ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇಂದಿಗೆ ಸರಿಯಾಗಿ ಸತತ ಎರಡೂವರೆ ವರ್ಷ ಪೂರ್ಣಗೊಳಿಸಿದೆ. ಈ ಹೊತ್ತಲ್ಲಿ ಸಿಎಂ ಸಿದ್ದರಾಮಯ್ಯ ಸಂಪುಟ ಪುನಾರಚನೆಗೆ ಪಟ್ಟು ಹಿಡಿದು ಕೂತಿದ್ದಾರೆ.
ಕಾಂಗ್ರೆಸ್ ಸರ್ಕಾರಕ್ಕೆ ಇಂದಿನಿಂದ 2ನೇ ಇನ್ನಿಂಗ್ಸ್ ಆರಂಭಗೊಂಡಿದೆ. ಈ ಸಮಯದಲ್ಲಿ ಅಧಿವೇಶನಕ್ಕೂ ಮುಂಚಿತವಾಗಿ ಅಧಿಕಾರ ಹಂಚಿಕೆ ಆಗಬೇಕೆಂದು ಸಿದ್ದು ಹಠ ಹಿಡಿದರೆ, ಮತ್ತೊಂದು ಕಡೆ ಅಧಿಕಾರ ಹಂಚಿಕೆಗೆ ಗ್ರೀನ್ ಸಿಗ್ನಲ್ ಇದ್ದರೂ ಡಿಕೆಶಿ ತಡೆ ಹಿಡಿಯುತ್ತಿದ್ದಾರೆ.
ಮುಂದಿನ ವಾರದೊಳಗೆ ಸಿಎಂ ಮತ್ತು ಡಿಕೆಶಿ ಇಬ್ಬರೂ ಡೆಲ್ಲಿಗೆ ಪ್ರಯಾಣ ಬೆಳೆಸಲಿದ್ದು. ವಾರದೊಳಗೆ ರಾಹುಲ್, ಖರ್ಗೆ, ಕೆಸಿವಿ ಜೊತೆ ಮಾತುಕತೆಯಲ್ಲಿ ಭಾಗಿಯಾಗಲಿದ್ದಾರೆ. ಅಲ್ಲದೇ ಸಿಎಂ ಸಿದ್ದು, ಡಿಕೆಶಿ ಮುನಿಸು ತಣಿಸಲು ಹೈಕಮಾಂಡ್ ಕಸರತ್ತು ಮಾಡುತ್ತಿದೆ. ಈ ಹಗ್ಗಜಗ್ಗಾಟದಲ್ಲಿ ಗೆಲ್ಲುವವರು ಯಾರು ಎನ್ನುವುದೇ ಕುತೂಹಲಕಾರಿಯಾಗಿದೆ.
ಇದನ್ನೂ ಓದಿ : ಬೆಂಗಳೂರು | ಬಿಎಂಟಿಸಿಗೆ ಮತ್ತೊಂದು ಜೀವ ಬಲಿ ; ಬಸ್ ಹರಿದು ವೃದ್ಧ ಸಾವು



















