ಗದಗ: ಕಪ್ಪತ್ತಗುಡ್ಡದ ಪ.ಪೂ.ಸ.ಶಿ ಶ್ರೀ ಗೆಜ್ಜಿಸ್ವಾಮಿ ಮಠದ ಸೇವಾ ಟ್ರಸ್ಟ್ ವತಿಯಿಂದ 5ನೇ ವರ್ಷದ ಲಕ್ಷ ದೀಪೋತ್ಸವ ಕಾರ್ಯಕ್ರಮದ ಅಂಗವಾಗಿ ಡಿ.14ರಂದು ಸಾಮೂಹಿಕ ವಿವಾಹಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಡಿ. 14 ರ ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀ ಗಣೇಶ ಮೂರ್ತಿ ಮತ್ತು ಶ್ರೀ ಬೇಡರ ಕಣ್ಣಪ್ಪ ಮೂರ್ತಿ ಮತ್ತು ಶ್ರೀ ಜಗಗ್ಮಾತೆ ಅಂಬಾದೇವಿ ಮೂರ್ತಿಗಳಿಗೆ ಮಹಾಭಿಷೇಕ ನಡೆಯಲಿದ್ದು. ನಂತರ ಮಧ್ಯಾಹ್ನ 12-15 ಘಂಟೆಗೆ ಸಲ್ಲುವ ಅಭಿಜಿನ್ ಲಗ್ನದ ಶುಭ ಮುಹೂರ್ತದಲ್ಲಿ ಸಾಮೂಹಿಕ ವಿವಾಹಗಳು ಜರಗಲಿದೆ.
ತದನಂತರ ಸಂಗೀತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಸಾಯಂಕಾಲ 6-00 ಘಂಟೆಗೆ ಶ್ರೀ ಮಠದ ಧರ್ಮಾಧಿಕಾರಿಗಳು ಹಾಗೂ ನಾಡಿನ ಹರ ಗುರು ಚರ ಮೂರ್ತಿಯವರ ಅಮೃತ ಹಸ್ತದಿಂದ ಲಕ್ಷ ದೀಪೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ ಎಂದು ಮಠದ ಆಡಳಿತ ಮಂಡಳಿಯು ಪ್ರಕಟಣೆಯಲ್ಲಿ ತಿಳಿಸಿದೆ. ಸಾಮೂಹಿಕ ವಿವಾಹವಾಗಲು ಬಯಸುವವರು ಡಿ. 10ರೊಳಗೆ ಸಾಮೂಹಿಕ ವಿವಾಹ ಸಮಿತಿಯವರಲ್ಲಿ ನೋಂದಣಿ ಮಾಡಿಸಬೇಕು ಎಂದು ಶ್ರೀ ಗೆಜ್ಜಿಸ್ವಾಮಿ ಮಠದ ಸೇವಾ ಟ್ರಸ್ಟ್ ತಿಳಿಸಿದೆ.
ಸೂಚನೆಗಳು :
1) ವಧು-ವರರ ಶಾಲಾ ದಾಖಲಾತಿ ಪ್ರಮಾಣ ಪತ್ರ,
2) ಅಧಾರ ಪ್ರಮಾಣ ಪತ್ರ
3) ವಧು ವರರ ತಲಾ ನಾಲ್ಕು ಫೋಟೋಗಳು
4) ಬಾಲ್ಯ ವಿವಾಹ ಮತ್ತು ಎರಡನೇ ವಿವಾಹಗಳಿಗೆ ಅವಕಾಶವಿರುವುದಿಲ್ಲ
ಸಾಮೂಹಿಕ ವಿವಾಹಗಳಿಗೆ ಸಂಪರ್ಕಿಸಿರಿ:
ಶಾಹಿಲ್ ಜಗಳೂರ ಮೊ: 9880325647, ಚಿದಾನಂದ ಗೆಜ್ಜಸ್ವಾಮಿಮಠ ಮೊ: 9380808416, ಪ್ರಧಾನಿ ಕರಿ ಮೊ. 6362257116, ಶ್ರೀ ಪರಸಪ್ಪ ಕಮ್ಮಾರ ಮೊ.: 9663220928, ಭರಮಪ್ಪ ಹರ್ಲಾಪೂರ ಮೊ. 9901551278,
ಇದನ್ನೂ ಓದಿ; ಡೆಲ್ಲಿ ಬ್ಲಾಸ್ಟ್‌ಗೆ ʻಪಾಪಿʼಸ್ತಾನ ಲಿಂಕ್ | ಪಾತಕದ ನಂಟು ಒಪ್ಪಿದ ಪಾಕ್ ರಾಜಕಾರಣಿ



















