ಬೆಂಗಳೂರು : ನಿನ್ನೆ ಸೂರ್ಯ ಮುಳುಗುತ್ತಿದ್ದಂತೆ ಡಿಕೆಶಿ ಬಣ ʻಪಗಡೆʼ ಆಟ ಶುರು ಮಾಡಿದೆ. ಡಿಕೆ ಬಣ ದೆಹಲಿಗೆ ಹಾರಿ ಒಕ್ಕಲಿಗರ ಅಸ್ತ್ರ ಪ್ರಯೋಗಿಸಿ ಡಿಕೆಶಿಗೆ ಸಿಂಹಾಸನ ಕೊಡಿಸಲು ಕಸರತ್ತು ಮಾಡುತ್ತಿದೆ.
ಸಚಿವ ಚಲವರಾಯಸ್ವಾಮಿ ನೇತೃತ್ವದಲ್ಲಿ ಡಿಕೆಶಿ ಬಣ ದೆಹಲಿಯಲ್ಲಿ ಪ್ರವಾಸಕ್ಕೆ ಹೋಗಿದೆ. ಸಚಿವ ಶಿವಾನಂದ್ ಪಾಟೀಲ್, ಆನೇಕಲ್ ಶಾಸಕ ಶಿವಣ್ಣ, ಮಾಗಡಿ ಬಾಲಕೃಷ್ಣ, ರಾಮನಗರದ ಇಕ್ಬಾಲ್ ಹುಸೇನ್, ಗುಬ್ಬಿಯ ಶ್ರೀನಿವಾಸ್, ಕುಣಿಗಲ್ ಶಾಸಕ ರಂಗನಾಥ್, ಮಂಡ್ಯ ಶಾಸಕ ಗಣಿಗ, ಶೃಂಗೇರಿ ಶಾಸಕ ರಾಜೇಗೌಡ ಸಚಿವ ಚಲುವರಾಯಸ್ವಾಮಿ ನೇತೃತ್ವದಲ್ಲಿ ದೆಹಲಿಯಲ್ಲಿ ಖರ್ಗೆ ಸೇರಿ ಹೈಕಮಾಂಡ್ ನಾಯಕರ ಭೇಟಿಗೆ ಕಸರತ್ತು ಮಾಡುತ್ತಿದೆ.
ವರಿಷ್ಠರ ಭೇಟಿಯಲ್ಲಿ ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗರ ಪ್ರಾಬಲ್ಯವಿದೆ. ಡಿಕೆಗೆ ಅವಕಾಶ ಸಿಗದಿದ್ದರೆ ವಿರೋಧಿಗಳ ಕೈ ಮೇಲೆರುತ್ತೆ, ಈಗಾಗಲೇ ಬಿಜೆಪಿ-ಜೆಡಿಎಸ್‌ನಿಂದ ತುಂಬಾ ಧಕ್ಕೆ ಆಗಿದೆ. ಕಾಂಗ್ರೆಸ್ ಪಕ್ಷ ನೆಲೆ ನಿಲ್ಲಲು ಆಗುತ್ತಿಲ್ಲ ಎಂದು ವಾದ ಮಂಡಿಸಿ ಪರೋಕ್ಷವಾಗಿ ಡಿಕೆಶಿ ಸಿಎಂ ಮಾಡಿ ಅಂತಾ ಬಣ ವರಿಷ್ಠರಿಗೆ ಒತ್ತಡ ಹೇರುತ್ತಿದೆ.
ಮುಂದೆ 3 ಪ್ರತ್ಯೇಕ ಟೀಂನಲ್ಲಿ ಡಿಕೆ ಬಣ ಡೆಲ್ಲಿ ಪ್ರವಾಸ ಮಾಡಲಿದೆ. 30ಕ್ಕೂ ಹೆಚ್ಚು ಶಾಸಕರು ಪ್ರತಿ ತಂಡದಲ್ಲಿ ತಲಾ 10 ಶಾಸಕರಂತೆ ದೆಹಲಿಯಲ್ಲಿ ಟ್ರಿಪ್ ಮಾಡಲಿದೆ. ಡಿಕೆ ಶಿವಕುಮಾರ್ ಅವರಿಗೂ ಆಪ್ತ ಶಾಸಕ ಬಣವಿದೆ ಎಂದು ವರಿಷ್ಠರಿಗೆ ತೋರಿಸಲು ಮುಂದಾಗಿದೆ. ಅಲ್ಲದೆ ಶಾಸಕರ ಭೇಟಿಗೂ ಮುನ್ನ ಚೆಲುವರಾಯ ಸ್ವಾಮಿ ವರಿಷ್ಠರನ್ನ ಭೇಟಿಯಾಗಲಿದ್ದಾರೆ.
