ಬಿಗ್ ಬಾಸ್ ಮರಾಠಿ ಸೀಸನ್ 5ರ ವಿನ್ನರ್ ಆಗಿದ್ದ ಸೂರಜ್ ನ. 29 ರಂದು ವಿವಾಹವಾದರು. ಸೂರಜ್ ಚವಾಣ್ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ತಮ್ಮ ವಿವಾಹ ಸಂಭ್ರಮದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಫ್ಯಾನ್ಸ್ ವಿಶ್ ಮಾಡಿದ್ದಾರೆ. ಟಿಕ್‌ಟಾಕ್ ತಾರೆ ಸೂರಜ್ ಚವಾಣ್ ಬಿಗ್ ಬಾಸ್ ಮರಾಠಿ ಸೀಸನ್ 5 ರಲ್ಲಿ ಭಾಗವಹಿಸಿ ಮಹಾರಾಷ್ಟ್ರದಲ್ಲಿ ತಮ್ಮ ಸರಳತೆಯಿಂದ ಪ್ರೇಕ್ಷಕರ ಹೃದಯ ಗೆದ್ದಿದ್ದರು.
ಸದ್ಯ ಬಾಲ್ಯದ ಗೆಳತಿ ಸಂಜನಾ ಗೋಫಾನೆ ಅವರನ್ನು ಪ್ರೀತಿಸಿ ಮದುವೆ ಆಗಿದ್ದಾರೆ ಎಂಬ ವದಂತಿ ಕೇಳಿಬಂದಿದೆ. ಸೂರಜ್ ಅವರ ವಿವಾಹದ ಹಲವು ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಸೂರಜ್ ಚವಾಣ್ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ತಮ್ಮ ವಿವಾಹ ಸಂಭ್ರಮದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಇವರ ಪೋಸ್ಟ್‌ನಲ್ಲಿ ಸಖತ್ ಟ್ರೆಡಿಶನಲ್ ಆಗಿ ಜೋಡಿ ಕಂಡಿದ್ದರು, ಇನ್ನೊಂದು ಪೋಸ್ಟ್‌ನಲ್ಲಿ ಕ್ಲಾಸಿ ಮಾಡರ್ನ್ ಲುಕ್‌ನಿಂದ ಫ್ಯಾನ್ಸ್ ಗಮನ ಸೆಳೆದಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಸೂರಜ್ ಅವರ ಸಹ-ಸ್ಪರ್ಧಿ ಆಗಿದ್ದ ಅಂಕಿತಾ ಪ್ರಭು ವಾಲಾವಲ್ಕರ್ ನವ ಜೋಡಿಗೆ ಶುಭ ಹಾರೈಸಿದರು.
ಇದನ್ನೂ ಓದಿ : ನಮ್ಮ ಮೆಟ್ರೋದಲ್ಲಿ 27 ಎಂಜಿನಿಯರ್ ಹುದ್ದೆಗಳ ನೇಮಕ : ಬಿಇ ಮುಗಿಸಿದವರಿಗೆ ಗುಡ್ ನ್ಯೂಸ್



















