ಕುಚಿಕು ಗೆಳಯರಾದ ರಘು ಹಾಗೂ ಗಿಲ್ಲಿ ಮಧ್ಯೆ ಬಿರುಕು ಮೂಡಿದೆ. ರಘು ಅವರು ಗಿಲ್ಲಿಯನ್ನೇ ನಾಮಿನೇಟ್ ಮಾಡಿದ್ದಾರೆ. ಗಿಲ್ಲಿ ಹಾಗೂ ರಘು ಇಬ್ಬರೂ ಕಿತ್ತಾಡಿಕೊಂಡಿದ್ದಾರೆ. ಸದಾ ಕಾಲ ರಘು ಅಕ್ಕ-ಪಕ್ಕನೇ ಗಿಲ್ಲಿ ನಟ ಕಾಣಿಸಿಕೊಳ್ಳುತ್ತಿದ್ದರು. ಎಷ್ಟೋ ಬಾರಿ ರಘು ತೊಡೆ ಮೇಲೆ ಗಿಲ್ಲಿ ಮಲಗಿರುತ್ತಿದ್ದರು. ಆದರೆ ಇವರಿಬ್ಬರ ಭಿನ್ನಾಭಿಪ್ರಾಯ ಕಂಡು ವೀಕ್ಷಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಇವರಿಬ್ಬರ ಭಿನ್ನಾಭಿಪ್ರಾಯ ಕಂಡು ವೀಕ್ಷಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟೇ ಅಲ್ಲ ಇದೀಗ ಬಾಹುಬಲಿ’ ಸಿನಿಮಾದ ಸೀನ್ ರೀ-ಕ್ರಿಯೇಟ್ ಮಾಡಿದ ನೆಟ್ಟಿಗರು ಪೋಸ್ಟರ್ ವೈರಲ್ ಆಗಿದೆ.
ಚೂರಿ ಇರಿಯುವ ಮೂಲಕ ನಾಮಿನೇಟ್ ಮಾಡುವ ಟಾಸ್ಕ್ ಅನ್ನು ನೀಡಲಾಗಿತ್ತು ಗಿಲ್ಲಿ ನಟನ ಬೆನ್ನಿಗೇ ರಘು ಚೂರಿ ಚುಚ್ಚಿ ನಾಮಿನೇಟ್ ಮಾಡಿದ್ದಾರೆ. ಅದನ್ನ ಕಂಡು ‘ಬಾಹುಬಲಿ’ ಸಿನಿಮಾದ ಸೀನ್ ರೀಕ್ರಿಯೇಟ್ ಆಗಿದೆ ಅಂತಿದ್ದಾರೆ ವೀಕ್ಷಕರು. ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವುದಕ್ಕೆ ಶುರು ಮಾಡಿದೆ.
ಮಾಳು ಬಳಿ ಇದ್ದ ಚೂರಿ ತೆಗೆದುಕೊಂಡು ಗಿಲ್ಲಿಗೆ ರಘು ಚುಚ್ಚಿ ನಾಮಿನೇಟ್ ಮಾಡಿದರು. ʻಮನೆಯಿಂದ ಆಚೆ ಹೋಗಬೇಕಾದರೆ ಒಳ್ಳೆಯವರ ಜೊತೆ ಫ್ರೆಂಡ್‌ಶಿಪ್ ಮಾಡ್ರಪ್ಪ ಗೊತ್ತಿರೋರೇ ಹೀಗೆ ಮಾಡಿದ್ರೆ ನಾವು ಎಲ್ಲಿಗೆ ಹೋಗೋದು ಅಂತʼ ಗಿಲ್ಲಿ ಅವರು ರಘುಗೆ ಹೇಳಿದರು.
ಇದನ್ನೂ ಓದಿ : BBK 12 | ನಾಮೀನೇಷನ್ನೇ ಇರಲಿ, ಟಾಸ್ಕೇ ಬರಲಿ ಗಿಲ್ಲಿ ತಮಾಷೆ ಮಾತ್ರ ನಿಲ್ಲಲ್ಲ


















