ಕಾರವಾರ: ಮನೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಮನೆಯಲ್ಲಿದ್ದ ವೃದ್ಧೆ ಸಜೀವ ದಹನವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನ ಹನಮಾಪುರದಲ್ಲಿ ನಡೆದಿದೆ.
ಪಕೀರವ್ವ ರಾಮಣ್ಣ ಆಲೂರು (70) ಮೃತ ವೃದ್ಧೆ. ಮನೆಯಲ್ಲಿ ಏಕಾಂಗಿಯಾಗಿ ವಾಸವಿದ್ದ ಪಕೀರವ್ವ ಮಲಗಿದ್ದ ವೇಳೆ ಮನೆಗೆ ಆಕಸ್ಮಿಕ ಬೆಂಕಿ ತಗಲಿದ ಪರಿಣಾಮ ಪಕೀರವ್ವ ಜೀವಂತ ಸುಟ್ಟುಹೋಗಿದ್ದಾರೆ. ಈ ಘಟನೆ ಸಂಬಂಧ ಮುಂಡಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ನಾಯಿ ಮುದ್ದಾಡುವ ನೆಪದಲ್ಲಿ ಯುವತಿಗೆ ಬ್ಯಾಡ್ ಟಚ್- ಕ್ಷಣಮಾತ್ರದಲ್ಲಿ ಯುವಕ ಜೂಟ್..



