ಇತ್ತ ಸಿಎಂ ಆಪ್ತ ಬಣ ಡಿನ್ನರ್ ಮೀಟಿಂಗ್
ಚಲುವರಾಯಸ್ವಾಮಿ ದೆಹಲಿಗೆ ಹೋಗುತ್ತಿದ್ದಂತೆ ಸಿಎಂ ಸಭೆ ಮಾಡಲಿದ್ದಾರೆ. ಇಂದು ಸಿದ್ದರಾಮಯ್ಯನವರು ಕೃಷಿ ಸಚಿವರ ತುರ್ತು ಸಭೆ ಕರೆದಿದ್ದಾರೆ. ಸಿಎಂ ಮನೆಯಲ್ಲಿ ನಡೆಯುವ ಡಿನ್ನರ್ ಮಿಟೀಂಗ್ ಸಭೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಅತ್ತ ಡೆಲ್ಲಿಯಲ್ಲಿ ಡಿಕೆ ಬಣ ಆಟವಾಡಿದರೆ ಇತ್ತ ಸಿಎಂ ಟೀಂ ಡಿನ್ನರ್ ಕರೆದಿದೆ. ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಔತಣ ಆಟ ಬೇರೆ ನಡಿತಾ ಇದೆ. ಔತಣದಲ್ಲಿ ಭಾಗಿಯಾದ ಗೃಹ ಸಚಿವ ಜಿ. ಪರಮೇಶ್ವರ್, ಹೆಚ್.ಸಿ. ಮಹಾದೇವಪ್ಪ, ದಿನೇಶ್ ಗುಂಡೂರಾವ್ ಕೆ. ವೆಂಕಟೇಶ್, ಮಾಜಿ ಸಚಿವ ಕೆ.ಎನ್.ರಾಜಣ್ಣ ಹಾಜರಾಗಿದ್ದಾರೆ. ಸಿಎಂ ನಿವಾಸದಲ್ಲಿ ಚರ್ಚೆ ಬಳಿಕ ಪ್ರತ್ಯೇಕ ಮಾತುಕತೆ ಬೇರೆ ನಡೆಯುತ್ತಿದೆ. ಡಿಕೆಶಿ ಬಳಗಕ್ಕೆ ಕೌಂಟರ್ ಕೊಡಲು ಡಿನ್ನರ್ ಕರೆದಿದ್ದಾರೆ ಎಂಬ ಸಂಶಯ ಬರುತ್ತಿದೆ.
ನೇರವಾಗಿ ಸಿಎಂ ಪರ ಬ್ಯಾಟ್ ಬೀಸಿದ ರಾಜಣ್ಣ
ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಅನಿವಾರ್ಯ ಜೆಡಿಎಸ್‌ಗೆ ದೇವೆಗೌಡ, ಮಕ್ಕಳು ಹೇಗೆ ಮುಖ್ಯವೋ? ಬಿಜೆಪಿಗೆ ಬಿ.ಎಸ್. ಯಡಿಯೂರಪ್ಪ ಹೇಗೆ ಮುಖ್ಯವೋ? ಅದೇ ರೀತಿ ಕಾಂಗ್ರೆಸ್‌ಗೆ ಸಿದ್ದರಾಮಯ್ಯ ಅನಿವಾರ್ಯ. ನಾನು ಮಂತ್ರಿ ಆಗ್ತಿನೋ ಇಲ್ವೋ ನನಗೆ ಗೊತ್ತಿಲ್ಲ. ಆದ್ರೆ ಸಿಎಂ ಆಗಿ ಸಿದ್ದರಾಮಯ್ಯ ಮುಂದುವರಿಬೇಕು. ಸಿಎಂ ಪರ ಮಾಜಿ ಸಚಿವ ಕೆ.ಎನ್. ರಾಜಣ್ಣಮಾತನಾಡಿದ್ದಾರೆ.
ಇದನ್ನೂ ಓದಿ : ಕಾಜಿರಂಗದ ಸೊಬಗಿಗೆ ಕುಂಬ್ಳೆ ಫಿದಾ ; “ಜೀವನದಲ್ಲಿ ಒಮ್ಮೆಯಾದರೂ ಇಲ್ಲಿಗೆ ಬನ್ನಿ” ಎಂದ ಕ್ರಿಕೆಟ್ ದಿಗ್ಗಜ



















