ಕಳೆದ ಸೀಸನ್‌ನಲ್ಲಿ ಸುದೀಪ್ ಅವರು ಮಂಜು ಅವರ ತಂದೆ ತಾಯಿಯೊಂದಿಗೆ ಉಗ್ರಂ ಮಂಜು ಅವರ ಮದುವೆ ಬಗ್ಗೆ ಪ್ರಸ್ತಾಪ ಮಾಡಿರುವ ವಿಡಿಯೋ ಪ್ಲೇ ಮಾಡಿಸಿದ್ದಾರೆ. ಅಷ್ಟೇ ಅಲ್ಲ ಬಿಗ್ ಬಾಸ್ ಉಗ್ರಂ ಮಂಜು ಅವರಿಗೆ ಸರ್‌ಪ್ರೈಸ್ ನೀಡಿದ್ದಾರೆ. ಇತ್ತೀಚೆಗಷ್ಟೇ ಉಗ್ರಂ ಮಂಜು – ಸಂಧ್ಯಾ ಅವರ ನಿಶ್ಚಿತಾರ್ಥ ಕಾರ್ಯಕ್ರಮ ನೆರವೇರಿತು. ಅತೀ ಶೀಘ್ರದಲ್ಲೇ ಉಗ್ರಂ ಮಂಜು – ಸಂಧ್ಯಾ ಅವರ ವಿವಾಹ ಮಹೋತ್ಸವ ನಡೆಯಲಿದೆ.
ಭಾವಿ ಪತ್ನಿ ಫೋಟೋಗಳನ್ನು ನೇತು ಬಿಡಲಾಗಿತ್ತು. ಅಷ್ಟೇ ಅಲ್ಲ ಮಂಜು ಅವರ ಲವ್ ಸ್ಟೋರಿ ಹೇಳುವ ಬಗ್ಗೆ ಕೇಳಿಕೊಂಡರು ಬಿಗ್ ಬಾಸ್. ಉಗ್ರಂ ಮಂಜು ಅವರು ಮೊದಲಿಗೆ ಭಾವಿ ಪತ್ನಿ ಬಗ್ಗೆ ಹೊಗಳಿದ್ದಾರೆ. ಸಾಯಿ ಸಂಧ್ಯಾ ನಾನು ಮಾಡಿರುವ ಅದೃಷ್ಟನೋ, ನನ್ನ ತಂದೆ-ತಾಯಿ ಮಾಡಿರುವಂತಹ ಪುಣ್ಯನೋ, ಈ ನೇಚರ್ ಕಳಿಸಿಕೊಟ್ಟಿರುವ ಗಿಫ್ಟ್ ಇರಬಹುದಾ ನನಗೆ ಗೊತ್ತಿಲ್ಲ ಎಂದಿದ್ದಾರೆ.
ನನ್ನ ಲವ್ ಸ್ಟೋರಿ ಅಷ್ಟೇನೂ ಇಂಟ್ರಸ್ಟಿಂಗ್ ಇರಲಿಲ್ಲ. ಎರಡು ತಿಂಗಳ ಲವ್ ಸ್ಟೋರಿ ಅಷ್ಟೇ. ಎರಡು ತಿಂಗಳ ಪ್ರೀತಿ ಅಷ್ಟೇ. ಲಾಂಗ್ ಡ್ರೈವ್ ಒಂದು ಕಡೆ ಕರೆದುಕೊಂಡು ಹೋಗುತ್ತೇನೆ. ಮನೆಗೆ ಟೆಂಪಲ್‌ಗೆ ಹೋಗಿ ಬರುತ್ತೇನೆ ಎಂದು ಹೇಳಿ ಬಂದಿದ್ದರು. ಮಂಗಳೂರಿನ ವನ ದುರ್ಗ ಟೆಂಪಲ್‌ಗೆ ಲಾಂಗ್ ಡ್ರೈವ್. ಅಲ್ಲಿ ಆ ತಾಯಿಯ ಆಶೀರ್ವಾದ ಪಡೆದುಕೊಳ್ಳುತ್ತೇನೆ. ಅಲ್ಲಿನ ಗುರುಗಳ ಹತ್ತಿರ ಈತರ ವಿಚಾರವಿದೆ ಎಂದು ಹೇಳಿಕೊಳ್ಳುತ್ತೇನೆ. ಒಳ್ಳೆಯದಾಗುತ್ತೆ ಹೋಗು. ಒಳ್ಳೆಯ ಹುಡುಗಿ ಅಂತ ಹೇಳುತ್ತಾರೆ ಅಷ್ಟೇ ಎಂದು ಉಗ್ರಂ ಮಂಜು ತಮ್ಮ ಲವ್ ಸ್ಟೋರಿ ಬಿಚ್ಚಿಟ್ಟಿದ್ದಾರೆ.
ಅಷ್ಟೇ ಅಲ್ಲ ಉಗ್ರಂ ಮಂಜು ಅವರು ಅವರಿಗೆ ಬಿಗ್ ಬಾಸ್ ಹೋಗುವಾಗ ಸಂಧ್ಯಾ ಅವರು ಅಶ್ವಿನಿಯವರಿಗೆ ಗೌರವ ಕೊಟ್ಟು, ರಾಶಿಕಾ, ಕಾವ್ಯಾ, ಸ್ಪಂದನಾ ಇವರೆಲ್ಲ ಇದ್ದಾರಲ್ಲ ನೋಡು ಪರ್ವಾಗಿಲ್ಲ. ಫ್ಲರ್ಟ್ ಮಾಡುತ್ತೀಯಾ ಮಾಡು. ಆದರೆ, ರಿಂಗ್ ಇದೆಯಲ್ಲ ಅದನ್ನು ಮರೆಯಬೇಡ ಎಂದಿದ್ದಾರಂತೆ. ಅಷ್ಟೆ ಅಲ್ಲ ಬಿಗ್ ಸರ್‌ಪ್ರೈಸ್ ಕೊಟ್ಟ ಬಿಗ್ ಬಾಸ್‌ಗೆ ಧನ್ಯವಾದ ಹೇಳಿದ್ದಾರೆ ಉಗ್ರಂ ಮಂಜು.
ಇದನ್ನೂ ಓದಿ : IRCTCಯಲ್ಲಿ 50 ಹುದ್ದೆಗಳ ನೇಮಕಾತಿ : ಪದವಿ ಮುಗಿಸಿದವರಿಗೆ ಗುಡ್ ನ್ಯೂಸ್



















