ಈ ವಾರ ಬಿಗ್ ಬಾಸ್ ರಣರಂಗವಾಗಿದೆ. ನಾಮಿನೇಷನ್ ಪ್ರಕ್ರಿಯೆ ಜೋರಾಗಿದೆ. ಅದರಲ್ಲೂ ಗಿಲ್ಲಿ ಅವರನ್ನೇ ರಕ್ಷಿತಾ ಅವರು ನಾಮಿನೇಟ್ ಮಾಡಿದ್ದಾರೆ. ಗ್ರೂಪಿಸಮ್ ಮಾಡ್ಕೊಂಡು ಇದ್ದ ಅಶ್ವಿನಿ, ಧ್ರುವಂತ್ , ಜಾಹ್ನವಿ ಮಧ್ಯೆ ಬಿರುಕು ಮೂಡಿದೆ. ಸದಸ್ಯರ ಬಟ್ಟೆಯನ್ನು ಕಲ್ಲಿಗೆ ಹೊಡೆಯುತ್ತ, ಕೊಳೆಯನ್ನು ತೆಗೆಯುತ್ತ ನಾಮಿನೇಟ್ ಮಾಡಬೇಕು. ಅದರಲ್ಲಿ ಮೊದಲು ರಕ್ಷಿತಾ ಅವರು ಗಿಲ್ಲಿಯ ಹೆಸರನ್ನು ಹೇಳಿದ್ದಾರೆ. ಜೊತೆಗೆ ಜಾಹ್ನವಿ ಕೂಡ ನಿರೂಪಣೆ ಇವರಿಗೆ ಸಣ್ಣ ಕಾರ್ಯಕ್ರಮವಂತೆ. ಇವನಿಗೆ ಸೀದಾ ಅನುಬಂಧ ಆಂಕರಿಂಗ್ ಕೊಡಬೇಕು ಅಂತೆ ಎಂದು ವ್ಯಂಗ್ಯವಾಗಿ ಹೇಳಿ ಬಟ್ಟೆ ಒಗೆದಿದ್ದಾರೆ.
ರಕ್ಷಿತಾ ಅವರು ಗಿಲ್ಲಿ ಬಗ್ಗೆ ದೂರಿದ್ದು ಹೀಗೆ, `ಯುಟ್ಯೂಬ್ ವ್ಲಾಗರ್ ಕೆಲಸ ಮಾಡಿಯೇ ಬಿಗ್‌ಬಾಸ್ ಮನೆಗೆ ಬಂದಿದ್ದೇವೆ. ನಮ್ಮ ಕೆಲಸವೇ ನಮ್ಮನ್ನು ಇಲ್ಲಿಗೆ ಕರೆದುಕೊಂಡು ಬಂದಿದೆ. ಯಾವುದೇ ಕೆಲಸದಲ್ಲಿ ದೊಡ್ಡ ಕೆಲಸ, ಚಿಕ್ಕ ಕೆಲಸ ಅನ್ನೋದು ಇಲ್ವೇ ಇಲ್ಲ. ಪ್ರೋಫೆಷನಲ್ ಬಗ್ಗೆನೇ ಕೀಳಾಗಿ ಮಾತನಾಡಿದರೆ, ನಿಮ್ಮ ಬಗ್ಗೆ ನಂಬುವುದು ಹೇಗೆ? ‘ ಎಂದಿದ್ದಾರೆ.
ಪ್ರೋಮೋ ನೋಡಿ ವೀಕ್ಷಕರು ಕಮೆಂಟ್ ಮಾಡುತ್ತಿದ್ದಾರೆ. ಒಂದು ವೇಳೆ ಸ್ಪರ್ಧಿಗಳ ವೃತ್ತಿ ಬಗ್ಗೆ ಕೇವಲವಾಗಿ ಗಿಲ್ಲಿ ನಟ ಮಾತನಾಡಿದ್ರೆ ಖಂಡಿತ ತಪ್ಪಾಗುತ್ತದೆ. ಹಾಗಾಗಿ ಗಿಲ್ಲಿ ಹೇಳಿದ್ದೇನು ಎಂಬುದನ್ನು ನೋಡಲು ಕಾಯುತ್ತಿದ್ದೇವೆ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಂದೆಡೆ ಕೆಲವರು, ರಕ್ಷಿತಾ ಶೆಟ್ಟಿ ಅವರಿಗೆ ಕಿಚ್ಚನ ಚಪ್ಪಾಳೆ ಸಿಕ್ಕ ನಂತರ ಅಹಂಕಾರ ಬಂದಿದೆ ಎಂದು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ : ನಾನು ಯಾವ ಬಣನೂ ಅಲ್ಲ | ಯೋಗೇಶ್ವರ್



















