ಬೆಂಗಳೂರು: ಕೊಲೆ ಆರೋಪಿ ನಟ ದರ್ಶನ್‌ಗೆ ಈಗ ಮತ್ತಷ್ಟು ಕಠಿಣ ಶಿಕ್ಷೆ ಶುರುವಾಗಿದ್ದು, ಬ್ಯಾರಕ್ ಅಲ್ಲಿ ಕೂರಿಸಿ ಊಟ ಕೊಡುತ್ತಿದ್ದ ಜೈಲಾಧಿಕಾರಿಗಳು ಈಗ ಸರತಿ ಸಾಲಿನಲ್ಲಿ ನಿಲ್ಲುವಂತೆ ಮಾಡಿದ್ದಾರೆ.
ಜೈಲು ಸೂಪರಿಂಟೆಂಡೆಂಟ್ ಆಗಿ ಇದೇ ಮೊದಲ ಬಾರಿಗೆ ಐಪಿಎಸ್ ಅಧಿಕಾರಿ ನೇಮಕಾತಿ ಆಗಿರುವ ಅಂಶುಕುಮಾರ್ ಮತ್ತಷ್ಟು ಹೊಸ ರೂಲ್ಸ್ ತಂದಿದ್ದಾರೆ. ಇಷ್ಟು ದಿನ ಬ್ಯಾರಕ್‌ನಲ್ಲಿ ಊಟ ಪಡೆದು ಊಟ ಮಾಡುತ್ತಾ ಇದ್ದ ದರ್ಶನ್ ಈಗ ಎಲ್ಲಾ ಆರೋಪಿಗಳಂತೆ ಸರತಿ ಸಾಲಿನಲ್ಲಿಯೇ ನಿಂತು ಊಟ ಪಡೆಯುವ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಜೈಲಿನ ಕಳ್ಳಾಟಕ್ಕೆ ಸಂಪೂರ್ಣ ಬ್ರೇಕ್ ಹಾಕಲೇಬೇಕೆಂದು ಈ ತೀರ್ಮಾನ ಮಾಡಿ ಈಗ ಎಲ್ಲರಿಗೂ ಒಂದೇ ರೂಲ್ಸ್ ಮಾಡಿದ್ದಾರೆ.
ಸದ್ಯ ದರ್ಶನ್ ಬ್ಯಾರಕ್ ಇಂದ ಹೊರಗೆ ಬಂದು ಊಟ ಪಡೆಯಬೇಕು ಬಳಿಕ ಊಟ ಮುಗಿಸಿಯೇ ಬ್ಯಾರಕ್‌ಗೆ ತೆರಳಬೇಕಿದೆ. ಇನ್ನು ಭದ್ರತಾ ದೃಷ್ಟಿಯಿಂದ ಇಷ್ಟು ದಿನ ಸಿಕ್ಕಿದ್ದ ವಾಕಿಂಗ್ ಅವಕಾಶವನ್ನೂ ಕಡಿತಗೊಳಿಸಿದ್ದಾರೆ. ಬಟ್ಟೆ ತೊಳೆದು ಒಣ ಹಾಕೋಕೆ ಮಾತ್ರ ಸ್ವಲ್ಪ ಕಾಲಾವಕಾಶ ನೀಡಿದ್ದು, ಮತ್ಯಾವುದಕ್ಕೂ ಅವಕಾಶ ಇಲ್ಲದೇ ದರ್ಶನ್ ಪರದಾಡುವಂತಾಗಿದೆ.
ಇದನ್ನೂ ಓದಿ: ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ | ಒಂದೇ ಕುಟುಂಬದ ಐವರು ಸಾವು..!



















