ಬಿಗ್‌ಬಾಸ್ ಸ್ಪರ್ಧಿಗಳ ಮಧ್ಯೆ ಪೈಪೋಟಿ ಹೆಚ್ಚಾಗಿದೆ. ನಾಮಿನೇಷನ್ ಪ್ರಕ್ರಿಯೆಯಲ್ಲಿ ಅತಿರೇಕದ ವರ್ತನೆಗಳ ನಡುವೆಯೂ ಗಿಲ್ಲಿ ಮಾತ್ರ ನಗಿಸೋದು ಬಿಟ್ಟಿಲ್ಲ. ನಿನ್ನೆ ಬಿಗ್ ಬಾಸ್ ಒಂದು ಟಾಸ್ಕ್ ಕೊಟ್ಟಿದ್ದರು. ಎಲ್ಲರಿಗೂ ಬೆನ್ನಿಗೆ ಬೆಂಡಿನ ಬಾಕ್ಸ್ ನೀಡಿದ್ದರು. ಇದಕ್ಕೆ ಚಾಕು ಚುಚ್ಚಿಕೊಂಡಿರುತ್ತದೆ. ನಾಮಿನೇಷನ್ ಮಾಡುವಾಗ ಚಾಕು ತೆಗೆದು ಬೇರೆಯವರ ಬೆನ್ನಿನ ಬಾಕ್ಸ್ಗೆ ಚುಚ್ಚಬೇಕು. ಯಾರ ಬಳಿ ಕಡಿಮೆ ಚಾಕು ಇರುತ್ತದೆಯೋ ಅವರು ನಾಮಿನೇಷನ್ನಿಂದ ಬಚಾವ್ ಆಗುತ್ತಾರೆ ಎಂದು.
ಯಾರ ಬಳಿ ಕಡಿಮೆ ಚಾಕು ಇರುತ್ತದೆಯೋ ಅವರು ನಾಮಿನೇಷನ್ನಿಂದ ಬಚಾವ್ ಆಗುತ್ತಾರೆ ಎಂದು. ಕೆಲವರು ತುಂಬಾ ಪರ್ಸನಲ್ ಆಗಿ ತೆಗೆದುಕೊಂಡು ಆಟ ಆಡುತ್ತ ಇದ್ದರೆ, ಗಿಲ್ಲಿ ಮಾತ್ರ, ಕೆಲವರ ಮಾತುಗಳನ್ನು ಪಾಸಿಟಿವ್ ಆಗಿಯೇ ಸ್ವೀಕರಿಸುತ್ತ, ಎಲ್ಲಿ ಮಾತನಾಡಬೇಕೋ ಅಲ್ಲಿ ಮಾತನಾಡುತ್ತ, ಸಖತ್ ಕಾಮಿಡಿ ಕೂಡ ಮಾಡಿದ್ದಾರೆ. ವೀಕ್ಷಕರು ಕೆಲವು ಲೈವ್ ಕ್ಲಿಪ್‌ವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಗಿಲ್ಲಿ ಈ ಮುಂಚೆ ಅದೆಷ್ಟೋ ಬಾರಿ ಮನೆಯಲ್ಲಿ ಗಲಾಟೆ ಆದಾಗ ಒತ್ತಡದ ಜೀವನ ಶೈಲಿಯಲ್ಲಿ ಮನೆಗೆ ಬಂದು TV ಸ್ವಿಚ್ ಆನ್ ಮಾಡಿದಾಗ ನಮಗೆ ಬೇಕಾಗಿರುವುದು ಹಾಸ್ಯವೇ ಹೊರತು ಗಲಾಟೆ ಅಥವಾ ನೆಗೆಟಿವ್ ಅಲ್ಲ. ಬಿಗ್ ಬಾಸ್ ಒಂದು ವ್ಯಕ್ತಿತ್ವದ ಆಟ. ಜನರಿಗೆ ಮನರಂಜನೆ ನೀಡೋದು ಕರ್ತವ್ಯ ಎಂದು ಗಿಲ್ಲಿ ಹೇಳಿದ್ದುಂಟು. ಹೆಚ್ಚಾಗಿ ಅಶ್ವಿನಿ ಅವರ ಬಳಿ ಗಲಾಟೆ ಆದಾಗ ಗಿಲ್ಲಿ ಈ ಮಾತನ್ನ ಹೇಳುತ್ತಿದ್ದರು.
ಅಂತೆಯೇ ನಿನ್ನೆ ಕೂಡ ಬಹುತೇಕ ಸ್ಪರ್ಧಿಗಳು ಗಿಲ್ಲಿಯನ್ನೇ ಟಾರ್ಗೆಟ್ ಮಾಡಿದ್ದಾರೆ. ವಂಶದ ಕುಡಿ ರಕ್ಷಿತಾ ಜೊತೆಗೆ ಕುಚಿಕು ರಘು ಕೂಡ ಗಿಲ್ಲಿ ವಿರುದ್ಧವೇ ಮಾತನಾಡಿದ್ದಾರೆ. ಆ ವೇಳೆ ಗಿಲ್ಲಿ ಖಡಕ್ ಆಗಿಯೇ ಉತ್ತರವನ್ನು ನೀಡುತ್ತಾ, ಉಳಿದ ಸಂದರ್ಭಗಳಲ್ಲಿ ಕಾಮಿಡಿ ಮಾಡುತ್ತ ಪ್ರೇಕ್ಷಕರನ್ನ ರಂಜಿಸಿದ್ದಾರೆ.
ರಘು ವಿಚಾರವಾಗಿ ಗಿಲ್ಲಿ, ʻಎಲ್ಲರೂ ಯಾರಿಗೆ ಚೂರಿ ಹಾಕಬೇಕು ಅಂತ ಯೋಚನೆ ಮಾಡಿದ್ರೆ, ಅಣ್ಣ ಯಾರಿಂದ ಎತ್ಕೋಬೇಕು ಅಂತ ಯೋಚನೆ ,ಮಾಡ್ತಿದ್ದಾರೆʼ ಅಂತ ಕಾಮಿಡಿ ಮಾಡಿದ್ದಾರೆ. ಅಷ್ಟೇ ಅಲ್ಲ ʻಒಂದು ಕಡೆ ವಂಶದ ಕುಡಿ ಕಾಟ ಆದರೆ, ಇನ್ನೊಂದು ಕಡೆ ನನ್ನ ಜೀವದ ಗೆಳಯನ ಕಾಟʼ ಅಂತ ಇಡೀ ಮನೆಮಂದಿಯನ್ನ ನಗಿಸಿದ್ದಾರೆ.
ಇದನ್ನೂ ಓದಿ : ಸುರಂಗದೊಳಗೆ ಕೆಟ್ಟು ನಿಂತ ಚೆನ್ನೈ ಮೆಟ್ರೋ : ಹಳಿಗಳ ಮೇಲೆ ನಡೆದು ಮುಂದಿನ ನಿಲ್ದಾಣ ತಲುಪಿದ ಪ್ರಯಾಣಿಕರು



















