ಹುಬ್ಬಳ್ಳಿ-ಧಾರವಾಡ : ಡ್ರಗ್ಸ್ ಸೇವನೆ ಮತ್ತು ಮಾರಾಟ ಮಾಡುವವರಿಗೆ ಹುಬ್ಬಳ್ಳಿ – ಧಾರವಾಡ ನಗರ ಪೊಲೀಸರು ತರಾಟೆಗೆ ತೆಗೆದುಕೊಂಡಿದ್ದಾರೆ. ಬೆಳ್ಳೆಂಬೆಳಿಗ್ಗೆ ಡ್ರಗ್ಸ್ ಸೇವನೆ , ಮಾರಾಟ ಮಾಡೋರನ್ನು ಹಿಡಿದು ತಂದು ಪ್ರತಿಯೊಬ್ಬರಿಗೂ ಮೆಡಿಕಲ್ ಟೆಸ್ಟ್ ಮಾಡಿಸುತ್ತಿದ್ದಾರೆ.
ಪ್ರತಿ ಠಾಣಾ ವ್ಯಾಪ್ತಿಯಲ್ಲಿ ತಪಾಸಣೆ ನಡೆಯುತ್ತಿದ್ದು, ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ತಪಾಸಣೆನಡೆಸುತ್ತಿದ್ದಾರೆ. ಪಾಸಿಟೀವ್ ಬಂದವರ ಪಾಲಕರ ಜೊತೆ ಪೊಲೀಸರು ಕೌನ್ಸ್‌ಲಿಂಗ್ ಮಾಡಲಿದ್ದಾರೆ.
ಮಕ್ಕಳ ಡ್ರಗ್ಸ್ ಸೇವನೆ ಬಗ್ಗೆ ಪಾಲಕರಿಗೆ ಮಾಹಿತಿ ನೀಡಿ, ಅವಳಿ ನಗರವನ್ನು ನಶಾ ಮುಕ್ತ ಮಾಡಲು ಪೊಲೀಸರ ಕ್ರಮ ಕೈಗೊಂಡಿದ್ದಾರೆ. ಈ ವರೆಗೆ ಮುನ್ನೂರಕ್ಕೂ ಹೆಚ್ಚು ಜನರಿಗೆ ಮೆಡಿಕಲ್ ಟೆಸ್ಟ್ ಮಾಡಿಸಿದ್ದಾರೆ.
ಇದನ್ನೂ ಓದಿ : G-20 ಶೃಂಗಸಭೆಗಾಗಿ ಸೌತ್ ಆಫ್ರಿಕಾಗೆ ಪ್ರಯಾಣ ಬೆಳೆಸಿದ ಪ್ರಧಾನಿ ಮೋದಿ!



















