ಬೆಂಗಳೂರು : ಕರ್ನಾಟಕದಲ್ಲಿ ಮ್ಯೂಸಿಕಲ್ ಚೇರ್ ಆಟ ನಡೀತಿದೆ. ಕೈನಾಯಕರು ತಮ್ಮ ಸ್ಥಾನ ಉಳಿಸಿಕೊಳ್ಳಲು ದೆಹಲಿಗೆ ಹೋಗ್ತಿದ್ದಾರೆ. ಇನ್ನೂ ಕೆಲವರು ಸ್ಥಾನ ಪಡೆಯಲು ಲಾಬಿ ಮಾಡ್ತಿದ್ದಾರೆಂದು ಎಂದು ಅಶೋಕ್ ಕಾಂಗೇಸಿಗರ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
ಬೆಂಗಳೂರಲ್ಲಿ ಮಾಧ್ಯಮಗಾರರೊಂದಿಗೆ ಮಾತನಾಡಿದ ಆರ್ ಅಶೋಕ್ ನವೆಂಬರ್ ನಲ್ಲಿ ಅಧಿಕಾರ ಹಸ್ತಾಂತರ ಆಗುತ್ತೆ. ಇಲ್ಲಾಂದ್ರೆ ದೆಹಲಿಯಲ್ಲಿ ಇವರು ಹೋಗಿ ಕೂರಲ್ಲ. ಕರ್ನಾಟಕದಲ್ಲಿ ಮ್ಯೂಸಿಕಲ್ ಚೇರ್ ಆಟ ನಡೀತಿದೆ. ತಮ್ಮ ಸ್ಥಾನ ಉಳಿಸಿಕೊಳ್ಳಲು ಖರ್ಗೆ ಭೇಟಿಯಾಗ್ತಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.
ಅಲ್ಲದೇ ಹಿರಿಯ ಆಕಾಂಕ್ಷಿ ಶಾಸಕರೂ ಸಹ ಭೇಟಿ ಆಗ್ತಿದ್ದಾರೆ. ಹಲವರು ಮಂತ್ರಿಯಾಗಲು ಹೊಸ ಬಟ್ಟೆ ಹೊಲಿಸಿದ್ದಾರೆ. ದೆಹಲಿಗೆ ಒಬ್ಬರು ಸ್ಥಾನ ಉಳಿಸಿಕೊಳ್ಳಲು ಹೋಗಿದ್ರೆ ಇನ್ನೊಬ್ರು ಸ್ಥಾನ ಪಡೆಯಲು ಹೋಗಿದ್ದಾರೆಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ : ವಿಜಯಪುರ | ಲಿವಿನ್ ರಿಲೇಷನ್ಶಿಪ್ನಲ್ಲಿದ್ದ ಮಹಿಳೆಯಿಂದಲೇ ಪ್ರಿಯಕರನ ಹತ್ಯೆ!



















