ಪಾಟ್ನಾ : ಬಿಹಾರ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ರಾಘೋಪುರ್‌ನ ಆರ್‌ಜೆಡಿ ಶಾಸಕ ತೇಜಸ್ವಿ ಯಾದವ್ ಆಯ್ಕೆಯಾಗಿದ್ದಾರೆ. ಇಂದು ನಡೆದ ಲೆಜಿಸ್ಟ್ರೇಟಿವ್ ಸಭೆಯಲ್ಲಿ ತೇಜಸ್ವಿ ಯಾದವ್‌ರನ್ನು ವಿರೋಧ ಪಕ್ಷದ ನಾಯಕನಾಗಿ ಆಯ್ಕೆ ಮಾಡಲಾಗಿದೆ.
ಇಂದು ನಡೆದ ಮಹತ್ವದ ಸಭೆಯಲ್ಲಿ ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್, ರಾಬ್ರಿ ದೇವಿ, ಮಿಸಾ ಭಾರತಿ ಸೇರಿದಂತೆ ಹಲವು ಆರ್‌ಜೆಡಿ ಪ್ರಮುಖರು ಉಪಸ್ಥಿತರಿದ್ದರು. ಬಿಹಾರದ ವಿಧಾನಭೆಯಲ್ಲಿ ಒಟ್ಟ 234 ಸ್ಥಾನಗಳಿವೆ. ಈ ಪೈಕಿ ಮಹಾಘಟಂಬದನ್ ಸೀಟು ಹಂಚಿಕೆಯಲ್ಲಿ ಗರಿಷ್ಠ ಪಾಲನ್ನು ಆರ್‌ಜೆಡಿ ಪಡೆದುಕೊಂಡಿತ್ತು. ಒಟ್ಟು 143 ಕ್ಷೇತ್ರದಲ್ಲಿ ಆರ್‌ಜೆಡಿ ಸ್ಪರ್ಧಿಸಿತ್ತು. ಈ ಪೈಕಿ 25 ಸ್ಥಾನ ಗೆದ್ದುಕೊಂಡಿದೆ.
ವಿಧಾನಸಭಾ ನಿಯಮಾವಳಿಗಳ ಪ್ರಕಾರ ವಿರೋಧ ಪಕ್ಷನಾಯಕನಾಗಲು ಒಟ್ಟು ವಿಧಾನಸಭಾ ಸ್ಥಾನಗಳ ಪೈಕಿ ಶೇಕಡಾ 10ರಷ್ಟು ಸ್ಥಾನ ಗೆದ್ದಿರಬೇಕು. ಇದೀಗ ಬಿಹಾರ ವಿಧಾನಸಭೆಯಲ್ಲಿ 243 ಸ್ಥಾನಗಳಿವೆ. ಇದರಲ್ಲಿ ಶೇಕಡಾ 10 ಎಂದರೆ ವಿರೋದ ಪಕ್ಷನಾಯಕನಾಗಲು ಕನಿಷ್ಠ 24 ಸ್ಥಾನ ಗೆದ್ದಿರಬೇಕು. ಹೀಗಾಗಿ ಆರ್‌ಜೆಡಿ ಪಕ್ಷ 25 ಸ್ಥಾನ ಗೆದ್ದಿದೆ. ಈಗಾಗಲೇ ಆರ್‌ಜೆಡಿ ಶಾಸಕರು ತಮ್ಮ ನಾಯಕನಾಗಿ ತೇಜಸ್ವಿ ಯಾದವ್ ಅವರನ್ನು ಆಯ್ಕೆ ಮಾಡಿದೆ. ಹೀಗಾಗಿ ವಿಧಾನಸಭೆಯಲ್ಲಿ ತೇಜಸ್ವಿ ಯಾದವ್‌ಗೆ ವಿರೋಧ ಪಕ್ಷದ ನಾಯಕನಾಗಲು ಎಲ್ಲಾ ಅರ್ಹತೆ ಇದೆ.
ಬಿಹಾರ ವಿಧಾನಸಭೆಗೆ 2 ಹಂತಗಳಲ್ಲಿ ನಡೆದ ಚುನಾವಣೆಯಲ್ಲಿ 143 ಸ್ಥಾನಗಳಲ್ಲಿ ಕೇವಲ 25 ಸ್ಥಾನಗಳನ್ನು ಆರ್‌ಜೆಡಿ ಗೆದ್ದಿದೆ. ಬಿಹಾರ ಚುನಾವಣೆ ಸೋಲಿನ ಬೆನ್ನಲ್ಲೇ ತೇಜಸ್ವಿ ಯಾದವ್ ಕುಟುಂಬದಲ್ಲಿ ಆಂತರಿಕ ಕಲಹವೂ ಏರ್ಪಟ್ಟಿದೆ. ಪಕ್ಷ ಮತ್ತು ಕುಟುಂಬವನ್ನು ತೊರೆಯುವುದಾಗಿ ತೇಜಸ್ವಿ ಯಾದವ್ ಸಹೋದರಿ ರೋಹಿಣಿ ಆಚಾರ್ಯ ಘೋಷಿಸಿದ್ದಾರೆ. ಈ ಬೆಳವಣಿಗೆ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ : ಪ್ರಧಾನಿ ಮೋದಿಯನ್ನು ಭೇಟಿಯಾದ ಸಿಎಂ ಸಿದ್ದರಾಮಯ್ಯ | ರಾಜ್ಯದ 5 ವಿಚಾರಗಳ ಬಗ್ಗೆ ಚರ್ಚೆ


















