ಬೆಂಗಳೂರು: ರಾಷ್ಟ್ರೀಯ ಹೆದ್ದಾರಿ 75 ರ ನೆಲಮಂಗಲ ತಾಲೂಕಿನ ಮಲ್ಲರಬಾಣವಾಡಿ ಕ್ರಾಸ್ ಬಳಿ ಬೆಳ್ಳಂಬೆಳಗ್ಗೆ ಟ್ರಾಕ್ಟರ್ ಗೆ ಲಾರಿ ಡಿಕ್ಕಿ ಹೊಡೆದು ಭೀಕರ ರಸ್ತೆ ಅಪಘಾತ ಸಂಭವಿಸಿದೆ.
ರಮೇಶ್ 35, ಪ್ರೇಮ್ ಕುಮಾರ್ 34 ಮೃತರು. ಇವರು ಗುಡೇಮಾರನಹಳ್ಳಿ ನಿವಾಸಿಗಳಾಗಿದ್ದು, ಹೆದ್ದಾರಿ ಕ್ರಾಸ್ ಮಾಡುತ್ತಿದ್ದ ಟ್ರಾಕ್ಟರ್ ಗೆ ಲಾರಿ ಡಿಕ್ಕಿ ಹೊಡೆದಿದೆ. ಟ್ರಾಕ್ಟರ್ ಚಕ್ರಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿದ್ದು, ಟ್ರಾಕ್ಟರ್ ನಲ್ಲಿದ್ದ ಇಬ್ಬರು ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಅವೈಜ್ಞಾನಿಕ ರಸ್ತೆ ಯೂಟರ್ನ್ ಮಾಡಿರುವುದೇ ಅಪಘಾತಕ್ಕೆ ಕಾರಣ ಎಂದು ಪೋಲಿಸರು ಹೇಳಿದ್ದಾರೆ.
ಪದೇ ಪದೇ ಇದೇ ಸ್ಥಳದಲ್ಲಿ ಹೆಚ್ಚಾದ ಅಪಘಾತದ ಪ್ರಕರಣಗಳು ಇದೀಗ ನೆಲಮಂಗಲ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ.
ಇದನ್ನೂ ಓದಿ : BBK 12: ‘ಇರಿಟೇಷನ್ ಮಾಡ್ಬೇಡಾ ಗಿಲ್ಲಿ’: ಮೊದಲ ದಿನವೇ ಗಿಲ್ಲಿ ಮೇಲೆ ರಜತ್ ಕಿಡಿ



















