ಬೆಂಗಳೂರು : ಡಿಕೆಶಿ ಪರ ಡೆಲ್ಲಿಗೆ ಹೋದವರಿಗೆ ಸಿಎಂ ಧಮ್ಕಿ ಹಾಕುತ್ತಿದ್ದಾರೆ. ಡಿಕೆಶಿ ಅನಾರೋಗ್ಯದಿಂದ ಡ್ರಿಪ್ ಹಾಕಿ ಮನೇಲಿ ಇದ್ದಾರೆ. ಕ್ರಾಂತಿ, ಭ್ರಾಂತಿ ಇಲ್ಲ ಅಂತಾರೆ ಈಗ ಆಗ್ತಿರೋದು ವಾಂತಿನಾ? ಎಂದು ಆರ್ ಅಶೋಕ್ ಕಾಂಗ್ರೆಸ್ ಸರ್ಕಾರದ ವಿರುದ್ಧ ವ್ಯಂಗ್ಯ ಮಾಡಿದ್ದಾರೆ.
ಕಾಂಗ್ರೆಸ್ ಸರ್ಕಾರ ಎರಡೂವರೆ ವರ್ಷ ಪೂರೈಸಿದ ಹಿನ್ನಲೆಯಲ್ಲಿ ದರೋಡೆ ಕಾಂಗ್ರೆಸ್ ಸರ್ಕಾರ ಎಂದು ಪೋಸ್ಟರ್ ಬಿಡುಗಡೆ ಮಾಡಿ ವರದಿಗಾರರೊಂದಿಗೆ ಮಾತನಾಡಿದ ಆಎ ಅಶೋಕ್ 2 ವರ್ಷ ಆಡಳಿತದಲ್ಲಿ ರಾಜ್ಯ ಸರ್ಕಾರ ಡಿಸಿಎಂ ಡಿಕೆಶಿ ಬಣ, ಸಿದ್ದರಾಮಯ್ಯ ಬಣ ಎರಡು ಹೋಳಾಗಿದೆ. ಡಿಕೆಶಿ ಪರ ಡೆಲ್ಲಿಗೆ ಹೋದವರಿಗೆ ಸಿಎಂ ಧಮ್ಕಿ ಹಾಕುತ್ತಿದ್ದಾರೆ. ಡಿಕೆಶಿ ನೀಡಿದರೆ ಅನಾರೋಗ್ಯದಿಂದ ಡ್ರಿಪ್ ಹಾಕಿ ಮನೇಲ್ಲೇ ಇದ್ದಾರೆ ಎಂದು ಕಿಡಿಕಾರಿದ್ದಾರೆ.
ಅಧಿಕಾರ ಹಂಚಿಕೆ ಅಗ್ರಿಮೆಂಟ್ ಆಗಿದ್ಯಾ ಇಲ್ವಾ ಬೊಗಳಿ ಎಂದು ಜನ ಕೇಳ್ತಿದಾರೆ. ಓಟ್ ಹಾಕಿದ ಜನರಿಗೆ ಕೇಳುವ ಹಕ್ಕಿದೆ. ಜನರ ಪಾಲಿಗೆ ಸತ್ತಿರುವ ಸರ್ಕಾರ, ಒಂದೇ ಒಂದು ಶಂಕುಸ್ಥಾಪನೆ ಇಲ್ಲ. ದಲಿತರ ಹಣ ಗ್ಯಾರಂಟಿಗೆ ಬಳಸಿದ್ದರು. ವಾಲ್ಮೀಕಿ ನಿಗಮದ ಹಣ ಲೂಟಿ, 2 ಸಾವಿರ ರೈತರ ಆತ್ಮಹತ್ಯೆ ಆಗಿದೆ, ಕಬ್ಬು ಬೆಳೆಗಾರರು ಬೀದಿಗಿಳಿದಿದ್ದಾರೆ, ಅಧಿಕಾರಿಗಳ ಆತ್ಮಹತ್ಯೆ ಆಗ್ತಿದೆ, 700 ಬಾಣಂತಿಯರ ಸಾವು 1100 ಶಿಶು ಮರಣ ಇದು ನಿಮ್ಮ 2.5 ವರ್ಷದ ಸಾಧನೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಎಲ್ಲ ಕಂಪೆನಿ ಬೇರೆ ರಾಜ್ಯ ಕ್ಕೆ ಹೋಗ್ತಿದೆ :
ಟೊಯೋಟಾ ಮಹಾರಾಷ್ಟ್ರಗೆ ಹೋಯ್ತು, ಗೂಗಲ್ AI ಆಂಧ್ರಗೆ ಹೋಯ್ತು, ಮೊದಲು ಪ್ರಪಂಚದ ಎಲ್ಲ ಕಂಪನಿ ಬೆಂಗಳೂರಿಗೆ ಹುಡುಕಿಕೊಂಡು ಬರ್ತಿತ್ತು. ಇವತ್ತು ಗರ್ಬೇಜ್, ಗುಂಡಿ, ದರೋಡೆ ಸಿಟಿ ಆಗಿದೆ ಬೆಂಗಳೂರು. ಇದು ಬ್ರಾಂಡ್ ಬೆಂಗಳೂರು ಇದು DKS ಬ್ರಾಂಡ್ ಕರ್ನಾಟಕಕ್ಕೆ ದ್ರೋಹ ಬಗೆದ ಸರ್ಕಾರ ಯಾವ ರೀತಿ 2.5 ವರ್ಷದ ಸಾಧನೆ ಅಂತ ಮಾಡ್ತೀರಾ, ಇದು ಜನರಿಗೆ ಕರಾಳ ಸರ್ಕಾರ ಇದು ಸತ್ತಿರೋ ಸರ್ಕಾರ ಎಂದು ಆಕ್ರೋಶಿಸಿದ್ದಾರೆ.
ಕಸಗುಡಿಸುವ ಯಂತ್ರ ದೊಡ್ಡ ಹಗರಣ ಮಾಡಿದರು :
ಸ್ವಚ್ಚ ಭಾರತ್ ಮಿಷನ್ ನಲ್ಲಿ 82 ಲಕ್ಷ ರೂ. ಒಂದು ಲಾರಿಗೆ ಇದೆ. ಆದ್ರೆ ರಾಜ್ಯ ಸರ್ಕಾರ ಬಾಡಿಗೆಗೆ 3 ಕೋಟಿ ಕೊಡ್ತಿದೆ. ಖರೀದಿಸಿದರೆ 46 ಮಷಿನ್ ಗೆ 308 ಕೋಟಿ ರೂ. 7 ವರ್ಷಕ್ಕೆ ಒಟ್ಟು ಖರ್ಚಾಗಲಿದೆ. ಚನೈ ಚುನಾವಣೆ ಫಂಡಿಂಗ್ ಗೆ ಇದೆಲ್ಲ ನಡೀತಿದೆ. ರೈತರು ಬೀದಿಗಿಳಿದಿದ್ದಾರೆ, ಅವರ ಪರ ಬಿಜೆಪಿ ನಿಂತಿದೆ ಎಂದಿದ್ದಾರೆ.
ಇದನ್ನೂ ಓದಿ : ಇಸ್ಲಾಮಾಬಾದ್ | ರಾಸಾಯನಿಕ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ.. 15 ಕಾರ್ಮಿಕರು ಸಾವು, 7 ಮಂದಿಗೆ ಗಾಯ



















