ಬೀದರ್ : ಔರಾದ್ ಪಟ್ಟಣದ ಲಿಡಕರ್ ಕಾಲನಿಯಲ್ಲಿ ಹಾಡಹಗಲೇ ಎರಡು ಕುಟುಂಬದ ನಡುವೆ ಮಾರಾಮಾರಿ ನಡೆದಿದ್ದು, ಮೂವರಿಗೆ ಗಂಭೀರ ಗಾಯವಾಗಿದೆ.
ಇರ್ಷಾದ್, ಅಹ್ಮದ್, ನಶೀಮಾಬೇಗಂ ಎಂಬುವವರು ಗಾಯಾಳುಗಳಾಗಿದ್ದಾರೆ. ವಾಟ್ಸಾಪ್ ಗ್ರುಪ್‌ನಲ್ಲಿ ಆಡಿಯೋವೊಂದನ್ನ ಹರಿಬಿಟ್ಟಿದ್ದಕ್ಕೆ 2 ಕುಟುಂಬಗಳ ನಡುವೆ ಗಲಾಟೆ ನಡೆದಿದ್ದು, ಹಲ್ಲೆಗೊಳಗಾದ ಕುಟುಂಬಸ್ಥರು ನಿನ್ನೆ ರಾತ್ರಿ ಆಡಿಯೋ ಹರಿಬಿಟ್ಟಿದ್ದನ್ನ ಪ್ರಶ್ನಿಸಿದ್ದರಂತೆ, ಪ್ರಶ್ನಿಸುವ ವೇಳೆ ಏಕಾಏಕಿ ಕಬ್ಬಿಣ ರಾಡ್‌ನಿಂದ ಮಾರಾಣಾಂತಿಕ ಹಲ್ಲೆ ಮಾಡಿದ್ದಾರೆಂದು ಗಾಯಾಳು ಕುಟುಂಬಸ್ಥರು ಆರೋಪಿಸಿದ್ದಾರೆ.
ಆಸ್ಪತ್ರೆಗೆ ಸಂಸದ ಸಾಗರ್ ಖಂಡ್ರೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಈ ಕುರಿತು ಔರಾದ್ ಪೊಲೀಸ್ ಠಾಣೆಯಲ್ಲಿ 8 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಇದನ್ನೂ ಓದಿ : ಕಲ್ಪತರು ನಾಡಿನಲ್ಲಿ ಸಾಮೂಹಿಕ ಸೀಮಂತ | ಗರ್ಭಿಣಿಯರಿಗೆ ಮಡಿಲು ತುಂಬಿದ ಹೆಬ್ಬಾಳ್ಕರ್



















