ಕಾರವಾರ: ಮುಂಡಗೋಡ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ, ಸುಮಾರು 8 ಲಕ್ಷ ಮೌಲ್ಯದ 781 ಗ್ರಾಮ್ ಚರಸ್ ಅನ್ನು ವಶಪಡಿಸಿಕೊಂಡು, ಮುಂಡಗೋಡು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಮುಂಡಗೋಡಿನ ಸುಭಾಷ್ ನಗರದ ಇಂಜಿನಿಯರ್ ವೃತ್ತಿಯಲ್ಲಿ ಇರುವ ಸಚಿನ್ ಟೇಕಬಹುದ್ದೂರ್ ಗೋರ್ಖಾ (26) ಬಂಧಿತ ಆರೋಪಿಯಾಗಿದ್ದಾನೆ. ಖಚಿತ ಮಾಹಿತಿ ಪಡೆದ ಮುಂಡಗೋಡು ಠಾಣೆಯ ಸಿ.ಪಿ.ಐ ರಂಗನಾಥ್ ನೀಲಮ್ಮನವರ್ ಹಾಗೂ ಪಿ.ಎಸ್.ಐ ಯಲ್ಲಾಲಿಂಗ ಕುನ್ನೂರು ನೇತೃತ್ವದ ತಂಡವು ಮುಂಡಗೋಡು ನಗರದ ಬಸ್ ಡಿಫೋ ಹತ್ತಿರ ಬೈಕ್‌ನಲ್ಲಿ ಚರಸ್ ಮಾರಾಟ ಮಾಡುವಾಗ ದಾಳಿ ನಡೆಸಿ ಬಂಧನ ಮಾಡಿದ್ದಾರೆ.
ಮುಂಡಗೋಡು ಟಿಬೇಟಿಯನ್ ಕ್ಯಾಂಪ್‌ಗೆ ಈ ಚರಸ್ ಅನ್ನು ಮಾರಾಟ ಮಾಡಲು ತಂದಿರುವ ಕುರಿತು ಈತನ ಮೇಲೆ ಆರೋಪವಿದೆ. ಘಟನೆ ಸಂಬಂಧ ಮುಂಡಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಳ್ಳಲಾಗಿದೆ.
ಇದನ್ನೂ ಓದಿ : ಮುಖ್ಯಮಂತ್ರಿಯಾಗಿ ನಾನೇ ಮುಂದುವರಿಯೋದು, ಮುಂದಿನ ಬಾರಿಯೂ ನಾನೇ ಬಜೆಟ್ ಮಂಡಿಸೋದು | ಸಿಎಂ ಸಿದ್ದು



















