ಬೀದರ್ : ಸಿಎಂ ಯಾರು ಎಂಬ ನಿರ್ಧಾರ ಹೈಕಮಾಂಡ್ ಮೇಲೆ ಇದೆ, ಎಲ್ಲಾ ನಿರ್ಧಾರ ಹೈಕಮಾಂಡ್ ಮಾಡುತ್ತೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ಬೀದರ್‌ನಲ್ಲಿ ಸಚಿವ ಸಂತೋಷ್ ಲಾಡ್ ಸಿಎಂ, ಡಿಸಿಎಂ ನಡುವೆ ಕುರ್ಚಿ ಜಟಾಪಟಿ ವಿಚಾರ ಮಾತನಾಡಿ ಹೈಕಮಾಂಡ್ ಏನು ಹೇಳುತ್ತೋ ಅದಕ್ಕೆ ಬದ್ದ ಅಂತಾ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಸಿದ್ದರಾಮಯ್ಯನವರೇ ಒಪ್ಪಿದ ಮೇಲೆ ಸಚಿವರೂ, ಶಾಸಕರು ಎಲ್ರೂ ಕೇಳಲೇಬೇಕು, ಒಪ್ಪಲೆಬೇಕು. ಸಿದ್ದರಾಮಯ್ಯನವರೇ ಒಪ್ಪಿದ ಮೇಲೆ ಸಚಿವರೂ, ಶಾಸಕರು ಎಲ್ರೂ ಕೇಳಲೇಬೇಕು ಒಪ್ಪಲೆಬೇಕು ಎಂದು ಹೇಳಿದ್ದಾರೆ.
ಕರ್ನಾಟಕದಲಿ ರಾಷ್ಟ್ರಪತಿ ಆಡಳಿತ ಜಗದೀಶ್ ಶೆಟ್ಟರ್ ಹೇಳಿಕೆ ವಿಚಾರ ಸಂಬಂಧಪಟ್ಟಂತೆ ಬಿಜೆಪಿಗರಿಗೆ ಅಧಿಕಾರಕ್ಕೆ ಬರೋಕೆ ಅರ್ಜೆಂಟ್ ಇದೆ. ಕೇಂದ್ರದಲ್ಲಿ ಲೂಟಿ ಮಾಡ್ತಾ ಇದ್ದಾರೆ, ರಾಜ್ಯದಲ್ಲಿ ನಮ್ಮ ಸರ್ಕಾರ ಬಿಳಿಸಿ ಅಧಿಕಾರಕ್ಕೆ ಬಂದು ಲೂಟಿ ಮಾಡ್ಬೇಕು ಅಂತಿದ್ದಾರೆ. ರಾಷ್ಟ್ರಪತಿ ಆಡಳಿತ ತರಬೇಕು ಎನ್ನುವ ಉದ್ದೇಶ ಇವರದ್ದು? ನಮ್ಮ ಸರ್ಕಾರ ಬೀಳಬೇಕು ಎನ್ನುವುದು ಜಗದೀಶ್ ಶೆಟ್ಟರ್ ಮಾತು ಇವರು ಕೋರ್ಟ್, ಕಚೇರಿ ಮ್ಯಾನೇಜ್ ಮಾಡುವ ಲೆವೆಲ್‌ಗೆ ಬಂದಿದ್ದಾರೆ ಎದು ವಾಗ್ದಾಳಿ ನಡೆಸಿದ್ದಾರೆ.
ಮುಂದೆ ಚುನಾವಣೆ ನಡೆಯದೇ ಇದ್ರೂ ಅಚ್ಚರಿ ಇಲ್ಲ, ಚುನಾವಣೆಯಲ್ಲಿ ಬರಿ ಬಿಜೆಪಿನೇ ಗೆಲ್ತಾ ಇದೆ ಹೇಗೆ ಸಾಧ್ಯ..? ಬಿಜೆಪಿಗರು ಕಳೆದ 11 ವರ್ಷಗಳಿಂದ ಇದೇ ಮಾಡ್ತಾ ಬಂದಿದ್ದಾರೆ. ಐಎಂಎಫ್ ದೇಶಕ್ಕೆ ಯಾವ ಗ್ರೇಡ್ ಕೊಟ್ಟಿದ್ದೆ ಈ ಬಗ್ಗೆ ಬಿಜೆಪಿಗರು ಮಾತನಡಲ್ಲ11 ವರ್ಷಗಳಿಂದ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆ, ಐಎಂಎಫ್ ದೇಶಕ್ಕೆ ಸಿ ಗ್ರೇಡ್ ಕೊಟ್ರು ಬಿಜೆಪಿಗರು ತುಟಿ ಬಿಚ್ಚಿಲ್ಲ ಬಿಜೆಪಿ ಬುದ್ಧಿವಂತರು ಈ ಬಗ್ಗೆಯೂ ಮಾತನಾಡಬೇಕಲ್ಲ, ಯಾಕೆ ಮಾತಾಡಲ್ಲ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ : ಸಿಎಂ–ಡಿಸಿಎಂ ಬ್ರೇಕ್‌ಫಾಸ್ಟ್ ಮಾಡಿ ಕುರ್ಚಿ ಸಂಘರ್ಷ ಬ್ರೇಕ್ ಮಾಡಿದ್ದಾರೆ | ವಚನಾನಂದ ಸ್ವಾಮೀಜಿ



















