ಬೆಂಗಳೂರು : ಕಾಂಗ್ರೆಸ್‌ನಲ್ಲಿ ನವೆಂಬರ್ ಕ್ರಾಂತಿ ಕಿಚ್ಚು ನಿನ್ನೆ ತನಕ ಭುಗಿಲೆದಿತ್ತು, ಮಲ್ಲಿಕಾರ್ಜುನ ಖರ್ಗೆ ಮತ್ತು ಸಿದ್ದರಾಮಯ್ಯ ಸುದೀರ್ಘ ಮಾತುಕತೆ ಬಳಿಕ ನಾಯಕತ್ವ ಗೊಂದಲಕ್ಕೆ ಅಲ್ಪ ವಿರಾಮ ಇಡುವ ಸಾಧ್ಯತೆ ಇದೆ. ಹೈಕಮಾಂಡ್ ನಿರ್ಧಾರವೇ ಅಂತಿಮಾ ನಿರ್ಧಾರ ಎಂದು ಸಿಎಂ ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ನಿನ್ನೆ 1ಗಂಟೆ 30 ನಿಮಿಷಗಳ ಕಾಲ ಖರ್ಗೆಯವರೊಂದಿಗೆ ಸುದೀರ್ಘ ಚರ್ಚೆಯನ್ನು ಮಾಡಿದ್ದಾರೆ. ಈ ಚರ್ಚೆಯಲ್ಲಿ ನಾಯಕತ್ವ ಗೊಂದಲಕ್ಕೆ ತೆರೆ ಎಳೆಯುವಂತೆ ಸಿದ್ದು ಬೇಡಿಕೆ ಇಟ್ಟಿದ್ದಲ್ಲದೇ, ಗೊಂದಲದ ಬಗ್ಗೆ ಬಹಿರಂಗ ಹೇಳಿಕೆ ನೀಡಬೇಡಿ ಖಡಕ್ ಕಟ್ಟಪ್ಪಣೆ ನೀಡಿ ಎಂದಿದ್ದಾರೆ. ಈ ಬಗ್ಗೆ ಖರ್ಗೆಯವರು ವಿದೇಶದಲ್ಲಿರುವ ರಾಹುಲ್ ಭಾರತಕ್ಕೆ ಬಂದ ಬಳಿಕ ಮಾತನಾಡುತ್ತೇನೆ ಎಂದಿದ್ದಾರೆ.
ಮಲ್ಲಿಕಾರ್ಜುನ ಭೇಟಿ ಬಳಿಕ ಸಿದ್ದರಾಮಯ್ಯ ಮಾಧ್ಯಮಗಾರರೊಂದಿಗೆ ಮಾತನಾಡಿದ ಸಿಎಂ ಪಕ್ಷ ಸಂಘಟನೆ, ಚುನಾವಣೆಗಳ ಬಗ್ಗೆ ಚರ್ಚೆ ನಡೆಸಿದ್ದೇವೆ. ಕ್ಯಾಶುವಲ್ ಆಗಿ ಖರ್ಗೆ ಭೇಟಿ ಆಗಿರುವುದು. ಅಂತಿಮವಾಗಿ ಹೈಕಮಾಂಡ್ ನಿರ್ಧಾರಕ್ಕೆ ಬದ್ಧವಾಗಿರ್ಬೇಕು, ನಾನು, ಡಿಸಿಎಂ ಸೇರಿ ಎಲ್ಲರೂ ಒಪ್ಪಬೇಕು. ವರಿಷ್ಠರ ತೀರ್ಮಾನವನ್ನು ಖುಷಿಯಿಂದ ಒಪ್ಪಿಕೊಳ್ಳುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ : ಮಾಡಿದ್ದ ಸಾಲ ತೀರಿಸಲು ಖದೀಮರ ಮಾಸ್ಟರ್ ಪ್ಲ್ಯಾನ್ | ಖಾಕಿ ತನಿಖೆ ವೇಳೆ ಬಯಲಾಯ್ತು 7.11 ಕೋಟಿ ದರೋಡೆಯ ಗುಟ್ಟು



















