ಬೀದರ್: ನಾವೆಲ್ಲರೂ ಒಗ್ಗಟ್ಟಾಗೇ ಇದ್ದೇವೆ, ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲಾ ಎಂದು ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ಬೀದರ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂತೋಷ್ ಲಾಡ್, ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲಾ. ಯಾವುದೇ ಚುನಾವಣೆ ಇರಲಿ, ಜಿಲ್ಲಾ ಪಂಚಾಯತ್ ಇರಲಿ, ಮುನ್ಸಿ ಪಾರ್ಟಿ ಇರಲಿ, ತಾಲೂಕ ಪಂಚಾಯತ್ ಇರಲಿ, ಅಸೆಂಬ್ಲಿಇರಲಿ, ಕಾಂಗ್ರೆಸ್ ಪಾರ್ಟಿ ಸಂಘಟನಾವಾಗಿದೆ. ನಾವೆಲ್ಲರೂ ಒಗ್ಗಟ್ಟಾಗೆ ಇರುತ್ತೇವೆ ಎಂದಿದ್ದಾರೆ.
ಖಂಡಿತವಾಗಿಯೂ ಮುಂದೆ ಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಎಲೆಕ್ಷನ್ ಫೇಸ್ ಮಾಡುತ್ತೇವೆ. ನಾವು ಮಾಡಿರುವಂತಹ ಕಾರ್ಯಕ್ರಮ, ನಾವು ಮಾಡಿರುವ ಕೆಲಸಕ್ಕೆ ಜನ ನಮ್ಮನ್ನು ಮತ್ತೆ ಆಶೀರ್ವಾದ ಮಾಡುತ್ತಾರೆ ಎನ್ನುವ ನಂಬಿಕೆ ನನಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ‘ನಾನು ಎಂದಿಗೂ ಬೆನ್ನಿಗೆ ಚೂರಿ ಹಾಕಲ್ಲ.. ನೇರ ಹೋರಾಟಗಾರ’ | ಡಿಕೆ ಶಿವಕುಮಾರ್



















