ಬೀದರ್: ʻದಿತ್ವಾʼ ಚಂಡಮಾರುತದ ಎಫೆಕ್ಟ್‌ಗೆ ಇಂದು ಗಡಿ ಜಿಲ್ಲೆ ಬೀದರ್ ಮಂಜಿನ ನಗರಿಯಾಗಿ ಬದಲಾಗುವ ಜೊತೆ ಕೊರೆಯುವ ಚಳಿಯಿಂದ ಜನರು ಅಕ್ಷರಶಃ ತತ್ತರಿಸಿ ಹೋಗಿದ್ದಾರೆ.
10 ರಿಂದ 12 ಡಿಗ್ರಿ ಸೆಲ್ಸಿಯಸ್‌ನಷ್ಟು ಕನಿಷ್ಠ ತಾಪಮಾನ ದಾಖಲಾಗಿದ್ದು, ಈ ರಣ ಚಂಡಿ ಚಳಿಗೆ ವಾಕಿಂಗ್ ಸೇರಿದಂತೆ ಇನ್ನಿತರ ಕೆಲಸಗಳಿಗೆ ಮನೆಯಿಂದ ಹೊರಗೆ ಬರಲು ಜನರು ಭಯ ಭೀಳುತ್ತಿದ್ದಾರೆ. ದಿತ್ವಾ ಸೈಕ್ಲೋನ್ ಅಪ್ಪಳಿಸಿದ ಪರಿಣಾಮ ಬೀದರ್, ಮಡಿಕೇರಿ ರೀತಿ ಮಂಜಿನ ನಗರಿಯಾಗಿ ಬದಲಾಗಿದ್ದು ಇಡೀ ಜಿಲ್ಲೆಯಲ್ಲಿ ದಟ್ಟವಾದ ಮಂಜು ಆವರಿಸಿದೆ.
ಸದಾ ಜನರಿಂದ ತುಂಬಿರುತ್ತಿದ್ದ ಪ್ರಮುಖ ವಾಕಿಂಗ್ ಟ್ರ್ಯಾಕ್‌ಗಳು ಖಾಲಿ ಖಾಲಿಯಾಗಿ ಭೀಕೋ ಎನ್ನುತ್ತಿವೆ. ಬೆರಳೆಣಿಕೆಯಷ್ಟು ಜನ ಮಾತ್ರ ಸ್ವೆಟರ್, ಕೈಗೆ ಗೌಸ್ ಹಾಗೂ ಮಂಕಿ ಟೋಪಿಗಳನ್ನು ಹಾಕಿಕೊಂಡು ಇಡೀ ದೇಹವನ್ನು ಕವರ್ ಮಾಡಿಕೊಂಡು ಹೊರಗೆ ಬರುತ್ತಿದ್ದಾರೆ. ದಿನಾ ಬಹಳಷ್ಟು ಜನ ಇಲ್ಲಿಗೆ ವಾಕಿಂಗ್ ಬರುತ್ತಿದ್ದರು. ಆದರೆ ಈ ಸೈಕ್ಲೋನ್‌ನಿಂದಾಗಿ ಚಳಿ ಜಾಸ್ತಿಯಾಗಿದೆ. ಹೀಗಾಗಿ ಜನರು ಬರುತ್ತಿಲ್ಲ ನಮ್ಮಗೂ ಈ ಕೊರೆಯುವ ಚಳಿಗೆ ಮನೆಯಿಂದ ಹೊರಗಡೆ ಬರಲು ಭಯವಾಗುತ್ತಿದೆ ಎನ್ನುತ್ತಿದ್ದಾರೆ.
ಇದನ್ನೂ ಓದಿ: ದಿತ್ವಾ ಚಂಡಮಾರುತ ಎಫೆಕ್ಟ್ | ರಾಜ್ಯದಲ್ಲಿ ಇನ್ನೂ 4 ದಿನ ಮಳೆ ; ಹವಾಮಾನ ಇಲಾಖೆ ಮುನ್ಸೂಚನೆ!



















