಜಮೀನು ಮಲ್ಲಿಕಾರ್ಜುನಯ್ಯ ಹಿರೇಮಠ ರಪಾಟಿ ಎನ್ನುವವರ ಹೆಸರಿನಲ್ಲಿತ್ತು.ಕಳೆದ 300 ವರ್ಷಗಳಿಂದ ಕಮಲಾಪುರ, ಮಾಳಾಪುರ, ನಾರಾಯಣಪೂರ, ಪತ್ರೇಶ್ವರ ನಗರ ಮತ್ತು ಮರಾಠಾ ಗಲ್ಲಿ ಜನರು ಮೃತರ ಅಂತ್ಯಕ್ರಿಯೆ ನೆರವೇರಿಸುತ್ತಾ ಬಂದಿದ್ದರು, ಸ್ಥಳೀಯರು ಆ ಭೂಮಿಯನ್ನ ರುದ್ರಭೂಮಿಯಾಗಿಯೇ ಮೀಸಲಿಡುವಂತೆ ಆಗ್ರಹಿಸುತ್ತಾ ಬಂದಿದ್ದರು. ಆದ್ರೆ ಭೂಮಾಲೀಕ ಈ ಜಾಗದಲ್ಲಿ ಲೇಔಟ್ ನಿರ್ಮಿಸಲು ಚಿಂತನೆ ನಡೆಸಿದ್ದರು. ಇದಕ್ಕೆ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿತ್ತು, ಅಲ್ಲಿ ಲೇಔಟ್ ಆದ್ರೆ ಅಂತ್ಯಸಂಸ್ಕಾರಕ್ಕೆ ಸ್ಥಳವೇ ಇಲ್ಲದಂತಾಗುತ್ತದೆ ಎಂದು ಹೇಳಿದ್ದರು.
ಈ ಕಾರಣಕ್ಕೆ ದೊಡ್ಡ ಹೋರಾಟವನ್ನೂ ಮಾಡಿದ್ದರು. ಆ ಭೂಮಿಗೆ ಒಂದು ಫಲಕ ಹಾಕಿ, ಅದರಲ್ಲಿ ಯಾರೂ ಇದನ್ನು ಖರೀದಿಸಬೇಡಿ ಅಂತಾ ಎಚ್ಚರಿಕೆ ಕೊಟ್ಟಿದ್ದರು. ಆದರೀಗ ಖುದ್ದು ಮಾಲೀಕರೇ ಈ ಭೂಮಿಯನ್ನ ರುದ್ರಭೂಮಿಗೆ ದಾನ ಮಾಡಿದ್ದಾರೆ.
ಸ್ಥಳೀಯರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಹಿರೇಮಠ ಅವರು 1 ಎಕರೆ 15 ಗುಂಟೆ ಜಾಗವನ್ನ ಸ್ಮಶಾನಕ್ಕಾಗಿ ದಾನ ನೀಡಲು ನಿರ್ಧರಿಸಿದರು. ಇದರಿಂದಾಗಿ ಕಳೆದ ಹಲವಾರು ದಿನಗಳಿಂದ ಉಂಟಾಗಿದ್ದ ಕಗ್ಗಂಟು ಬಿಡಿಸಿದಂತಾಗಿದೆ.
ಇದನ್ನೂ ಓದಿ : ಗಿಲ್ಲಿ-ಕಾವ್ಯ Vs ರಾಶಿಕಾ-ಸೂರಜ್ | ಬಿಗ್‌ಬಾಸ್ ರಣರಂಗದಲ್ಲಿ ಅಸಲಿ ಆಟ ಶುರು



















