ಬಿಗ್ ಬಾಸ್ ಕನ್ನಡ 12ರಲ್ಲಿ ಸ್ಪರ್ಧಿ ಧ್ರುವಂತ್ ಅವರು ‘ಶೋನಿಂದ ಹೊರಗೆ ಹೋಗುವ’ ಮಾತುಗಳನ್ನಾಡಿದ್ದಾರೆ. ಸೂಪರ್ ಸಂಡೇ ವಿತ್ ಬಾದ್‌ಷಾ ಸುದೀಪ್ ಸಂಚಿಕೆಯ ಪ್ರೋಮೋದಲ್ಲಿ ಈ ವಿಚಾರ ಗೊತ್ತಾಗಿದೆ. “ಶೋನಿಂದ ಹೊರಗೆ ಹೋಗಲು ಇಷ್ಟಪಡುತ್ತೇನೆ” ಎಂದು ಸುದೀಪ್‌ಗೆ ಧ್ರುವಂತ್ ಹೇಳಿದ್ದಾರೆ.
ಇಂದಿನ ಸಂಚಿಕೆಯಲ್ಲಿ ಸ್ಪರ್ಧಿಗಳಿಗೆ ಟಾಸ್ಕ್‌ವೊಂದನ್ನು ನೀಡಿದ್ದು, ಸುದೀಪ್ ಅವರು “ಒಂದೊಂದು ಅನಿಮಲ್‌ಗೂ ಒಂದು ಪರ್ಸನಾಲಿಟಿ, ಕ್ಯಾರೆಕ್ಟರ್ ಇದೆ” ಎಂದು ಹೇಳಿ, ಅದು ಯಾರಿಗೆ ಸ್ಯೂಟ್ ಆಗಲಿದೆ, ಅವರಿಗೆ ನೀಡಿ ಎಂದು ಹೇಳಿದರು. ಕಾವ್ಯ ಅವರು ಕೋಣವನ್ನು ಗಿಲ್ಲಿ ನಟನಿಗೆ ನೀಡಿದರು. “ತುಂಬಾ ವಿಷಯಗಳಲಿ ಮಾರ್ಗದರ್ದಶನ ನೀಡುತ್ತಿರುತ್ತೇನೆ. ಆದರೆ ಏನೂ ಬದಲಾವಣೆ ಆಗಿಲ್ಲ. ಇವತ್ತಿಗೆ ಅದನ್ನು ಸ್ಟಾಪ್ ಮಾಡಬೇಕು ಎಂದು ನಿರ್ಧಾರ ಮಾಡಿದ್ದೇನೆ” ಎಂದು ಹೇಳಿದ್ದಾರೆ. ನಂತರ ಬಂದ ಪಾರಿವಾಳ ಬೋರ್ಡ್ ಅನ್ನು ಧ್ರುವಂತ್‌ಗೆ ಧನುಷ್ ನೀಡಿದರು. ಪಾರಿವಾಳ ಬೋರ್ಡ್ ಅನ್ನು ಧ್ರುವಂತ್‌ಗೆ ಮಾಳು ನೀಡಿದರು.
ಅಲ್ಲಿರುವ ವಿಷಯ ಇಲ್ಲಿಗೆ ಬರುತ್ತದೆ, ಇಲ್ಲಿರುವ ವಿಷಯ ಬೇರೆ ಕಡೆಗೆ ಹೋಗುತ್ತದೆ” ಎಂದು ಧ್ರುವಂತ್ ಗುಣವನ್ನು ವಿವರಿಸಿದರು ಧನುಷ್. ನಂತರ ಮಾಳು,”ಒಳ್ಳೆಯ ಮನುಷ್ಯನನ್ನು ಹಾಳು ಮಾಡುವುದೇ ಇವರ ಉದ್ದೇಶ. ಇವರ ಅನಿಸಿಕೆಯನ್ನು ಹೇಳಿ ಹೇಳಿ, ಇನ್ನೊಬ್ಬರ ತಲೆಯನ್ನು ಕೂಡ ಕೆಡಿಸುತ್ತಾರೆ” ಎಂದು ಹೇಳಿದ್ದಾರೆ. ಧ್ರುವಂತ್ ಕುತಂತ್ರಿ ಕೆಲಸ ಮಾಡ್ತಾರೆ ಎಂಬ ಮಾತು ಕೇಳಿಬಂದಿದೆ. ಆಗ ತಮಗೆ ನೀಡಿದ್ದ ಬೋರ್ಡ್‌ಗಳನ್ನು ಕುತ್ತಿಗೆಗೆ ಹಾಕಿಕೊಳ್ಳಬೇಕಿತ್ತು. ಆದರೆ ಧ್ರುವಂತ್ ಅದನ್ನು ಕೈಯಲ್ಲಿ ಇಟ್ಟುಕೊಂಡಿದ್ದರು. ಇದನ್ನು ಗಮನಿಸಿದ ಸುದೀಪ್, ಕುತ್ತಿಗೆಗೆ ಹಾಕಿಕೊಳ್ಳಿ ಎಂದು ಹೇಳಿದರು. ಅದಕ್ಕೆ ಧ್ರುವಂತ್ ಒಪ್ಪಲಿಲ್ಲ!
ಸುದೀಪ್ ಅವರು ಹೇಳಿದ ಮಾತಿಗೆ ಪ್ರತಿಕ್ರಿಯಿಸಿದ ಧ್ರುವಂತ್, “I would leave the show then wearing this (ನಾನು ಇದನ್ನು ಧರಿಸುವುದಕ್ಕಿಂತ ಈ ಶೋನಿಂದ ಹೊರಗೆ ಹೋಗಲು ಇಷ್ಟಪಡುತ್ತೇನೆ)” ಎಂದು ಹೇಳಿದ್ದಾರೆ. ಈ ಬಗ್ಗೆ ಸುದೀಪ್ ಪ್ರತಿಕ್ರಿಯೆ ಏನು? ಈ ವಾರ ಧ್ರುವಂತ್ ಅವರೇ ಎಲಿಮಿನೇಟ್ ಆಗುತ್ತಾರಾ? ಇಂದಿನ ಸಂಚಿಕೆಯಲ್ಲಿ ಮಾಹಿತಿ ತಿಳಿಯಲಿದೆ.
ಇದನ್ನೂ ಓದಿ : ನಾವೆಲ್ಲರೂ ಒಗ್ಗಟ್ಟಾಗೇ ಇದ್ದೇವೆ, ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲಾ | ಸಂತೋಷ್ ಲಾಡ್



















